ಪೋಟೋದಲ್ಲೇ ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ ಕಾಲಿವುಡ್ ನಟಿ

ಸದಾ ವಿವಾದಗಳಿಂದಲೇ ಸುದ್ದಿಯಾಗೋ ನಟಿ ಮೀರಾ ಮಿಥುನ್ ಈ ಬಾರಿ  ಪೋಟೋಶೂಟ್  ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ತಮ್ಮ ಎಣ್ಣೆಗಪ್ಪಿನ ಸಪೂರ ಮೈಮಾಟವನ್ನು ಬಿಚ್ಚಿಟ್ಟ ಮೀರಾ ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಮಾಡೆಲಿಂಗ್ ಮೂಲಕವೇ ಕೆರಿಯರ್ ಆರಂಭಿಸಿದ ಕಾಲಿವುಡ್ ನಟಿ ಮೀರಾ ಮಿಥುನ್ 2000 ಇಸ್ವಿಯಲ್ಲಿ ಕೆರಿಯರ್ ಆರಂಭಿಸಿದ್ದು, 8 ತೊಟ್ಟಕ್ಕಲ್ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿಯಾಗಿದ್ದರು.

2015 ರಲ್ಲಿ ಜೋಡಿನಂಬರ್ 1 ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಮೀರಾ ಮಿಥುನ್, 2019 ರಲ್ಲಿ ಬಿಗ್ ಬಾಸ್ ತಮಿಳು ಸೀಸನ್ 3 ರಲ್ಲಿ ಸ್ಪರ್ಧಿಯಾಗಿ ಹೆಸರು ಗಳಿಸಿದ್ದರು.

ವಿವಾಹವಾಗಿ ಪತಿಯಿಂದ ವಿಚ್ಛೇಧನ ಪಡೆದಿರುವ ಮೀರಾ ಮಿಥುನ್ ಸದಾ ಕಾಂಟ್ರಾವರ್ಸಿಗಳಿಂದಲೇ  ಗುರುತಿಸಿಕೊಂಡಿದ್ದಾರೆ.

ಮಿಸ್ ಮದ್ರಾಸ್ 2015 ರಲ್ಲಿ ರನ್ನರ್ ಅಪ್ ಆಗಿರೋ ಮೀರಾ ಸೀರೆ ಸೇರಿದಂತೆ ಹಲವು ವಸ್ತುಗಳ ಮಾಡೆಲ್ ಆಗಿಯೂ ಮಿಂಚಿದ್ದಾರೆ.

2021 ರ ಅಗಸ್ಟ್ ನಲ್ಲಿ ಜಾತಿನಿಂದನೆ ಕಾರಣಕ್ಕೆ ವಿವಾದಕ್ಕೊಳಗಾದ ಮೀರಾರನ್ನು ತಮಿಳುನಾಡಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೂ ನೀಡಲಾಗಿತ್ತು.

ತಮಿಳು ಚಿತ್ರರಂಗದಿಂದ ಕೆಳವರ್ಗದ ಜನರನ್ನು ಹೊರ ಹಾಕಬೇಕೆಂದು ಮೀರಾ ಮಿಥುನ್ ಮಾತನಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ :‌ ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್

ಇದನ್ನೂ ಓದಿ :  ನಾಗಿನಿಯ ಹಾಟ್ ಅವತಾರ: ಪಡ್ಡೆಗಳ ನಿದ್ದೆ ಕದ್ದ ದೀಪಿಕಾ ದಾಸ್

ಇದನ್ನೂ ಓದಿ : ಮತ್ತೇರಿಸುತ್ತಿದೆ ಬಹುಭಾಷಾ ಬೆಡಗಿ ಅಮೈರಾ ದಸ್ತರ್ ಹಾಟ್ ಪೋಟೋಸ್

( kollywood actress meera mithun hot photo shoot )

Comments are closed.