sslc students : 2022-23ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸ್ವರೂಪ ಬದಲು

ಬೆಂಗಳೂರು :sslc students : 2022-23ನೆ ಸಾಲಿನ ಎಸ್​ಎಸ್​​ಎಲ್​ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಸ್​ಎಸ್ಎಲ್​​ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪ ಹಾಗೂ ಕಠಿಣತೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಈ ಸಂಬಂಧ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಸುತ್ತೋಲೆಯನ್ನು ಹೊರಡಿಸುವ ಮೂಲಕ ಆದೇಶವನ್ನು ನೀಡಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 2015 ಹಾಗೂ 16ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ ಮಾಡಿತ್ತು. ಇದಾದ ಬಳಿಕ 2019 -20ನೇ ಸಾಲಿನಲ್ಲಿಯೂ ಪ್ರಶ್ನೆ ಪತ್ರಿಕೆಯನ್ನು ಪರಿಷ್ಕರಣೆಯನ್ನು ಮಾಡಲಾಗಿತ್ತೇ ಹೊರತು ಕಠಿಣತೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದಾದ ಬಳಿಕ ಕೋವಿಡ್​ 2ನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು 2020=21ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಪ್ರಶ್ನೆ ಪತ್ರಿಕೆಗಳನ್ನು ಸರಳಗೊಳಿಸಲಾಗಿತ್ತು.

ಇದಾದ ಬಳಿಕ ಕೋವಿಡ್​ ಕಾರಣದಿಂದಾಗಿ ಭೌತಿಕ ತರಗತಿಗಳು ಆರಂಭಗೊಳ್ಳಲು ವಿಳಂಬ ಉಂಟಾದ ಹಿನ್ನೆಲೆಯಲ್ಲಿ 2021-22ನೇ ಸಾಲಿನಲ್ಲಿಯೂ ವಿದ್ಯಾರ್ಥಿಗಳ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಶೇ 20ರಷ್ಟು ಪಠ್ಯ ಕಡಿತಗೊಳಿಸಲಾಗಿತ್ತು.

ಆದರೆ 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಈವರೆಗೆ ಕೋವಿಡ್​ ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗಿಲ್ಲ. ಮೇ 16ರಿಂದಲೇ ಶಾಲೆಗಳು ಆರಂಭಗೊಂಡಿದ್ದು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈ ವರ್ಷ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಈ ಹಿಂದಿನಂತೆ 75 ಪ್ರತಿಶತ ಹಾಜರಾತಿಯನ್ನು ಹೊಂದುವುದು ಕಡ್ಡಾಯವಾಗಿದೆ. 2019-20ಮೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿನ ಕಠಿಣತೆಯನ್ನೇ 2022-23ನೇ ಸಾಲಿನ ಪರೀಕ್ಷಾ ಪತ್ರಿಕೆಗಳನ್ನು ಮುಂದುವರಿಸಲಾಗುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.

ಇದನ್ನು ಓದಿ : NEET MDS:ನೀಟ್ ಎಂಡಿಎಸ್ ಮೆರಿಟ್ ಲಿಸ್ಟ್ ಬಿಡುಗಡೆ; ಮಾರ್ಕ್ ಕಾರ್ಡ್ ಜುಲೈ 27ಕ್ಕೆ

ಇದನ್ನೂ ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ

ಇದನ್ನೂ ಓದಿ : Anganwadi workers : ಅಂಗನವಾಡಿ ಕಾರ್ಯಕರ್ತೆಯರಿಗೆ ಇಲ್ಲಿದೆ ಗುಡ್​ ನ್ಯೂಸ್​​ : ಶೀಘ್ರದಲ್ಲೇ ಸಿಗಲಿದೆ ಶಿಕ್ಷಕಿ ಸ್ಥಾನ

ಇದನ್ನೂ ಓದಿ : KL Rahul back to practice : ಗುಡ್ ನ್ಯೂಸ್, NCAನಲ್ಲಿ ಅಭ್ಯಾಸ ಆರಂಭಿಸಿದ ರಾಹುಲ್

important information for sslc students changing the format of question paper

Comments are closed.