Times Emerging Leaders ಪಟ್ಟಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌, ಆದರೆ ವಿರಾಟ್‌ ಕೊಹ್ಲಿಗಿಲ್ಲ ಸ್ಥಾನ

ಹರ್ಮನ್‌ ಪ್ರೀತ್‌ ಕೌರ್‌ ಮಹಿಳಾ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇದೀಗ ಭಾರತ ಸ್ಟಾರ್‌ ಆಟಗಾರ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರನ್ನೂ ಮೀರಿಸಿರುವ ಕೌರ್‌ ಟೈಮ್ಸ್ 100 ಪಟ್ಟಿಯಲ್ಲಿ (Times Emerging Leaders) ಸ್ಥಾನ ಪಡೆದಿದ್ದಾರೆ.

ಮುಂಬೈ : ಟೈಮ್ಸ್‌ ಉದಯೋನ್ಮುಕ ನಾಯಕರ ಪಟ್ಟಿಯನ್ನು (Times Emerging Leaders)) ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ (Rohith Sharma), ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli)  ಅವರಿಗೆ ಸ್ಥಾನವಿಲ್ಲ. ಬದಲಾಗಿ ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಮಾತ್ರವೇ ಸ್ಥಾನ ಪಡೆದಿದ್ದಾರೆ.

ಟೈಮ್100 ಉಯೋನ್ಮುಖ ನಾಯಕರ ಪಟ್ಟಿಯಲ್ಲಿ ಇನ್ನೋವೇಟರ್ಸ್ ವಿಭಾಗದಲ್ಲಿ ಹರ್ಮನ್‌ ಪ್ರೀತ್‌ ಕೌರ್‌ ವಿಶಿಷ್ಟ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ. ಏಂಜಲ್ ರೀಸ್, ಮೆಟ್ರೋ ಬೂಮಿನ್, ಕೇಟ್ ರೈಡರ್, ಮೀರಾ ಮುರತಿ ಮತ್ತು ಜೇಮ್ಸ್ ಮೇನಾರ್ಡ್ ಈ ಪ್ರಶಸ್ತಿ ಪಡೆದಿದ್ದಾರೆ.

Harman Preet Kaur in Times 100 Emerging Leaders list, Virat Kohli not
Image Credit To Original Source

ಸದ್ಯ ಭಾರತ ಕ್ರಿಕೆಟ್‌ ತಂಡ ಏಷ್ಯಾಕಪ್‌ ಟ್ರೋಫಿ ಗೆಲ್ಲುವ ವಿಶ್ವಾಸವಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಕನ್ನಡಿಗ ಕೆಎಲ್‌ ರಾಹುಲ್‌ (KL Rahul), ಹಾರ್ದಿಕ್‌ ಪಾಂಡ್ಯ (Hardik Pandya), ಜಸ್ಪ್ರೀತ್‌ ಬೂಮ್ರಾ (Jasprit Bumrah) ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಭಾರತ ತಂಡದ ಭಾಗವಾಗಿದ್ದಾರೆ. ಈ ಕ್ರಿಕೆಟ್‌ ಲೋಕದಲ್ಲಿ ಸಾಕಷ್ಟು ಸಾಧನೆಯನ್ನೂ ಮಾಡಿದ್ದಾರೆ.

ಇದನ್ನೂ ಓದಿ : ಬೆನ್‌ಸ್ಟೋಕ್ಸ್‌ ನಿವೃತ್ತಿ ವಾಪಾಸ್‌ ಬೆನ್ನಲ್ಲೇ ದಾಖಲೆಯ ಶತಕ : 6,6,6,6,6,6,6,6,6 ಸಿಕ್ಸರ್ 124 ಎಸೆತಕ್ಕೆ 182 ರನ್‌

ಇಂತಹ ಮಹಾನ್‌ ಕ್ರಿಕೆಟಿಗರು ಇರುವ ಭಾರತದಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಹರ್ಮನ್‌ ಪ್ರೀತ್‌ ಕೌರ್‌ ಮಾತ್ರ. ನಿಜಕ್ಕೂ ಹರ್ಮನ್‌ ಪ್ರೀತ್‌ ಕೌರ್‌ ಪಾಲಿಗೆ ಇದೊಂದು ಅವಿಸ್ಮರಣೀಯ ಕ್ಷಣ. ಅಷ್ಟಕ್ಕೂ ಹರ್ಮನ್‌ ಪ್ರೀತ್‌ ಕೌರ್‌ ಕ್ರಿಕೆಟ್‌ ಲೋಕದಲ್ಲಿ ಮಾಡಿರುವ ಸಾಧನೆ ಸಾಮಾನ್ಯವಲ್ಲ.

ಭಾರತ ಮಹಿಳಾ ತಂಡದ ನಾಯಕಿ ಆಗಿರುವ ಹರ್ಮನ್‌ ಪ್ರೀತ್‌ ಕೌರ್‌, ನಾಯಕಿಯಾಗಿ ತಂಡವನ್ನು ಸಮರ್ಥವಾಗಿಯೇ ಮುನ್ನಡೆಸುತ್ತಿದ್ದಾರೆ. 2022 ರಲ್ಲಿ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಹಾಗೂ 2023 ರ ಟಿ20 ವಿಶ್ವಕಪ್‌ನ ಸೆಮಿ- ಫೈನಲ್‌ಗೆ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲಾ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನೆಡೆಸಿದ್ದಾರೆ.

ಭಾರತ ಮಹಿಳಾ ತಂಡದ ಪ್ರಮುಖ ಆಲ್‌ರೌಂಡರ್‌ ಆಟಗಾರ್ತಿ ಆಗಿರುವ ಹರ್ಮನ್‌ ಪ್ರೀತ್‌ ಕೌರ್‌, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿಯೂ ಮಿಂಚು ಹರಿಸುತ್ತಿದ್ದಾರೆ. ಸದ್ಯ ಹರ್ಮನ್‌ ಪ್ರೀತ್‌ ಕೌರ್‌ ಏಷ್ಯನ್‌ ಗೇಮ್ಸ್‌ನತ್ತ ಗಮನ ಹರಿಸಿದ್ದಾರೆ. ಸೆಪ್ಟೆಂಬರ್ 21 ರಿಂದ ಆರಂಭವಾಗಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಹರ್ಮನ್‌ ಪ್ರೀತ್‌ ಕೌರ್‌ ಭಾರತ ತಂಡವನ್ನು ಮುನ್ನೆಡೆಸಲಿದ್ದಾರೆ.

Harman Preet Kaur in Times 100 Emerging Leaders list, Virat Kohli not
Image Credit To Original Source

ಇದನ್ನೂ ಓದಿ : ಕಿಂಗ್ ಈಸ್ ಬ್ಯಾಕ್ :77 ಶತಕ, 13 ಸಾವಿರ ರನ್‌ : ವಿಶ್ವದಾಖಲೆ ಬರೆದ ವಿರಾಟ್‌ ಕೊಹ್ಲಿ

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್‌, ಯಸ್ತಿಕಾ ಭಾಟಿಯಾ, ರೀಚಾ ಘೋಷ್‌, ದೀಪ್ತಿ ಶರ್ಮಾ ಸೇರಿದಂತೆ ಘಟಾನುಘಟಿ ಆಟಗಾರ್ತಿಯರು ಭಾರತ ಮಹಿಳಾ ತಂಡದಲ್ಲಿದ್ದಾರೆ. ಭಾರತ ಮಹಿಳಾ ತಂಡವು ಐಸಿಸಿ ಮಹಿಳಾ ಟಿ೨೦ಯಲ್ಲಿ ಅಗ್ರ ಶ್ರೇಯಾಂಕವನ್ನು ಹೊಂದಿರುವ ಕಾರಣದಿಂದಾಗಿ ಭಾರತ ತಂಡ ಏಷ್ಯನ್‌ ಗೇಮ್ಸ್‌ನಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಆಡಲಿದೆ. ಅಲ್ಲದೇ ಏಷ್ಯನ್‌ ಗೇಮ್ಸ್‌ ಗೆಲ್ಲುವ ಫೇವರೇಟ್‌ ತಂಡ ಎನಿಸಿಕೊಂಡಿದೆ.

ಭಾರತ ತಂಡ ಏಷ್ಯನ್ ಗೇಮ್ಸ್

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೇಟ್‌ ಕೀಪರ್), ಅಮನ್‌ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್‌ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆತುಜಾ, ಅನುಷಾ ಬಾರೆಡ್ಡಿ

ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಜು ಸ್ಯಾಮ್ಸನ್‌ ನಿವೃತ್ತಿ ! ವಿಶೇಷ ಪೋಟೋ ವೈರಲ್‌

Comments are closed.