ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶಿಕ್ಷಣ ಇಲಾಖೆಯಿಂದ ನಿಯಮ ಜಾರಿ : ಧ್ವಜಾರೋಹಣಕ್ಕೆ ವಿದ್ಯಾರ್ಥಿಗಳನ್ನು ಬಳಸುವಂತಿಲ್ಲ
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಲವು ಮಹತ್ವದ ನಿಯಮಗಳನ್ನು ಜಾರಿಗೆ ತಂದಿದೆ. ರಾಷ್ಟ್ರೀಯ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಮಾರ್ಗಸೂಚಿ ಹೊರಡಿಸಲಾಗಿದೆ.
ಇನ್ನು ಈ ನಿಯಮಗಳು ಯಾವುದು ಅನ್ನೋದನ್ನ ನೋಡೋದಾದ್ರೆ, ಧ್ವಜ ಏರಿಸಲು ಹಾಗೂ ಇಳಿಸುವಾಗ ಮಕ್ಕಳನ್ನು ಬಳಕೆ ಮಾಡಬಾರದು, ಧ್ವಜಾರೋಹಣ ಸಂದರ್ಭದಲ್ಲಿ ಬಾವುಟ ಸಿಕ್ಕಿ ಹಾಕಿಕೊಂಡಲ್ಲಿ ಮಕ್ಕಳು ಧ್ವಜಸ್ತಂಭ ಏರಿ ಸರಿಪಡಿಸುವಂತಿಲ್ಲ. ಧ್ವಜಾರೋಗಣ ಸಂದರ್ಭದಲ್ಲಿ ವಿದ್ಯುತ್ ತಂತಿ ಹಾದು ಹೋಗದಂತೆ ಎಚ್ಚರ ವಹಿಸಬೇಕು ಮಕ್ಕಳು ಕಾರ್ಯಕ್ರಮಕ್ಕೆ ತೆರಳಲು ಬಳಸುವ ವಾಹನಗಳ ಪರಿಶೀಲನೆ ನಡೆಸಿರಬೇಕು. ಹಾಗೂ ವಾಹನ ಚಾಲಕರು ವೇಗಮಿತಿಯ ನಿಯಮ ಪಾಲಿಸುವುದು ಕಡ್ಡಾಯವಾಗಿರಲಿದೆ.
ಇದನ್ನೂ ಓದಿ: ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಭಾಗ್ಯ : ಶೀಘ್ರದಲ್ಲೇ ಬರಲಿದೆ ಹೊಸ ನಿಯಮ
ಆಹಾರ ತಯಾರಿಸುವ ಸ್ಥಳಗಳಲ್ಲಿ ಮಕ್ಕಳ ಪ್ರವೇಶ ನಿರ್ಬಂಧಿಸಬೇಕು.ಗ್ಯಾಸ್ ಒಲೆಗಳನ್ನು ಪರಿಶೀಲಿಸಿ ಬಳಿಕ ಅಡುಗೆಗೆ ಬಳಸಿಕೊಳ್ಳಬೇಕು. ಮಕ್ಕಳು ಕುಳಿತುಕೊಳ್ಳುವ ಸ್ಥಳಗಳಲ್ಲಿ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ಇರದಂತೆ ನೋಡಿಕೊಳ್ಳಬೇಕು.ಕಾರ್ಯಕ್ರಮ ನಡೆಯುವ ಸ್ಥಳದಿಂದ 100 ಮೀಟರ್ ಅಂತರದಲ್ಲಿ ವಾಹನ ಪಾರ್ಕಿಂಗ್ಗೆ ಅವಕಾಶ ಸೇರಿದಂತೆ ಇನ್ನೂ ಅನೇಕ ನಿಯಮಗಳನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿದೆ.



