Sreeja Kalyaan Dhev : ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಬಾಳಲ್ಲಿ ಬಿರುಗಾಳಿ: ಎರಡನೇ ಮದುವೆ ಮುರಿದುಕೊಂಡ ಶ್ರೀಜಾ

ತಮಿಳು ಚಿತ್ರರಂಗದಿಂದ ಶಾಕಿಂಗ್ ನ್ಯೂಸ್ ವೊಂದು ಹೊರಬಿದ್ದ ಬೆನ್ನಲ್ಲೇ ಟಾಲಿವುಡ್ ಅಂಗಳದಲ್ಲೂ ಮತ್ತೊಂದು ಸೆಲಿಬ್ರೆಟಿ ಡಿವೋರ್ಸ್ ಸದ್ದು ಮಾಡಲಾರಂಭಿಸಿದೆ. ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ಎರಡನೇ ಮದುವೆಯನ್ನೂ ಮುರಿದುಕೊಂಡಿದ್ದಾರೆ ಎನ್ನಲಾಗಿದ್ದು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಿಂದ ಎರಡನೇ ಪತಿಯ ಹೆಸರನ್ನು (Sreeja Kalyaan Dhev ) ಕೈಬಿಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಯ ಕಿರಿಯ ಪುತ್ರಿ ಶ್ರೀಜಾ ತಮ್ಮ ಎರಡನೇ ಮದುವೆಯಿಂದಲೂ ಹೊರಬಂದಂತಿದ್ದು, ತಮ್ಮ ಹೆಸರಿನ ಜೊತೆಗಿದ್ದ ಪತಿಯ ಹೆಸರನ್ನು ಕೈಬಿಟ್ಟು ತಮ್ಮ ಮೂಲ ಹೆಸರಿಗೆ ಮರಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೀಗಾಗಿ ರಜನಿಕಾಂತ್ ಪುತ್ರಿ ಡಿವೋರ್ಸ್ ಬೆನ್ನಲ್ಲೇ ಮೆಗಾಸ್ಟಾರ್ ಚಿರಂಜೀವಿ ಎರಡನೇ ಪುತ್ರಿಯ ಡಿವೋರ್ಸ್ ಆಗಿರಬಹುದೆಂಬ ಸಂಗತಿಯೂ ಟಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇನ್ ಸ್ಟಾಗ್ರಾಂನಲ್ಲಿ ಶ್ರೀಜಾ ಕಲ್ಯಾಣ್ ಎಂದಿದ್ದ ಹೆಸರನ್ನು ಈಗ ಶ್ರೀಜಾ ಕೊನಿಡೆಲಾ ಎಂದು ಬದಲಾಯಿಸಿಕೊಂಡಿದ್ದಾರೆ ಚಿರಂಜೀವಿ ಪುತ್ರಿ. ಅಲ್ಲದೇ ಶ್ರೀಜಾ ಎರಡನೇ ಪತಿ ಕಲ್ಯಾಣ್ ದೇವ್ ಅವರನ್ನು ಅನ್ ಫಾಲೋ ಕೂಡ ಮಾಡಿದ್ದಾರೆ. ಕೆಲ ತಿಂಗಳುಗಳಿಂದ ಶ್ರೀಜಾ ಹಾಗೂ ನಟ ಕಲ್ಯಾಣ ದೇವ್ ದಾಂಪತ್ಯ ಜೀವನ ಸರಿ ಇಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪೂರಕ ಎಂಬಂತೆ ಕಲ್ಯಾಣ್ ದೇವ್ ಅಭಿನಯದ ಸೂಪರ್ ಮಚ್ಚಿ ಸಿನಿಮಾದ ಪ್ರಮೋಶನ್ ವೇಳೆಯೂ ಚಿರಂಜೀವಿ ಕುಟುಂಬ ಗೈರಾಗಿತ್ತು.ಮಾತ್ರವಲ್ಲ ಸಿನಿಮಾ ಪೋಸ್ಟರ್ ಅಥವಾ ಟ್ರೇಲರ್ ನ್ನು ಚಿರಂಜೀವಿ ಕುಟುಂಬದ ಸದಸ್ಯರು ಶೇರ್ ಮಾಡಿರಲಿಲ್ಲ.

ಈಗ ಶ್ರೀಜಾ ಸೋಷಿಯಲ್ ಮೀಡಿಯಾ ಅಕೌಂಟ್ ನಿಂದ ಪತಿಯ ಹೆಸರನ್ನು ಕೈಬಿಟ್ಟಿರೋದು ಮತ್ತಷ್ಟು ಅನುಮಾನ ಮೂಡಿಸಿದೆ. 2016 ರಲ್ಲಿ ಶ್ರೀಜಾ ಹಾಗೂ ಕಲ್ಯಾಣದೇವ್ ಮದುವೆಯಾಗಿದ್ದು, ಈ ದಂಪತಿಗೆ ಒಂದು ಹೆಣ್ಣು ಮಗುವಿದೆ. ಕಲ್ಯಾಣದೇವ್ ಅವರನ್ನು ಮದುವೆಯಾಗೋದಕ್ಕೂ ಮುನ್ನ ಶ್ರೀಜಾ, ಸಿರೀಶ್ ಭಾರದ್ವಾಜ್ ಎಂಬುವರನ್ನು ಮದುವೆಯಾಗಿದ್ದು ಒಬ್ಬಳು ಮಗಳಿದ್ದಾಳೆ.

2011 ರಲ್ಲಿ ಸಿರೀಶ್ ಭಾರದ್ವಾಜ್ ರಿಂದ ವಿಚ್ಚೇಧನ ಪಡೆದಿದ್ದ ಶ್ರೀಜಾ 2016 ರಲ್ಲಿ ಕಲ್ಯಾಣ್ ದೇವ್ ರನ್ನು ಮದುವೆಯಾಗಿದ್ದಳು. ಕರ್ನಾಟಕದ ದೇವನಹಳ್ಳಿಯಲ್ಲಿ ಇರುವ ಫ್ಯಾಮಿಲಿ ಫಾರ್ಮ್ ಹೌಸ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಕಲ್ಯಾಣ್ ದೇವ್ ಹಾಗೂ ಶ್ರೀಜಾ ಮದುವೆ ನಡೆದಿತ್ತು. ಮೊದಲ ಪತಿ ಕುಟುಂಬದ ವಿರುದ್ಧ ಶ್ರೀಜಾ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಲ್ಲದೇ ಕೇಸ್ ಕೂಡ ದಾಖಲಿಸಿದ್ದರು.

ಇದನ್ನೂ ಓದಿ : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು ಮೂರು ಸಿನಿಮಾ ಆಫರ್

ಇದನ್ನೂ ಓದಿ : ರಜನಿಕಾಂತ್‌ ಪುತ್ರಿ ಐಶ್ವರ್ಯ ಹಾಗೂ ನಟ ಧನುಷ್‌ ವಿಚ್ಚೇಧನ

(megastar Chiranjeevi daughter Sreeja to divorce from husband Kalyaan Dhev )

Comments are closed.