Karnataka Teachers Appointment : ಒಂದಿಲ್ಲೊಂದು ಎಡವಟ್ಟಿನಿಂದಲೇ ಸದ್ದು ಮಾಡೋ ಬಿಬಿಎಂಪಿ ಈ ಭಾರಿ ಬಲುದೊಡ್ಡ ಎಡವಟ್ಟು ಮಾಡಿ ಟೀಕೆಗೆ ಗುರಿಯಾಗಿದೆ. ಮಕ್ಕಳ ವಿಷ್ಯದಲ್ಲಿ ಬಿಬಿಎಂಪಿ ಮಾಡಿರೋ ತಪ್ಪಿನಿಂದಾಗಿ ಪ್ರತಿಪಕ್ಷಗಳು, ಪೋಷಕರು ಸೇರಿದಂತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ನೇಮಿಸಲು ನಿರ್ಲಕ್ಷ್ಯ ತೋರಿರೋ ಬಿಬಿಎಂಪಿ (BBMP) ಶಿಕ್ಷಕರ ನೇಮಕಕ ಟೆಂಡರ್ (Teachers Appointment Tender) ನ್ನು ಸೆಕ್ಯುರಿಟಿ ಗಾರ್ಡ್ ನೇಮಿಸುವ ಏಜೆನ್ಸಿಗೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದೆ.

ಬಿಬಿಎಂಪಿಯ ಈ ನಡೆಯಿಂದ ಮಕ್ಕಳ ಶಿಕ್ಷಣದ ಜೊತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಅನ್ನೋ ಆಕ್ರೋಶ ಸೋಷಿಯಲ್ ಮೀಡಿಯಾ ದಲ್ಲಿ ವ್ಯಕ್ತವಾಗ್ತಿದ್ದು, ಗುಣಮಟ್ಟದ ಶಿಕ್ಷಣ ಕೊಡೋದಕ್ಕೆ ರಾಜ್ಯ ಸರ್ಕಾರಕ್ಕೆ ಆಗ್ತಿಲ್ವಾ?ಮಕ್ಕಳ ಶಿಕ್ಷಣ ವನ್ನ ಸೆಕ್ಯುರಿಟಿ ಸಂಸ್ಥೆಗೆ ಮಾರಾಟ ಮಾಡ್ತಿದ್ಯಾ ಸರ್ಕಾರ? ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಸಚಿವರು, ಶಾಸಕರು, ರಾಜಕೀಯ ಪಕ್ಷಗಳು ಪ್ರಶ್ನೆ ಮಾಡ್ತಿವೆ.
ಶಾಲಾರಂಭದ ಹೊತ್ತಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಸ್ಕೂಲ್ಕ್ ಗಳಿಗೆ ಶಿಕ್ಷಕರ ನೇಮಕಾತಿ ಮಾಡಬೇಕಿದೆ. ಹೀಗಾಗಿ ಶಾಲಾ ಕಾಲೇಜುಗಳಿಗೆ ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕದ ಟೆಂಡರ್ ಕರೆದಿರುವ ಬಿಬಿಎಂಪಿ ಹಿಂದೇ ಮುಂದೇ ಯೋಚಿಸದೇ ಬಿಬಿಎಂಪಿ ಶಾಲಾ- ಕಾಲೇಜು ಶಿಕ್ಷಕರ ನೇಮಕಾತಿಯನ್ನ ಸೆಕ್ಯುರಿಟಿ ಸಂಸ್ಥೆಗೆ ಟೆಂಡರ್ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಒಟ್ಟು 700 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಸರ್ಕಾರ ನಿರ್ಧರಿಸಿತ್ತು. ಅದಕ್ಕಾಗಿ ಟೆಂಡರ್ ಕೂಡ ಕರೆದಿತ್ತು. ಈ ವೇಳೆ ಟೆಂಡರ್ ಗೆ ಅಪ್ಲೈ ಮಾಡಿದ್ದ ಚಿಕ್ಕಮಗಳೂರು ಮೂಲದ ಸೆಕ್ಯೂರಿಟಿ ಗಾರ್ಡ್ ನೇಮಿಸುವ ಏಜೆನ್ಸಿಗೆ ಬಿಬಿಎಂಪಿ ಶಿಕ್ಷಕರ ನೇಮಕಾತಿಗೆ ಟೆಂಡರ್ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಬಿಬಿಎಂಪಿ ಶಾಲಾ- ಕಾಲೇಜು ಗಳಲ್ಲಿ ಈಗಾಗಲೇ ಶಿಕ್ಷಣದ ಗುಟಮಟ್ಟ ಕುಸಿದಿದೆ. ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬೆಲ್ಲ ಆರೋಪಗಳು ಕೇಳಿಬರ್ತಿವೆ. ಇದರ ಬೆನ್ನಲ್ಲೇ ಸೆಕ್ಯುರಿಟಿ ಕಂಪನಿಯಿಂದ ಟೀಚರ್ ನೇಮಕ ಅದ್ರೆ ಶಿಕ್ಷಣ ಗುಣಮಟ್ಟ ಸಿಗುತ್ತಾ? ಎಂಬ ಪ್ರಶ್ನೆ ಪೋಷಕರನ್ನು ಕಾಡಲಾರಂಭಿಸಿದೆ. ಈಗಾಗಲೇ ಶಿಕ್ಷಕರ ನೇಮಕಾತಿಗೆ ಮೂರು ಸೆಕ್ಯುರಿಟಿ ಕಂಪನಿ ನೇಮಕ ಮಾಡಿರೋ ಬಿಬಿಎಂಪಿ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೆ ಈಗ ಟೆಂಡರ್ ವಿಚಾರ ಬಯಲಾಗುತ್ತಿದ್ದಂತೆ ಸರ್ಕಾರದ ನಡೆಗೆ ಶಿಕ್ಷಕರು, ಮಾಜಿ ಸಚಿವರು ಹಾಗೂ ಪೋಷಕರ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ
ಈ ಬಗ್ಗೆ ಸೋಷಿಯಲ್ ಮೀಡಿಯಾ ದಲ್ಲಿ ನೇರವಾಗಿ ಅಸಮಧಾನ ತೋಡಿಕೊಂಡಿರೋ ಮಾಜಿಸಚಿವ ಸುರೇಶ್ ಕುಮಾರ್, ಶಿಕ್ಷಕರ ಸೇವೆ ಪೂರೈಸಲು ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ” ಈ ಹಿಂದೆಯೂ ಈ ವಿಚಾರವನ್ನು ರಾಜ್ಯದ ಉಪಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದೆ. ಆಗ ಅದನ್ನು ಪರಿಶೀಲಿಸುವುದಾಗಿ ಹೇಳಿ ಪ್ರಕ್ರಿಯೆಯನ್ನು ಸ್ಥಗಿತ ಸ್ಥಗಿತಗೊಳಿಸಲಾಯಿತು. ಇದೀಗ ಮತ್ತೆ ಅದೇ ಹುಚ್ಚು ಅಥವಾ ಹಾಸ್ಯಾಸ್ಪದ ಪ್ರಯತ್ನ ಎಂದು ಟೀಕಿಸಿದ್ದಾರೆ.
ಇನ್ನು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ಈ ಹುಚ್ಚು ನಿರ್ಧಾರದ ಬಗ್ಗೆ ಆಪ್ ಪಕ್ಷದ ಕಾರ್ಯಕರ್ತರು ಕೂಡ ಕೆಂಡಕಾರಿದ್ದು, ಪತ್ರಿಕಾಗೋಷ್ಟಿ ನಡೆಸಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರೋ ಬಿಬಿಎಂಪಿ ಶಾಲೆಗಳ ಗುಣಮಟ್ಟದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬಡವರ ಮಕ್ಕಳು ಓದುವ ಶಾಲೆಯನ್ನು ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ. ಇದರಿಂದ ಮಕ್ಕಳು ಉಜ್ವಲ ಭವಿಷ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದೆ.
ಇದನ್ನೂ ಓದಿ : PG-CET Exams :ಜುಲೈ 13-14 ರಂದು ಪಿಜಿ-ಸಿಇಟಿ ಪರೀಕ್ಷೆ: ಅರ್ಜಿ ಸಲ್ಲಿಕೆಗೆ ಜೂನ್ 17 ಕೊನೆಯ ದಿನ
ಒಟ್ಟಿನಲ್ಲಿ ಸದ್ಯ ಕಾರ್ಪೋರೇಟರ್ ಗಳು ಇಲ್ಲದೇ ಕಳೆದ ಐದಾರು ವರ್ಷದಿಂದ ಕೇವಲ ಅಧಿಕಾರಿಗಳ ಅಡ್ಡೆಯಾಗಿ ಬದಲಾಗಿರುವ ಬಿಬಿಎಂಪಿ ಸದ್ಯ ಹೊಸತೊಂದು ವಿವಾದ ಸೃಷ್ಟಿಸಿದೆ.
ಇದನ್ನೂ ಓದಿ : ರಾಜ್ಯ ಪಠ್ಯಕ್ರಮಕ್ಕೆ ಅನುಮತಿ, ಕೇಂದ್ರ ಪಠ್ಯಕ್ರಮ ಬೋಧನೆ: ಪರೀಕ್ಷಾ ಎಡವಟ್ಟಿನಿಂದ ಬಯಲಾಯ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮ
Karnataka News Security agency for appointing teachers: Parents outraged over government’s decision