ಕೋಟ : ಕಾರಿಗೆ – ಟಿಪ್ಪರ್‌ ಢಿಕ್ಕಿ : ದೈಹಿಕ ಶಿಕ್ಷಕ ಗಣೇಶ್‌ ಶೆಟ್ಟಿ ಗಂಭೀರ

Kota Tipper Lorry Car Accident : ಕೋಟದ ವಿವೇಕ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ಗಣೇಶ್‌ ಶೆಟ್ಟಿ (40 ವರ್ಷ) ಎಂಬವರೇ ಗಾಯಗೊಂಡವರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Kota Tipper Lorry Car Accident : ಕೋಟ: ಲಾರಿ ಹಾಗೂ ಕಾರು ಚಾಲಕನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದೈಹಿಕ ಶಿಕ್ಷಕರೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ  ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿಕ ಕೋಟ ಮೂರು ಕೈ ಸಮೀಪದ ಉಪ್ಲಾಡಿಯಲ್ಲಿ ನಡೆದಿದೆ. ಕೋಟದ ವಿವೇಕ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ಗಣೇಶ್‌ ಶೆಟ್ಟಿ (40 ವರ್ಷ) ಎಂಬವರೇ ಗಾಯಗೊಂಡವರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Kota Tipper Lorry Car Accident Viveka High School Physical Director Ganesh Shetty is serious
Image Credit to Original Source

ಫೆಬ್ರವರಿ 6 ರಂದು ಮಧ್ಯಾಹ್ನದ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಗಣೇಶ್‌ ಶೆಟ್ಟಿ ಅವರು ತಮ್ಮ ಕಾರಿನಲ್ಲಿ ಕೋಟ ಮೂರು ಕೈಯಿಂದ ಅಚ್ಲಾಡಿಗೆ ತೆರಳುತ್ತಿದ್ದರು. ಇದೇ ವೇಳೆಯಲ್ಲಿ ಕೋಟದ ಕಡೆಗೆ ವೇಗವಾಗಿ ಸಾಗುತ್ತಿದ್ದ ಟಿಪ್ಪರ್‌ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ದೈಹಿಕ ಶಿಕ್ಷಕ ಗಣೇಶ್‌ ಶೆಟ್ಟಿ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : 30 ವರ್ಷದ ಹೋಮ್‌ ಲೋನ್‌ 15 ವರ್ಷದಲ್ಲೇ ತೀರಿಸಿ : ಜೊತೆಗೆ 32 ಲಕ್ಷ ರೂಪಾಯಿ ಬಡ್ಡಿ ಉಳಿಸಿ

Kota Tipper Lorry Car Accident Viveka High School Physical Director Ganesh Shetty is serious
Image Credit to Original Source

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕೋಟ ಪೊಲೀಸ್ ಠಾಣೆಯ ಎಸ್ಐ ಸುಧಾ ಪ್ರಭು ಹಾಗೂ ಸಿಬ್ಬಂದಿ ಅಶೋಕ್ ಕುಮಾರ್ ಹಾಗೂ ಇತರರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಘಟನೆಗೆ ಟಿಪ್ಪರ್‌ ಚಾಲಕನ ವೇಗ ಹಾಗೂ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ : ವಂದೇ ಭಾರತ್‌ ರೈಲಿನಲ್ಲಿನ್ನು ಮಲಗಿಕೊಂಡೇ ಪ್ರಯಾಣ : ಮಾರ್ಚ್‌ಗೆ ಪ್ರಯಾಣಿಸಲಿದೆ ವಂದೇ ಭಾರತ್ ಸ್ಲೀಪರ್‌ ರೈಲು

Kota Tipper Lorry Car Accident Viveka High School Physical Director Ganesh Shetty is serious
Image Credit to Original Source

ಇದನ್ನೂ ಓದಿ :  ಕೇವಲ 50 ರೂ.ಹೂಡಿಕೆ ಮಾಡಿದ್ರೆ 35 ಲಕ್ಷ ರೂ. ಸಿಗುತ್ತೆ : ಅಂಚೆ ಇಲಾಖೆ ಗ್ರಾಮ ಸುರಕ್ಷಾ ಯೋಜನೆ

ಇನ್ನು ಅಪಘಾತ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಆದರೆ ಯಾರೊಬ್ಬರೂ ಕೂಡ ಪರಿಚಿತರೇ ಆಗಿರುವ ದೈಹಿಕ ಶಿಕ್ಷಕರ ನೆರವಿಗೆ ದಾವಿಸದೇ ಇರುವ ಕುರಿತು ಜೀವನ್‌ ಮಿತ್ರ ಅಂಬ್ಯುಲೆನ್ಸ್‌ ಚಾಲಕ ನಾಗರಾಜ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kota: Tipper Lorry Car Accident Viveka High School Physical Director Ganesh Shetty is serious

Comments are closed.