JEE ಮೇನ್ಸ್‌ 2026 ಸೆಷನ್‌ 1 ರ ನೋಂದಣಿ ಪ್ರಾರಂಭ: ಪಠ್ಯಕ್ರಮ, ಪರೀಕ್ಷೆಯ ಮಾದರಿ ತಿಳಿಯಿರಿ

JEE Mains 2026 Session 1 registration: ನ್ಯಾಷನಲ್‌ ಟೆಸ್ಟೆಂಗ್‌ ಏಜನ್ಸಿ (NTA) ನಡೆಸುವ ಜಾಯೆಂಟ್‌ ಎಂಟ್ರೆನ್ಸ್‌ ಎಕ್ಸಾಮ್‌ (JEE) 2026 ರ ಸೆಷನ್‌ 1 ಕ್ಕೆ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದೆ.

ಈ ಪರೀಕ್ಷೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಎನ್‌ಟಿಎ ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್‌ 31 ರಿಂದ ಪ್ರಾರಂಭವಾಗಿದೆ.

ಜೆಇಇ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ನವೆಂಬರ್‌ 27 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕವನ್ನು ಕ್ರೆಡಿಟ್‌/ಡೆಬಿಟ್‌ ಕಾರ್ಡ್‌/ ನೆಟ್‌ ಬ್ಯಾಂಕಿಂಗ್‌/ ಯುಪಿಐ ಮೂಲಕ ಪಾವತಿಸಬಹುದಾಗಿದೆ.

ಪರೀಕ್ಷೆ ನಡೆಯುವ ಕೇಂದ್ರವನ್ನು ಜನವರಿ 2026ರ ಮೊದಲ ವಾರದೊಳಗೆ ಘೋಷಿಸಲಿದೆ.

ಜೆಇಇ ಪರೀಕ್ಷೆ ಹೇಗೆ ನಡೆಯುತ್ತದೆ?

ಜೆಇಇ ಮೇನ್ಸ್‌ 2026 ಇರಡು ಸೆಷನ್‌ಗಳಲ್ಲಿ ನಡೆಯುತ್ತದೆ. ಸೆಷನ್‌ 1 ರ ಪರೀಕ್ಷೆಯು 2026 ಜನವರಿ 21 ರಿಂದ 30 ರವರೆಗೆ ನಡೆಯಲಿದೆ.

ಸೆಷನ್‌ 2 ಪರೀಕ್ಷೆಯು ಏಪ್ರಿಲ್‌ 1 ರಿಂದ 10 ರವರೆಗೆ ನಡೆಯಲಿದೆ. ಪರೀಕ್ಷೆಯು 2 ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಅದರ ಫಲಿತಾಂಶವನ್ನು ಫೆಬ್ರವರಿ 12, 2026 ರಂದು ಪ್ರಕಟಿಸಲಾಗುತ್ತದೆ.

ಜೆಇಇ ಮೇನ್‌ ಪೇಪರ್‌ 1 ಫಲಿತಾಂಶವನ್ನು ಎನ್‌ಐಟಿ, ಐಐಟಿ, ಸಿಎಫ್‌ಟಿಐ ಮತ್ತು ಬಿಇ/ಬಿಟೆಕ್‌ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

ಅದರ 2ನೇ ಪೇಪರ್‌ ಅನ್ನು ಬಿಆರ್ಕ್‌ ಮತ್ತು ಬಿಪ್ಲಾನಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

ಪಠ್ಯಕ್ರಮ

ಜೆಇಇ ಮೇನ್ಸ್‌ ಪರೀಕ್ಷೆ 2026 ರ ಸಲುವಾಗಿ ಎನ್‌ಟಿಎ ವಿಸ್ತ್ರತವಾದ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ. ಜೆಇಇ ಮೇನ್‌ ನ 1ನೇ ಪತ್ರಿಕೆಯು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ತಲಾ 20 ಘಟಕಗಳು ಹಾಗೂ ಗಣಿತದಲ್ಲಿ ಒಟ್ಟು 14 ಘಟಕಗಳನ್ನು ಹೊಂದಿರುತ್ತದೆ.

ಜೆಇಇ ಮೇನ್ಸ್‌ ಪೇಪರ್‌ 2A (ಬಿಆರ್ಕ್‌) ಗಾಗಿ ಗಣಿತದ 14 ಪ್ರಶ್ನೆಗಳಿರುತ್ತವೆ. ಅದರ ಜೊತೆಗೆ ಡ್ರಾಯಿಂಗ್‌ ಮತ್ತು ಆಪ್ಟಿಟ್ಯೂಡ್‌ ಪರೀಕ್ಷೆ ಸಹ ಇರುತ್ತದೆ.

ಈ ಎರಡೂ ಪರೀಕ್ಷೆಯ ವಿವರವಾದ ಪಠ್ಯಕ್ರಮವನ್ನು ಅಧಿಕೃತ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಜೆಇಇ ಮೇನ್ಸ್, ಪೇಪರ್ 2B, ಬಿಪ್ಲಾನಿಂಗ್ ಪ್ರಶ್ನೆಪತ್ರಿಕೆಯು ಗಣಿತದ 14 ಪ್ರಶ್ನೆಗಳನ್ನು ಅಪ್ಟಿಟ್ಯೂಡ್‌ನಲ್ಲಿ 2 ಮತ್ತು ಪ್ಲಾನಿಂಗ್‌ನ 3 ಪ್ರಶ್ನೆಗಳು ಸೇರಿವೆ.

ಇದನ್ನೂ ಓದಿ: ಏಕೆ ಭಾನುವಾರವೇ ರಜೆ? ಭಾನುವಾರದ ರಜೆಯ ಹಿಂದಿರುವ ಇತಿಹಾಸ ಮತ್ತು ಹೋರಾಟ

(JEE Mains 2026 Session 1 registration window open check the syllabus and exam model)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories