ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ 2023 ಪ್ರಕಟ: ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು : ಪ್ರೀ-ಯೂನಿವರ್ಸಿಟಿ ಶಿಕ್ಷಣ ಇಲಾಖೆ, ಕರ್ನಾಟಕವು ಪ್ರೀ-ಯೂನಿವರ್ಸಿಟಿ ಸರ್ಟಿಫಿಕೇಟ್ (PUC) ಮೊದಲ ವರ್ಷದ ಪರೀಕ್ಷೆಯ ಫಲಿತಾಂಶವನ್ನು (Karnataka 1st PUC Result 2023) ಇಂದು (31 ಮಾರ್ಚ್) ಶುಕ್ರವಾರರಂದು ಪ್ರಕಟಿಸಿದೆ. ಫಲಿತಾಂಶಗಳನ್ನು ವಿಜ್ಞಾನ, ವಾಣಿಜ್ಯ ಮತ್ತು ಕಲೆಗಳ ಎಲ್ಲಾ ಮೂರು ಸ್ಟ್ರೀಮ್‌ಗಳಿಗೆ ಪ್ರಕಟಿಸಲಾಗಿದೆ. ಪ್ರಥಮ ಪಿಯುಸಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್- result.dkpucpa.com ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು ಎಂದು ಪರೀಕ್ಷೆ ಪ್ರಾಧಿಕಾರ ತಿಳಸಿದೆ.

ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರಥಮ ಪಿಯುಸಿ 2023 ಪರೀಕ್ಷೆಗಳನ್ನು ಫೆಬ್ರವರಿ 20 ಮತ್ತು ಮಾರ್ಚ್ 3 ರ ನಡುವೆ ನಡೆಸಲಾಗಿದೆ. ಇದೀಗ ಪರೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಫಲಿತಾಂಶವನ್ನು ಹೇಗೆ ಪರಿಶೀಸಬೇಕು ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

Karnataka 1st PUC Result : ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ 2023 : ಪರಿಶೀಲಿಸುವ ವಿಧಾನ :

  • ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಪ್ರಥಮ ಪಿಯುಸಿ ಫಲಿತಾಂಶ 2023 ಅನ್ನು ಪ್ರವೇಶಿಸಬಹುದು.
  • ನಂತರ ವಿದ್ಯಾರ್ಥಿಗಳು ತಮ್ಮ ಅಧಿಕೃತ ವೆಬ್‌ಸೈಟ್‌ ಆದ result.dkpucpa.com ಭೇಟಿ ನೀಡಬೇಕು.
  • ಪ್ರಥಮ ಪಿಯುಸಿ ಫಲಿತಾಂಶ 2023 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
  • ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು.
  • ನಿಮ್ಮ ಪ್ರಥಮ ಪಿಯುಸಿ ಫಲಿತಾಂಶಗಳು ಪರದೆಯ ಮೇಲೆ ಕಾಣಿಸುತ್ತದೆ.

ಇದನ್ನೂ ಓದಿ : SSLC Public Exam 2023: ಇಂದಿನಿಂದ ‘SSLC’ ಪರೀಕ್ಷೆ ಆರಂಭ: ಪರೀಕ್ಷಾ ಕೇಂದ್ರಗಳ ಸುತ್ತ ಕಟ್ಟುನಿಟ್ಟಿನ ಕ್ರಮ

ಇದನ್ನೂ ಓದಿ : NEET UG 2023: ವೈದ್ಯಕೀಯ ಪ್ರವೇಶ ಪರೀಕ್ಷೆಗೆ ದಿನಗಣನೆ ಪ್ರಾರಂಭ : ಮಾರ್ಗಸೂಚಿಗಳನ್ನು ಪರಿಶೀಲಿಸಿ

ಇದನ್ನೂ ಓದಿ : SSLC Grace mark: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ಈ ಬಾರಿ ಸಿಗಲಿದೆ ಶೇ 10 ರಷ್ಟು ಗ್ರೇಸ್‌ ಮಾರ್ಕ್‌

ನಂತರ ವಿದ್ಯಾರ್ಥಿಗಳು ತಮ್ಮ ಪ್ರಥಮ ಪಿಯುಸಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು. ಕರ್ನಾಟಕ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಈಗ ದ್ವಿತೀಯ ಪಿಯುಸಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ವರದಿಗಳ ಪ್ರಕಾರ, ಕರ್ನಾಟಕ ದ್ವಿತೀಯ ಪಿಯುಸಿ 2023 ಪರೀಕ್ಷೆಗಳ ಫಲಿತಾಂಶಗಳು ಮೇ 2023 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Karnataka 1st PUC Result 2023 Declared: Click Here For Complete Details

Comments are closed.