Kodagu : ಶಾಲಾರಂಭದ ಬೆನ್ನಲ್ಲೇ ಮಡಿಕೇರಿಯಲ್ಲಿ 35 ವಿದ್ಯಾರ್ಥಿನಿರಿಗೆ ಕೊರೊನಾ ಸೋಂಕು

ಮಡಿಕೇರಿ : ರಾಜ್ಯದಲ್ಲಿ ಶಾಲೆಗಳು ಆರಂಭಗೊಂಡಿವೆ. ಅದ್ರಲ್ಲೂ ಗಡಿ ಜಿಲ್ಲೆಗಳಲ್ಲಿ ಶಾಲೆಗಳು ತಡವಾಗಿ ಆರಂಭವಾಗಿವೆ. ಇದೀಗ ಶಾಲಾರಂಭದ ಬೆನ್ನಲ್ಲೇ ಮಡಿಕೇರಿಯಲ್ಲಿ ಕೊರೊನಾ ಶಾಕ್‌ ಕೊಟ್ಟಿದ್ದು, ಬಾಲ ಮಂದಿರದ 35ವಿದ್ಯಾರ್ಥಿನಿಯರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ಮಡಿಕೇರಿ ವಿದ್ಯಾರ್ಥಿನಿಯರ ಬಾಲಮಂದಿರದ ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ವಾರ ಇಬ್ಬರು ವಿದ್ಯಾರ್ಥಿನಿಯರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೂ ಕೊರೊನಾ ಟೆಸ್ಟ್‌ ಮಾಡಿಸಲಾಗಿತ್ತು. ಇದೀಗ ಬಾಲ ಮಂದಿರದಲ್ಲಿರುವ 35 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಎಲ್ಲಾ ವಿದ್ಯಾರ್ಥಿನಿಯರನ್ನು ಬಾಲ ಮಂದಿರದಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ವಿದ್ಯಾರ್ಥಿನಿಯರ ಜೊತೆಗೆ ಸಂಪರ್ಕದಲ್ಲಿರುವವರನ್ನು ತಪಾಸಣೆ ನಡೆಸಲಾಗುತ್ತಿದೆ. ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಗಡಿಭಾಗದ ಕೊಡಗು ಜಿಲ್ಲೆಯಲ್ಲಿ ತಡವಾಗಿ ಶಾಲೆಗಳು ಬಾಗಿಲು ತೆರೆದಿವೆ. ಇದೀಗ ಆರಂಭದಲ್ಲಿಯೇ ಹೆಮ್ಮಾರಿಯ ಆರ್ಭಟ ಶುರುವಾಗಿರೋದು ಆತಂಕವನ್ನು ಮೂಡಿಸಿದೆ.

ಇದನ್ನೂ ಓದಿ : ಶಿಕ್ಷಕರ ರಜೆಗೆ ಬೀಳುತ್ತೆ ಕತ್ತರಿ : ಪ್ರಾಥಮಿಕ ಶಾಲಾರಂಭದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದೇನು ?

ಇದನ್ನೂ ಓದಿ : ರಾಜ್ಯದಲ್ಲಿ ಐದು ಸಾವಿರ ಶಿಕ್ಷಕರ ನೇಮಕ : ಸಚಿವ ಬಿ.ಸಿ.ನಾಗೇಶ್‌

ಇದನ್ನೂ ಓದಿ :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಶಾಲೆ, ಕಾಲೇಜು ಆರಂಭ

(Coronal infection of 35 students in Madikeri on Reopen School )

Comments are closed.