ಸಿಇಟಿ, ಎನ್ಇಇಟಿ, ನೀಟ್ ಪರೀಕ್ಷೆಗೆ ಆ್ಯಪ್ ಟ್ರೈನಿಂಗ್

0

ಬೆಂಗಳೂರು : ಸಿಇಟಿ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ), ಎನ್‌ಇಇಟಿ- ನೀಟ್ ( ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಜ್ಯ ಸರಕಾರ ಆನ್ ಲೈನ್ ಮೂಲಕ ತರಬೇತಿ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ‘ಗೆಟ್ ಸೆಟ್ ಗೋ’ ಅನ್ನೋ ಅತ್ಯಾಧುನಿಕ ತಂತ್ರಜ್ಞಾನದ ಆ್ಯಪ್ ನ್ನು ಅಭಿವೃದ್ದಿಗೊಳಿಸಿದೆ.

ಕೊರೊಬಾ ವೈರಸ್ ಸೋಂಕಿನಿಂದಾಘಿ ಸಿಇಟಿ, ಎನ್ಇಇಟಿ ಹಾಗೂ ನೀಟ್ ಪರೀಕ್ಷೆಗಳಿಗೆ ತೊಂದರೆಯಾಗಿದೆ. ಹೀಗಾಗಿ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತರಬೇತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಆ್ಯಪ್ ಮೊರೆ ಹೊಗಿದೆ.

ಗೆಟ್ ಸೆಟ್ ಗೋ ಇನ್ ಮೂವ್ ಆ್ಯಪ್ ನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ವಿವರಗಳು ಲಭ್ಯವಾಗಲಿದೆ. ತರಬೇತಿಗೆ ಸುಮಾರು 20,000 ರೂಪಾಯಿ ತರಬೇತಿ ಶುಲ್ಕ ವೆಚ್ಚವಾಗಲಿದೆ. ಆದರೆ ರಾಜ್ಯ ಸರಕಾರ ಉಚಿತವಾಗಿ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲು ಮುಂದಾಗಿದೆ.

ಹೀಗಾಗಿ ರಾಜ್ಯದ ಸುಮಾರು 1.90 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸಿಂಚು ಇನ್ಫೊಟೆಕ್ ಮತ್ತು ದೀಕ್ಷಾ ಆನ್‌ಲೈನ್ ಪರೀಕ್ಷೆಗೆ ಪೂರಕವಾದ ಎಲ್ಲ ಕಲಿಕಾ ವಿಷಯಗಳನ್ನು ಒಳಗೊಂಡ ವೆಬ್ ಪೋರ್ಟಲ್ ಮತ್ತು ಆ್ಯಂಡ್ರಾಯ್ಡ್‌ ಆ್ಯಪ್‌ ಇದಾಗಿದೆ.

ವೆಬ್ ಪೋರ್ಟಲ್ ಮತ್ತು ಗೂಗಲ್‌ ಪ್ಲೇಸ್ಟೋರ್‌ನಲ್ಲಿ‌‌ ಡೌನ್‌ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.

Leave A Reply

Your email address will not be published.