Teachers fear NEP : ಮುಂದಿನ ವರ್ಷದಿಂದ ರಾಜ್ಯದಲ್ಲಿ NEP ಜಾರಿ: 40 ಸಾವಿರ ಶಿಕ್ಷಕಿಯರಿಗೆ ಬೀದಿಗೆ ಬರೋ ಆತಂಕ

ನವದೆಹಲಿ :(Teachers fear NEP) ದೇಶದಲ್ಲಿರುವ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ಕೊನೆಗೂ ಸನ್ನಿಹಿತವಾದಂತಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಅಂಗನವಾಡಿಗಳಲ್ಲಿ ಮುಂದಿನ ವರ್ಷದಿಂದಲೇ NEP ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗ್ತಿದೆ. ದೇಶದ ಅನೇಕ ಶಿಕ್ಷಣ ತಜ್ಞರ ಇಚ್ಛೆಯಂತೆ ಬ್ರಿಟೀಷ್ ಶಿಕ್ಷಣ ವ್ಯವಸ್ಥೆಯನ್ನುಬದಲಾವಣೆ ಯಾಗಲಿದೆ. 2014ರಲ್ಲಿ ಈ ಹೊಸ ಶಿಕ್ಷಣ ನೀತಿ ಜಾರಿಗೆ ಸಮಿತಿ ಶಿಫಾರಸ್ಸು ಮಾಡಿತ್ತು. ರಾಜ್ಯದಲ್ಲಿ ಮದನ್ ಗೋಪಾಲ್ ಅವರ ಸಮಿತಿ ರಚನೆ ಮಾಡಿ 2020 ರಲ್ಲಿ NEP ಶಿಕ್ಷಣ ನೀತಿಯನ್ನು ಜಾರಿ ಮಾಡಲು ನಿರ್ಧರಿಸಲಾಗಿತ್ತು. ಇದರ ಅನ್ವಯ ಬಾಲ್ಯಪೂರ್ವ ಶಿಕ್ಷಣ ಮತ್ತು ಆರೈಕೆಗಾಗಿ ಅಂಗನವಾಡಿ ಗಳಲ್ಲೂ ಮುಂದಿನ ವರ್ಷದಿಂದ NEP ಜಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ.

3 ವರ್ಷದಲ್ಲೇ ಮಕ್ಕಳ ಪ್ರಾರಂಭಿಕ ಹಂತದಲ್ಲೇ ಎನ್ ಇಪಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲು ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಆದ್ರೆ ಈ ಹೊಸ ಶಿಕ್ಷಣ ನೀತಿ ಜಾರಿಯಾದ್ರೆ ರಾಜ್ಯದ 40 ಸಾವಿರ ಅಂಗನವಾಡಿ ಶಿಕ್ಷಕಿಯರ ಕೆಲಸಕ್ಕೆ ಕುತ್ತು ಬರಲಿದೆ ಎಂಬ ಆತಂಕವೂ ಎದುರಾಗಿದೆ. ಹೀಗಾಗಿ ಈ ಕೂಡಲೇ ಈ ನೂತನ ಶಿಕ್ಷಣ ನೀತಿಯನ್ನು ಹಿಂಪಡೆಯುವಂತೆ ಒತ್ತಾಯವೂ ವ್ಯಕ್ತವಾಗುತ್ತಿದೆ. ಈ ಹೊಸ ಶಿಕ್ಷಣ ನೀತಿ ವಿರುದ್ಧ ಅಂಗನವಾಡಿ ಶಿಕ್ಷಕಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ 66,361 ಅಂಗನವಾಡಿಗಳಿವೆ.

ಇವುಗಳಲ್ಲಿ 6,017 ಪದವಿ ಪಡೆದವರು 16,303 ಪಿಯುಸಿ ಹಾಗೂ 40,786 ಎಸ್ಎಸ್ಎಲ್ ಸಿ ಶಿಕ್ಷಣ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರು ಮಕ್ಕಳಿಗೆ ಭೋದನೆ ಮಾಡುತ್ತಿದ್ದಾರೆ. ಆದರೆ NEP ಜಾರಿಯಾದ್ಮೇಲೆ ಎಲ್ಲಾ ಶಿಕ್ಷಕರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಾಠದ ಬೋಧನೆ ಹಾಗೂ ಎನ್ ಇಪಿ ತರಬೇತಿ ಪಡೆಯಬೇಕು‌.ಅದನ್ನ ಅರ್ಥೈಸಿಕೊಂಡು ಮಕ್ಕಳಿಗೆ ಪಾಠ ಮಾಡಬೇಕು. SSLC ವಿದ್ಯಾರ್ಹತೆ ಇರುವ 40,786 ಶಿಕ್ಷಕರಿಯರಿಗೆ ಇದು ಕಷ್ಟವಾಗುತ್ತದೆ ಎಂಬುದು ಶಿಕ್ಷಕಿಯರ ವಾದ.

ಅಲ್ಲದೇ ಈಗಾಗಲೇ ರಾಜ್ಯದಲ್ಲಿರುವ ಅಂಗನವಾಡಿ ಶಿಕ್ಷಕಿಯರು 40-48 ವರ್ಷದ ವಯೋಮಾನದವರು. ಇವರು ಈ ಹೊಸ ನೀತಿಗೆ ಹೊಂದಿಕೊಳ್ಳುವುದು ಕಷ್ಟ. ಹೀಗಾಗಿ ಯೋಜನೆ ಜಾರಿಗೆ ವಿರೋಧ ವ್ಯಕ್ತವಾಗ್ತಿದೆ. ಈ ಮಧ್ಯೆ 40 ಸಾವಿರ ಶಿಕ್ಷಕಿಯರನ್ನ ಕೈಬಿಟ್ಟು ಸೂಕ್ತ ತರಬೇತಿ ಪಡೆದ ಶಿಕ್ಷಕಿಯರ ನೇಮಕಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಎನ್ ಇಪಿ ಜಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಇದನ್ನೂ ಓದಿ : Airtel vs Jio vs Vi : ಬಂಪರ್ ಪ್ಲಾನ್ ಆಫರ್ ಘೋಷಿಸಿದ ಏರ್‌ಟೆಲ್, ಜಿಯೋ ವೊಡಾಪೋನ್‌ ಐಡಿಯಾ

ಇದನ್ನೂ ಓದಿ : Road Trip : ಮಾನ್ಸೂನ್‌ನಲ್ಲಿ ಪ್ರಕೃತಿಯ ಸುಂದರ ದೃಶ್ಯ ಸವಿಯಲು ಸ್ಪೆಷಲ್‌ ಆಗಿ ರೋಡ್‌ ಟ್ರಿಪ್‌ಗೆ ಹೋಗಿ

Implementation of NEP in the state from next year: 40 thousand teachers fear to come to the streets

Comments are closed.