ಸಿಇಟಿ ದಾಖಲೆ ಅಪ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

0

ಬೆಂಗಳೂರು : ಸಿಇಟಿ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳಿಗೆ ಇಂದಿನಿಂದ ಮೂಲ ದಾಖಲೆಗಳನ್ನು ಅಪ್ಲೋಡ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಖುದ್ದು ಹಾಜರಾತಿಯ ಬದಲು ಆನ್ ಲೈನ್ ಮೂಲಕವೇ ವಿದ್ಯಾರ್ಥಿಗಳಿಗೆ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಕೆಇಎ ನೀಡಿರುವ ಲಿಂಕ್ ಬಳಸಿ ದಾಖಲೆ ಅಪ್ಲೋಡ್ ಮಾಡಬೇಕಾಗಿದೆ.

ವಿದ್ಯಾರ್ಥಿಗಳು ಪಡೆದಿರುವ ರಾಂಕ್ ಆಧಾರದ ಮೇಲೆ ನಿಗದಿತ ದಿನಾಂಕಗಳನ್ನು ತಮ್ಮ ಮೂಲ ದಾಖಲೆಯನ್ನು ಸಲ್ಲಿಸಬೇಕಾಗಿದೆ. ದಾಖಲೆ ಸಲ್ಲಿಸಲು ಸಪ್ಟೆಂಬರ್ 2ರಿಂದ ಸಪ್ಟೆಂಬರ್ 27ರ ವರೆಗೆ ರಾಂಕ್ ಆಧಾರದ ಮೇಲೆ ವೇಳಾಪಟ್ಟಿಯನ್ನು ಈಗಾಗಲೇ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ವಿದ್ಯಾರ್ಥಿಗಳು ಪ್ರತೀ ಅರ್ಜಿ ಪ್ರತಿಗಳು, ಸಿಇಟಿ ಮೂಲ ಪ್ರವೇಶ ಪತ್ರ, ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ, 7 ವರ್ಷದ ವ್ಯಾಸಾಂಗ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾಗಿದೆ.

ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಅರ್ಹತೆಗೆ ಅನುಗುಣವಾಗಿ ಪಿಡಿಎಫ್ ರೂಪದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ : http://kea.kar.nic.in/

ಸಿಇಟಿ ದಾಖಲೆ ಸಲ್ಲಿಸಲು ವೇಳಾಪಟ್ಟಿ :
ಸೆಪ್ಟೆಂಬರ್ 2 ಮತ್ತು 3 : 1ರಿಂದ 2,000 ರಾಂಕ್
ಸೆಪ್ಟೆಂಬರ್ 4 ರಿಂದ 6 : 2,001- 7,000 ರಾಂಕ್
ಸೆಪ್ಟೆಂಬರ್ 7 ರಿಂದ 9 : 7001ರಿಂದ 15,000 ರಾಂಕ್
ಸೆಪ್ಟೆಂಬರ್ 10ರಿಂದ 12- 15,001ರಿಂದ 25,000 ರಾಂಕ್
ಸೆಪ್ಟೆಂಬರ್ 13ರಿಂದ 15- 25,001ರಿಂದ 40,000 ರಾಂಕ್
ಸೆಪ್ಟೆಂಬರ್ 16ರಿಂದ 19- 40,001ರಿಂದ 70,000 ರಾಂಕ್
ಸೆಪ್ಟೆಂಬರ್ 20ರಿಂದ 23- 70,001ರಿಂದ 1,00,000 ರಾಂಕ್
ಸೆಪ್ಟೆಂಬರ್ 24ರಿಂದ 27 ರವರೆಗೆ ಅಂತಿಮ ರಾಂಕ್ ಪಡೆದವರು ದಾಖಲಾತಿ ಸಲ್ಲಿಸಬಹುದಾಗಿದೆ.

Leave A Reply

Your email address will not be published.