ವಿಜ್ಞಾನ, ಗಣಿತ ಪಠ್ಯ ಪೂರ್ಣಕ್ಕೆ ಮಾತ್ರವೇ ಒತ್ತು : ಸಚಿವ ಬಿ.ಸಿ.ನಾಗೇಶ್‌

ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ ತಡವಾಗಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿದೆ. ಆದರೆ ಶಾಲೆಯಲ್ಲಿ ಪಠ್ಯ ಪುಸ್ತಕಗಳಿಗೆ ಮಾತ್ರವೇ ಒತ್ತು ನೀಡುತ್ತಿಲ್ಲ. ಬದಲಾಗಿ ಗಣಿತ ಮತ್ತು ವಿಜ್ಞಾನ ಪಠ್ಯವನ್ನು ಶೇ.100 ರಷ್ಟು ಪೂರ್ಣಗೊಳಿಸಲು ಮಾತ್ರವೇ ಒತ್ತು ನೀಡುತ್ತೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಕಡಿತ ಮಾಡಿದ್ರೆ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ವಿಜ್ಞಾನ ಹಾಗೂ ಗಣಿತ ಪಠ್ಯವನ್ನಷ್ಟೇ ಶೇ.೧೦೦ರಷ್ಟು ಪೂರ್ಣಗೊಳಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೆ ಪಠ್ಯಕ್ಕೆ ಮಾತ್ರವೇ ಒತ್ತು ಕೊಡುವ ಪ್ರಶ್ನೆಯೇ ಇಲ್ಲ. ಆಟದ ಮೂಲಕವೂ ಪಾಠ ಮಾಡಿಸುವ ಕಾರ್ಯವನ್ನು ಮಾಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಂತಹ ಅಂಶಗಳನ್ನು ಅಳವಡಿಸಿ ಕೊಳ್ಳಲಾಗುತ್ತಿದೆ ಎಂದು ನಾಗೇಶ್‌ ಅವರು ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಮಾರ್ಗಸೂಚಿಯನ್ನು ಶಾಲೆಯಲ್ಲಿ ಪಾಲಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಮಕ್ಕಳ ಮೇಲೆ ಹೊರೆಯಾಗುತ್ತಿದೆ. ವಿದ್ಯಾರ್ಥಿಗಳು ಬೆಳಗಿನಿಂದ ಸಂಜೆಯ ವರೆಗೆ ಮಾಸ್ಕ್‌ ಧರಿಸಿ, ಮಾರ್ಗಸೂಚಿಯನ್ನು ಪಾಲಿಸಿ ವಿದ್ಯಾಭ್ಯಾಸವನ್ನು ಪಡೆಯುವುದು ಕಷ್ಟಸಾಧ್ಯವಾಗುತ್ತಿದೆ. ಇದೇ ಕಾರಣದಿಂದಲೇ ಪೋಷಕರು, ಶಿಕ್ಷಕರು ಪಠ್ಯದ ಹೊರೆಯನ್ನು ಕಡಿಮೆ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಕೊರೊನಾ ಹೊತ್ತಲ್ಲೇ ಸಂಪೂರ್ಣ ಪಠ್ಯ ಪೂರ್ಣಗೊಳಿಸುವಂತೆ ಒತ್ತಡ ಹೇರುವುದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಕೂಗು ಕೇಳಿಬಂದಿದೆ.

ಇದನ್ನೂ ಓದಿ : School Fees : ಶೇ.15 ರಷ್ಟು ಬೋಧನಾ ಶುಲ್ಕ ವಾಪಾಸ್‌ ಮಾಡಿ : ಖಾಸಗಿ ಶಾಲೆಗಳಿಗೆ ರಾಜ್ಯ ಸರಕಾರದ ಆದೇಶ

ಇದನ್ನೂ ಓದಿ : ದ್ವಿತೀಯ PUC ಪರೀಕ್ಷೆ ಮುಂದೂಡಿಕೆ : ಡಿ.13 ರಿಂದ ರಾಜ್ಯಾದ್ಯಂತ ಏಕಕಕಾಲದಲ್ಲಿ ಪರೀಕ್ಷೆ

( empasis on full text only mathematics and science subjects in Karnataka school bc Nagesh )

Comments are closed.