EXAMS HIJAB : ಹಿಜಾಬ್ ಬಿಚ್ಚಿಟ್ಟು ಪರೀಕ್ಷೆಗೆ ಬನ್ನಿ: ವಿದ್ಯಾರ್ಥಿಗಳಿಗೆ ಸರ್ಕಾರದ ಸ್ಪಷ್ಟ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಹೊಸ ಜಾಬ್ ಸಂಘರ್ಷಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಹೈಕೋರ್ಟ್ ಹಿಜಾಬ್ ಮುಸ್ಲಿಂ ಧಾರ್ಮಿಕ ಅಂಗವಲ್ಲ.‌ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ( EXAMS )ಆರಂಭಗೊಂಡಿದ್ದು, ಹಿಜಾಬ್ (HIJAB) ಗೆ ಅವಕಾಶವಿಲ್ಲ ಎಂದು ಆದೇಶಿಸಿದೆ. ಹೀಗಿದ್ದರೂ ಹಲವೆಡೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಪರೀಕ್ಷೆಗಳು ಆರಂಭ ಗೊಂಡಿದ್ದು, ಹಿಜಾಬ್ ಗೆ ನೋ ಎನ್ನುವ ಆದೇಶ ಹೊರಡಿಸಿದೆ ಶಿಕ್ಷಣ ಇಲಾಖೆ.

ಹೌದು ಕರ್ನಾಟಕ ಸರ್ಕಾರ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಿಜಾಬ್ ಧರಿಸಿಕೊಂಡು ಬರುವಂತೆ ಇಲ್ಲ ಎಂದು ಆದೇಶ ಹೊರಡಿಸಿದೆ. ಸರ್ಕಾರದಿಂದ ಅಧಿಕೃತ ಸುತ್ತೋಲೆ ಹೊರಡಿಸ ಲಾಗಿದೆ‌. ರಾಜ್ಯದಲ್ಲಿ ಸೋಮವಾರದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಸಮವಸ್ತ್ರ ಧರಿಸೋದು ಕಡ್ಡಾಯವಾಗಿದೆ. ಮಾತ್ರವಲ್ಲ ಪರೀಕ್ಷಾ ಕೊಠಡಿಗಳಿಗೆ ಕೇವಲ ಸರ್ಕಾರ ನಿಗಧಿ ಪಡಿಸಿದ ಸಮವಸ್ತ್ರ ಮಾತ್ರ ವಿದ್ಯಾರ್ಥಿಗಳು ಧರಿಸಿಕೊಂಡು ಪರೀಕ್ಷೆಗೆ ಬರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಮಾತ್ರವಲ್ಲ ಸರ್ಕಾರಿ ಸ್ಕೂಲ್ ಗಳನ್ನು ಹೊರತುಪಡಿಸಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಾಲೆಯೂ ನಿರ್ಧರಿಸಿದ ಸಮವಸ್ರ್ರ ಧರಿಸಿಕೊಂಡು ಬರುವಂತೆ ಸೂಚಿಸಿದೆ.‌ಆದರೆ ಯಾವುದೇ ಕಾರಣಕ್ಕೂ ಪರೀಕ್ಷಾ ಕೊಠಡಿ ಒಳಗೆ ಹಿಜಾಬ್ ಧರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮಧ್ಯೆ ಈಗಾಗಲೇ ಹಿಜಾಬ್ ಸಂಘರ್ಷ ತೀವ್ರ ತಾರಕಕ್ಕೇರಿದ್ದು, ಯಾವುದೇ ಕಾರಣ ಕ್ಕೂ ಪರೀಕ್ಷಾ ಹಾಲ್ ಗಳಲ್ಲಿ ಹಿಜಾಬ್ ಗೆ ಅವಕಾಶ ನೀಡೋದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆದರೆ ಉಡುಪಿಯಲ್ಲಿ ಹಿಜಾಬ್ ಗಾಗಿ ಅಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಹುಡುಗಿಯರು ಸೇರಿದಂತೆ ರಾಜ್ಯದ ಹಲವೆಡೆಯ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೇ ಪರೀಕ್ಷೆಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ಇದರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಹಲವು ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗುವ ಸಾಧ್ಯತೆ ಇದೆ. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲೂ ಹಿಜಾಬ್ ಗೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಅಲ್ಲೂ ಕೂಡ ಒಂದಿಷ್ಟು ವಿದ್ಯಾರ್ಥಿಗಳು ಹಿಜಾಬ್ ಹೆಸರಿನಲ್ಲಿ ಪರೀಕ್ಷೆಗೆ ಗೈರಾಗುವ ಸಾಧ್ಯತೆ ಇದೆ.

ಇನ್ನೊಂದೆಡೆ ಹಿಜಾಬ್ ಗಾಗಿ ಆಗ್ರಹಿಸಿದ್ದ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪು ಆಧರಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಮಾತ್ರ ತುರ್ತು ವಿಚಾರಣೆಗೆ ನಿರಾಕರಿಸಿದ್ದು, ಇದರಿಂದ ಸುಪ್ರೀಂ ತೀರ್ಪು ಕೂಡ ದ್ವಿತೀಯ ಪಿಯುಸಿ ಪರೀಕ್ಷೆ ಒಳಗೆ ಬರೋದು ಬಹುತೇಕ ಅನುಮಾನವಾಗಿದೆ.

ಇದನ್ನೂ ಓದಿ : ಸಿಬಿಎಸ್‌ಇ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಕ್ಲಿಕ್ ಮಾಡಿ

ಇದನ್ನೂ ಓದಿ : ಶಿಕ್ಷಕರ ಬದಲು ತರಗತಿಗೆ ಬಂತು ರೋಬೋ : ಮೊದಲ‌ ಪ್ರಯೋಗ ಯಶಸ್ವಿ

( Karnataka Government Directions Hijab Not Allow Exams )

Comments are closed.