Ravindra Jadeja out of Asia Cup: ಏಷ್ಯಾ ಕಪ್‌ನಿಂದ ರವೀಂದ್ರ ಜಡೇಜ ಔಟ್, ಭಾರತಕ್ಕೆ ಬಿಗ್ ಶಾಕ್

ದುಬೈ: (Ravindra Jadeja out of Asia Cup) ಏಷ್ಯಾ ಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತಕ್ಕೆ ಬಿಗ್ ಶಾಕ್ ಎದುರಾಗಿದೆ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ ಮೊಣಕಾಲಿನ ಗಾಯದ ಕಾರಣ ಟೂರ್ನಿ ಯಿಂದ ಹೊರ ಬಿದ್ದಿದ್ದಾರೆ. ರವೀಂದ್ರ ಜಡೇಜ ಅವರ ಸ್ಥಾನದಲ್ಲಿ ಎಡಗೈ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಅಂತಿಮ 15ರ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಹಿಂದೆ ಅಕ್ಷರ್ ಪಟೇಲ್ ಏಷ್ಯಾ ಕಪ್ ಟೂರ್ನಿಗೆ ಭಾರತದ ಸ್ಟ್ಯಾಂಡ್ ಬೈ ಆಟಗಾರರ ಲಿಸ್ಟ್’ನಲ್ಲಿದ್ದರು.

ಆಲ್ರೌಂಡರ್ ರವೀಂದ್ರ ಪಾಕಿಸ್ತಾನ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿದಿದ್ದ ಜಡೇಜ, 29 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 35 ರನ್ ಗಳಿಸಿದ್ದಷ್ಟೇ ಅಲ್ಲದೆ, ಹಾರ್ದಿಕ್ ಪಾಂಡ್ಯ ಜೊತೆ 5ನೇ ವಿಕೆಟ್’ಗೆ ಅತ್ಯಮೂಲ್ಯ 52 ರನ್ ಸೇರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಆದರೆ ಸೂಪರ್-4 ಹಂತದ ಪಂದ್ಯಗಳು ಆರಂಭವಾಗುವ ಮುನ್ನವೇ ರವೀಂದ್ರ ಜಡೇಜ ಗಾಯದ ಸಮಸ್ಯೆಯ ಕಾರಣ ಇಡೀ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.

ಇದೇ ಭಾನುವಾರ (ಸೆಪ್ಟೆಂಬರ್ 4) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂಪರ್-4 ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಹುತೇಕ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಶುಕ್ರವಾರ ನಡೆಯುವ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಮಾತ್ರ ಸೂಪರ್-4 ಹಂತಕ್ಕೇರಲಿದೆ. ಒಂದು ವೇಳೆ ಪಾಕ್ ಸೋತರೆ, ಸೂಪರ್-4 ಹಂತದಲ್ಲಿ ಭಾರತಕ್ಕೆ ಎದುರಾಳಿ ಹಾಂಕಾಂಗ್.

ಸೆಪ್ಟೆಂಬರ್ 6ರಂದು ನಡೆಯುವ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿ ’ಬಿ’ ಗ್ರೂಪ್’ನ ಅಗ್ರಸ್ಥಾನಿ ಅಫ್ಘಾನಿಸ್ತಾನ. ಸೆಪ್ಟೆಂಬರ್ 8ರಂದು ನಡೆಯುವ ಪಂದ್ದಲ್ಲಿ ಭಾರತ ತಂಡ ಶ್ರೀಲಂಕಾ ಸವಾಲನ್ನು ಎದುರಿಸಲಿದೆ. ಸೂಪರ್-4 ಹಂತದಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ. ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ನಡೆಯಲಿದೆ.

ಏಷ್ಯಾ ಕಪ್ ಟೂರ್ನಿಗೆ ಭಾರತದ ಪರಿಷ್ಕೃತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ದೀಪಕ್ ಹೂಡ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ರಿಷಬ್ ಪಂತ್ (ವಿಕೆಟ್ ಕೀಪರ್), ರವಿ ಬಿಷ್ಣೋಯ್, ಅಕ್ಷರ್ ಪಟೇಲ್, ಆರ್.ಅಶ್ವಿನ್.

ಸೂಪರ್-4 ಹಂತದ ವೇಳಾಪಟ್ಟಿ:
ಅಫ್ಘಾನಿಸ್ತಾನ Vs ಶ್ರೀಲಂಕಾ: 03 ಸೆಪ್ಟೆಂಬರ್, ಶಾರ್ಜಾ
ಭಾರತ Vs A2: 04 ಸೆಪ್ಟೆಂಬರ್, ದುಬೈ
ಭಾರತ Vs ಅಫ್ಘಾನಿಸ್ತಾನ: 06 ಸೆಪ್ಟೆಂಬರ್, ದುಬೈ
A2 Vs ಶ್ರೀಲಂಕಾ: 07 ಸೆಪ್ಟೆಂಬರ್, ದುಬೈ
ಭಾರತ Vs ಶ್ರೀಲಂಕಾ: 08 ಸೆಪ್ಟೆಂಬರ್, ದುಬೈ
ಅಫ್ಘಾನಿಸ್ತಾನ Vs A2: 09 ಸೆಪ್ಟೆಂಬರ್, ದುಬೈ

ಇದನ್ನೂ ಓದಿ : Hong Kong gifted Jersey to Virat Kohli : ಕೊಹ್ಲಿಗೆ ಜರ್ಸಿ ಉಡುಗೊರೆಯೊಂದಿಗೆ ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಹಾಂಕಾಂಗ್ ಟೀಮ್

ಇದನ್ನೂ ಓದಿ : Virat Kohli Babar Azam : ಒಂದೇ ತಂಡದಲ್ಲಿ ಆಡಲಿದ್ದಾರೆ ಕಿಂಗ್ ಕೊಹ್ಲಿ, ಪಾಕ್ ನಾಯಕ ಬಾಬರ್ ಅಜಮ್

Ravindra Jadeja out of Asia Cup Bad news for India

Comments are closed.