siddaramaiah : ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಲ್ವಾ, ಹೊಸ ವಿವಾದಕ್ಕೆ ನಾಂದಿ ಹಾಡಿದ ಸಿದ್ಧರಾಮಯ್ಯ

ಹಿಜಾಬ್ ಬೆಂಬಲಿಸುವ ಭರದಲ್ಲಿ ಮಾಜಿಸಿಎಂ ಸಿದ್ಧರಾಮಯ್ಯ ಹೊಸದೊಂದು ವಿವಾದಕ್ಕೆ ಸಿಲುಕಿದ್ದಾರೆ. ಸದನದಲ್ಲಿ ಹಾಗೂ ಸದನದ ಹೊರಗೆ ಹಿಜಾಬ್ ನ್ನು ಬೆಂಬಲಿಸುವ‌ ಮಾತನ್ನಾಡಿದ್ದ ಸಿದ್ಧರಾಮಯ್ಯ, ಹಿಂದೂ ಹೆಣ್ಣುಮಕ್ಕಳು ತಲೆ‌ ಮೇಲೆ ಸೆರಗು ಹಾಕಿಕೊಳ್ಳೋದಿಲ್ಲವೇ, ಜೈನ್ ಹೆಣ್ಣುಮಕ್ಕಳು ತಲೆ‌‌ಮೇಲೆ ಸೆರಗು ಹಾಕಿಕೊಳ್ಳೋದಿಲ್ಲವೇ? ಅಷ್ಟೇ ಯಾಕೇ ಮಠಾಧೀಶರುಗಳು ತಲೆಮೇಲೆ ವಸ್ತ್ರ ಹಾಕಲ್ವೇ ಎಂದು ಪ್ರಶ್ನಿಸಿದ್ದಾರೆ ?

ಸಿದ್ಧರಾಮಯ್ಯನವರ ಈ ಮಾತು ಈಗ ವಿವಾದ ಸೃಷ್ಟಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಗೆ ಬಾಳೆ ಹೊನ್ನೂರಿನ ರಂಭಾಪುರಿ ಶ್ರೀಗಳ ಟಾಂಗ್ ನೀಡಿದ್ದಾರೆ. ಹೂವಿನಮಡು ಗ್ರಾಮದಲ್ಲಿ ಮಾತನಾಡಿದ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು, ಪೇಟ ಹಾಗೂ ಬಟ್ಟೆ ವಿಚಾರವಾಗಿ ಪ್ರಭಲ ರಾಜಕಾರಣಿ ಸಿದ್ಧರಾಮಯ್ಯನವರು ಹೀಗೆ ಹೇಳುವುದು ಸರಿಯಲ್ಲ. ವಿವಿಧತೆಯಲ್ಲಿ ಏಕತೆಯನ್ನು ಬೆಳೆಸುವ ಕೆಲಸ ರಾಜಕಾರಣಿಗಳು ಮಠಾಧೀಶರು, ಮಾಡಬೇಕುರಾಜಕೀಯ ಲಾಭಕ್ಕಾಗಿ ಓಲೈಕೆಗಾಗಿ ಈ ರೀತಿ ಕ್ಷುಲ್ಲಕ ಹೇಳಿಕೆ ನೀಡುವುದು ಸರಿಯಲ್ಲ. ಇದು ಜಾತಿ ಜಾತಿಗಳ ನಡುವೆ ಘರ್ಷಣೆಗೆ ದಾರಿಯಾಗುತ್ತದೆ. ಅವರವರ ಪರಂಪರೆ ಆಚರಣೆ ಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಮಾತ್ರವಲ್ಲ ಮನೆಯಲ್ಲಿ ತಮ್ಮ ತಮ್ಮ ಧರ್ಮವನ್ನು ಆಚರಣೆ ಮಾಡುವುದರಲ್ಲಿ ತಪ್ಪೇನಿಲ್ಲ. ಸಾರ್ವತ್ರಿಕ ಬದುಕಿನಲ್ಲಿ ಶೈಕ್ಷಣಿಕ ಬದುಕಿನಲ್ಲಿ ಕೋರ್ಟ್ ಸಮವಸ್ತ್ರ ಕಡ್ಡಾಯ ಅಂತ ಹೇಳಿದೆ.‌ಆದರೂ ಕೆಲವರು ಪ್ರಚೋದನಕಾರಿ ಹೇಳಿಕೆ ಕೊಡುತ್ತಿದ್ದಾರೆ.ಇದು ಸರಿಯಲ್ಲ. ಕೋರ್ಟ್ ಅದೇಶ ಪಾಲನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ.ಸಿದ್ದರಾಮಯ್ಯ ಆತ್ಮವಲೋಕನ ಮಾಡಿಕೊಳ್ಳಬೇಕು.ಒಂದು ವರ್ಷದೊಳಗೆ ಚುನಾವಣೆ ಬರಲಿದೆ.ಈ ಹಿಂದೆ ವೀರಶೈವ ಲಿಂಗಾಯತ ಇಬ್ಬಾಗ ಮಾಡಲು ಹೋಗಿ ಕಾಂಗ್ರೆಸ್ ಪೆಟ್ಟು ತಿಂದಿದ್ದೀರಿ. ಮತ್ತೆ ಈ ರೀತಿ ವಿವಾದದ ಮೂಲಕ ಹೇಳಿ ಜನರ ಭಾವನೆ ಕೆಡೆಸುವುದು ಸರಿಯಲ್ಲ ಎಂದಿದ್ದಾರೆ.

ಮಾತ್ರವಲ್ಲ ಸ್ವಾಮೀಜಿಗಳು ಪೇಠ ಧರಿಸುವುದು ಈಗಿನದಲ್ಲ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.ತಲೆ ಮೇಲೆ ಕಟ್ಟುವಂತಹ ಗೌರವಾನ್ವಿತ ಸಂಕೇತವಾಗಿದೆ. ಸ್ವಾಮಿ ವಿವೇಕಾನಂದ ಕೂಡ ಪೇಟವನ್ನು ಧರಿಸಿದ್ದರು. ಅದನ್ನು ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ.ರಂಭಾಪುರಿ ಜಗದ್ಗುರು ಪೀಠ ಭಾವೈಕ್ಯತೆ ಬೆಳೆಸುವ ಕೆಲಸ ಮಾಡುತ್ತಿದೆ.ಧಾರ್ಮಿಕ ಸ್ಥಳಗಳ ಮುಂದೆ ಮುಸ್ಲಿಂ ಗೆ ವ್ಯಾಪಾರ ನಿಷೇಧ ವಿಚಾರ ಮುಸ್ಲಿಂ ಗೆ ವ್ಯಾಪಾರ ನಿಷೇಧವನ್ನು ಸಮರ್ಥಿಸಿಕೊಂಡ ರಂಭಾಪುರಿ ಶ್ರೀ ಧಾರ್ಮಿಕ ಸ್ಥಳಗಳಲ್ಲಿ ಹಿಂದುಯೇತರಿಗೆ ಮೊದಲಿನಿಂದಲೂ ಅವಕಾಶವಿಲ್ಲ ಇದನ್ನ ಹಿಂದೆ 2002 ರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದಿದ್ದಾರೆ.

Swamiji’s also wear cloth on head siddaramaiah said controversial statement

Comments are closed.