PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳ ಏರಿಕೆಯ ಭೀತಿ ನಡುವೆಯೇ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ದಿನಾಂಕವನ್ನು ( PUC 2022 Exam Time Table ) ಪ್ರಕಟಿಸಿದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಮೊದಲನೇ ಹಾಗೂ ಎರಡನೇ ಅಲೆಯ ಕಾರಣಕ್ಕೆ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಅಸ್ತವ್ಯಸ್ಥಗೊಂಡಿತ್ತು. ಇದರಿಂದ ಮಕ್ಕಳು ಪರೀಕ್ಷೆಯ ಸಂದರ್ಭದಲ್ಲಿ ಒತ್ತಡ ಎದುರಿಸುವಂತಾಗಿತ್ತು.

ಹೀಗಾಗಿ ಈ ವರ್ಷ ಶೈಕ್ಷಣಿಕ ವರ್ಷಾರಂಭದಿಂದಲೂ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕಾಳಜಿ ವಹಿಸಿದ್ದ ಶಿಕ್ಷಣ ಇಲಾಖೆ ಈಗ ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕವನ್ನು ಅಂದಾಜು ಎರಡು ತಿಂಗಳ ಮೊದಲೇ ನಿಗದಿಪಡಿಸಿ ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಫೆ.17ರಿಂದ ಮಾ.23ರವರೆಗೆ ನಡೆಯಲಿದ್ದು, ಇದಾದ ಬಳಿಕದ್ಚಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆ ಮಾ.14ರಿಂದ ಮಾ.25ರವರೆಗೆ ಪರೀಕ್ಷೆ ನಿಗದಿ ಪಡಿಸಿದ ಪಿಯು ಬೋರ್ಡ್ ಪ್ರಕಟಣೆ ಹೊರಡಿಸಿದೆ. ಇದಾದ ಬಳಿಕ ದ್ವಿತೀಯ ಪಿಯುಸಿ ಅಂತಿಮಪರೀಕ್ಷೆ ಆರಂಭವಾಗಲಿದೆ. ಏಪ್ರಿಲ್ 16ರಂದು ಪರೀಕ್ಷೆ ಆರಂಭವಾಗಲಿದ್ದು ಮೇ 4 ಕ್ಕೆ ಮುಕ್ತಾಯವಾಗಲಿದೆ.

ಏಪ್ರಿಲ್ 16 ರಂದು ಗಣಿತ, ಶಿಕ್ಷಣ, ಮೂಲ ಗಣಿತ

ಏ.18ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಏ. 19ರಂದು ಮಾಹಿತಿ ತಂತ್ರಜ್ಞಾನ

ಏ. 20ರಂದು ಇತಿಹಾಸ, ಭೌತಶಾಸ್ತ್ರ

ಏ. 21ರಂದು ದ್ವಿತೀಯ ಭಾಷೆ

ಏ.22ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಏ. 23ರಂದು ರಾಸಾಯನಶಾಸ್ತ್ರ, ಮನಃಶಾಸ್ತ್ರ, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ

ಏ.25ರಂದು ಅರ್ಥಶಾಸ್ತ್ರ

ಏ. 26ರಂದು ಹಿಂದಿ

ಏ. 28ರಂದು ಐಚ್ಛಿಕ ಕನ್ನಡ, ಅಕೌಂಟ್ಸ್, ಭೂವಿಜ್ಞಾನ

ಏ. 29ರಂದು ಕನ್ನಡ

ಏ. 30ರಂದು ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್

ಮೇ. 02 ಭೂಗೋಳಶಾಸ್ತ್ರ, ಜೀವಶಾಸ್ತ್ರ

ಮೇ. 04 ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.

ಸದ್ಯ ರಾಜ್ಯದಲ್ಲಿ ಪಾಸಿಟಿವಿಟಿ ದರ ಆಧರಿಸಿದ ಬೆಂಗಳೂರಿನಲ್ಲಿ 1 ರಿಂದ 9 ನೇ ತರಗತಿಯ ಮಕ್ಕಳಿಗೆ ರಜೆ ನೀಡಲಾಗಿದ್ದರೂ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸದೇ ಆಫ್ ಲೈನ್ ಕ್ಲಾಸ್ ನಡೆಸಲು ಅವಕಾಶ ನೀಡಲಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ವಾಕ್ಸಿನ್ ಕೂಡ ನೀಡಲಾಗುತ್ತಿದ್ದು, ಯಾವುದೇ ಭಯವಿಲ್ಲದೇ ಮುಕ್ತವಾಗಿ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯಲ್ಲಿ ತೊಡಗಿಕೊಳ್ಳಲು ಅಗತ್ಯ ವಾತಾವರಣ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಇದನ್ನೂ ಓದಿ : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

ಇದನ್ನೂ ಓದಿ : ಕೊರೊನಾ ಮಹಾಸ್ಪೋಟ : 41 ಸಾವಿರ ಹೊಸ ಕೇಸ್‌, ಪಾಸಿಟಿವಿಟಿ ದರ ಶೇ.22 ಕ್ಕೆ ಏರಿಕೆ

ಇದನ್ನೂ ಓದಿ : ಕರಾವಳಿಯಲ್ಲಿ ಕೊರೊನಾ ಹೆಚ್ಚಳಕ್ಕೆ ಶಾಲೆಗಳೇ ಕಾರಣ : ಖಾಸಗಿ ಒತ್ತಡ, ಶಾಲೆ ಬಂದ್‌ ಮಾಡಲು ಸಚಿವರೇ ಅಡ್ಡಿ

( Karnataka 2nd PUC 2022 Exam Time Table Released )

Comments are closed.