E-highway toll rate hike : ಬೆಂಗಳೂರು – ಮೈಸೂರು ಪ್ರಯಾಣಿಕರಿಗೆ ಶಾಕ್ : ಟೋಲ್ ದರದಲ್ಲಿ ಮತ್ತೆ ಏರಿಕೆ

ಮೈಸೂರು : (E-highway toll rate hike) ಬೆಂಗಳೂರು ಮೈಸೂರು ಹೆದ್ದಾರಿ ಲೋಕಾರ್ಪಣೆಗೆ ಸಿದ್ದವಾಗುತ್ತಿದ್ದಂತೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಹಲವು ವಿರೋಧಗಳು, ಪ್ರತಿಭಟನೆಗಳ ನಡುವೆಯೂ ಹೆದ್ದಾರಿ ಲೋಕಾರ್ಪಣೆಗೊಂಡಿದೆ. ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಟೋಲ್‌ ಕೂಡ ಪ್ರಾರಂಭವಾಗಿದೆ. ಇದೀಗ ಅದೇ ಟೋಲ್‌ ನಲ್ಲಿ ಪ್ರಯಾಣಿಕರ ಟೋಲ್‌ ದರ ಇನ್ನಷ್ಟು ಹೆಚ್ಚಳವಾಗಿದೆ. ಏಪ್ರಿಲ್‌ ಒಂದರಿಂದ ಟೋಲ್‌ ದರ ಶೇಕಡಾ 22 ರಷ್ಟು ದುಬಾರಿಯಾಗಲಿದೆ.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಾರ್ಚ್‌ ೧೪ ರಿಂದಲೇ ಟೋಲ್‌ ಸಂಗ್ರಹ ಪ್ರಾರಂಭವಾಗಿತ್ತು. ಈಗಿರುವ ಟೋಲ್​ ದರ ಹೆಚ್ಚಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ / NHAI) ಮತ್ತೆ ಶೇಕಡಾ 22ರಷ್ಟು ಟೋಲ್​ ದರ ಹೆಚ್ಚಿಸಿದೆ. ಏಪ್ರಿಲ್​ 1ರಿಂದ ಈಗಿರುವ ಟೋಲ್​ಗಿಂತ ಶೇಕಡಾ 22ರಷ್ಟು ದರ ದುಬಾರಿಯಾಗಲಿದೆ. ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಮತ್ತೆ ಟೋಲ್ ದರ ಹೆಚ್ಚಳ ಮಾಡಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಇದೀಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ ಮಾಡಲಾಗಿದ್ದು, ಬಿಡದಿ, ರಾಮನಗರ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಮನವಿ ಮಾಡಿದೆ. ಟೋಲ್‌ ಸಂಗ್ರಹ ಪ್ರಾರಂಭವಾದ ಕೆಲವೇ ದಿನದಲ್ಲಿ ಟೋಲ್ ದರ ಹೆಚ್ಚಳ ಮಾಡಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದು, ಹೆದ್ದಾರಿ ಪ್ರಾಧಿಕಾರದ ವಿರುದ್ದ ಕಿಡಿಕಾರುತ್ತಿದ್ದಾರೆ. ಇದೀಗ ಇ-ಹೈವೇ ಪರಿಷ್ಕೃತ ಟೋಲ್​ ದರ ಪಟ್ಟಿ ಈ ಕೆಳಗಿನಂತಿದೆ.

*. ಕಾರು/ವ್ಯಾನ್/ಜೀಪ್ : ಏಕಮುಖ ಸಂಚಾರ 165 ರೂ(30ರೂ ಹೆಚ್ಚಳ), ದ್ವಿಮುಖ ಸಂಚಾರ – 250 ರೂ(45ರೂ ಹೆಚ್ಚಳ).
*. ಲಘು ವಾಹನಗಳು/ಮಿನಿಬಸ್ : 270 ರೂ.(50ರೂ ಹೆಚ್ಚಳ) ದ್ವಿಮುಖ ಸಂಚಾರ -405 ರೂ.(75 ರೂ. ಹೆಚ್ಚಳ)
*. ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನ : 565 ರೂ(165 ರೂ ಹೆಚ್ಚಳ), ದ್ವಿಮುಖ ಸಂಚಾರ – 850 ರೂ(160 ರೂ.ಹೆಚ್ಚಳ)
*. ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು : ಏಕ‌ಮುಖ ಸಂಚಾರ 615 ರೂ.(115ರೂ ಹೆಚ್ಚಳ), ದ್ವಿ ಮುಖಸಂಚಾರ – 925 ರೂ.( 225 ರೂ.ಹೆಚ್ಚಳ)
*. ಭಾರೀ ಕಟ್ಟಡ ನಿರ್ಮಾಣ ವಾಹನಗಳು/ಅರ್ಥ್ ಮೂವರ್ಸ್‌/4-6 ಆಕ್ಸೆಲ್ ವಾಹನಗಳು : 885 ರೂ.(165ರೂ ಹೆಚ್ಚಳ) ದ್ವಿಮುಖ ಸಂಚಾರ – 1,330 ರೂ. ಹೆಚ್ಚಳ(250ರೂ ಹೆಚ್ಚಳ)
*. 7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು : 1,080 ರೂ.(200ರೂ ಹೆಚ್ಚಳ) ದ್ವಿಮುಖ ಸಂಚಾರ – 1,620 ರೂ.( 305 ರೂ.ಹೆಚ್ಚಳ)

ಇದನ್ನೂ ಓದಿ : ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ 2023 ಪ್ರಕಟ: ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

E-highway toll rate hike: Shock for Bangalore-Mysore passengers: Toll rate hike again

Comments are closed.