ISRO PSLC C52: 2022ರ ಭಾರತದ ಮೊದಲ ಉಪಗ್ರಹ ಉಡಾವಣೆಗೆ ಕ್ಷಣಗಣನೆ; ಲೈವ್ ವೀಕ್ಷಿಸುವುದು ಹೇಗೆ?

Watch Live ISRO PSLC C52 Satellite Launch: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ-ISRO) 2022 ರ ಮೊದಲ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.­­ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಫೆಬ್ರವರಿ 14ರಂದು ಮುಂಜಾನೆ 5:55 ಕ್ಕೆ EOS-04 (EOS-04) ಮಿಷನ್‌ನ ಭಾಗವಾಗಿ ಪೋಲಾರ್ ಉಪಗ್ರಹ ಉಡಾವಣಾ ವಾಹನ, ಪಿಎಸ್ ಎಲ್ ವಿ-ಸಿ 52 (ISRO PSLC C52) ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.

ಉಡಾವಣಾ ವಾಹನವನ್ನು ಭೂಮಿಯ ವೀಕ್ಷಣಾ EOS-04 ಮಿಷನ್‌ನ ಭಾಗವಾಗಿ ಪಿಎಸ್ ಎಲ್ ವಿ-ಸಿ 52 ಉಪಗ್ರಹವನ್ನು ಕಕ್ಷೆಗೆ ಸೇರುವಂತೆ ವಿನ್ಯಾಸಗೊಳಿಸಲಾಗಿದೆ. 1,710 ಕೆಜಿ ತೂಕದ ಸೂರ್ಯನ ಸಿಂಕ್ರೊನಸ್ ಧ್ರುವೀಯ ಕಕ್ಷೆಯಲ್ಲಿ 529 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.

ರಾಡಾರ್ ಇಮೇಜಿಂಗ್ EOS-04 ಮಿಷನ್‌ನ ಪಿಎಸ್ ಎಲ್ ವಿ-ಸಿ 52  ಉಪಗ್ರಹವನ್ನು ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಕೆಲಸ ಕಾರ್ಯಗಳಿಗೆ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ-ಗುಣಮಟ್ಟದ ಚಿತ್ರಗಳನ್ನು ಒದಗಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

EOS-04 ಮಿಷನ್‌ನ ಪಿಎಸ್ ಎಲ್ ವಿ-ಸಿ 52  ಉಪಗ್ರಹದ ಜೊತೆ ಎರಡು ಸಣ್ಣ ಉಪಗ್ರಹಗಳು ಬಾಹ್ಯಾಕಾಶವನ್ನು ಪ್ರವೇಶಿಸಲಿವೆ. ಕೊಲೊರಾಡೋ ವಿಶ್ವವಿದ್ಯಾಲಯ, ಬೌಲ್ಡರ್ ಮತ್ತು INS- ನಲ್ಲಿರುವ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿಯಿಂದ ವಿದ್ಯಾರ್ಥಿ ಉಪಗ್ರಹ (INSPIREsat-1). 2TD, ಇಸ್ರೋದ ತಂತ್ರಜ್ಞಾನ ಪ್ರದರ್ಶಕ ಉಪಗ್ರಹ. INS-2TD ಭಾರತ-ಭೂತಾನ್ ಜಂಟಿ ಉಪಗ್ರಹವಾದ INS-2B ಫೆಬ್ರವರಿ 14ರಂದು EOS-04 ಉಪಗ್ರಹದ ಜೊತೆ ಬಾಹ್ಯಾಕಾಶ ಸೇರಲಿವೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ 2022 ರ ಮೊದಲ ಉಪಗ್ರಹ ಪಿಎಸ್ ಎಲ್ ವಿ-ಸಿ 52  ಉಡಾವಣೆಯನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಇಸ್ರೋ ತಿಳಿಸಿದೆ.  

ಇದನ್ನೂ ಓದಿ: Post Office Core Banking: ಅಂಚೆ ಉಳಿತಾಯ ಖಾತೆಯಿಂದ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾಯಿಸಬಹುದೇ?

(ISRO PSLC C52 how to watch live India’s first satellite in 2022 February 14)

Comments are closed.