Yuvraj Singh 2.0 Loading: ಯುವರಾಜ್‌ ಸಿಂಗ್ ತಯಾರು ಮಾಡಿದ ಹುಡುಗ‌ ಅಭಿಷೇಕ್‌ ಶರ್ಮಾ ಐಪಿಎಲ್’ನಲ್ಲಿ ಧೂಳೆಬ್ಬಿಸಿದ!

Yuvraj Singh 2.0 Loading: ಮಹಾಭಾರತದ ದ್ರೋಣಾಚಾರ್ಯ ಅಪ್ರತಿಮ ಬಿಲ್ಗಾರನಷ್ಟೇ ಅಲ್ಲ, ಒಬ್ಬ ಅತ್ಯುತ್ತಮ ಗುರು ಕೂಡ ಹೌದು. ಹಸ್ತಿನಾವತಿಯ ಕ್ಷತ್ರಿಯ ಕುಮಾರರಿಗೆ ಧನುರ್ವಿದ್ಯೆಯನ್ನು ಧಾರೆ ಎರೆದು, ಅರ್ಜುನನಂಥಾ ಘನವಿಕ್ರಮಿಯನ್ನು ತಯಾರು ಮಾಡಿದ ಮಹಾಗುರು ದ್ರೋಣ.

Yuvraj Singh 2.0 Loading: ಮಹಾಭಾರತದ ದ್ರೋಣಾಚಾರ್ಯ ಅಪ್ರತಿಮ ಬಿಲ್ಗಾರನಷ್ಟೇ ಅಲ್ಲ, ಒಬ್ಬ ಅತ್ಯುತ್ತಮ ಗುರು ಕೂಡ ಹೌದು. ಹಸ್ತಿನಾವತಿಯ ಕ್ಷತ್ರಿಯ ಕುಮಾರರಿಗೆ ಧನುರ್ವಿದ್ಯೆಯನ್ನು ಧಾರೆ ಎರೆದು, ಅರ್ಜುನನಂಥಾ ಘನವಿಕ್ರಮಿಯನ್ನು ತಯಾರು ಮಾಡಿದ ಮಹಾಗುರು ದ್ರೋಣ. ಕೈಯಲ್ಲಿ ಬಿಲ್ಲು ಇರುವವರೆಗೆ ದ್ರೋಣ ಅಜೇಯನಾಗಿದ್ದ. ಆತನನ್ನು ಪರಾಭವಗೊಳಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಅಂತಹ ಮಹಾ ಪರಾಕ್ರಮಶಾಲಿ ಗುರುವಿನ ಸಮರ್ಥ ಶಿಷ್ಯ ಮಧ್ಯಮ ಪಾಂಡವ ಪಾರ್ಥ. ಪರಾಕ್ರಮದಲ್ಲಿ ಗುರುವಿಗೆ ಸರಿಸಮಾನ, ಗುರುವನ್ನೂ ಮೀರಿಸಬಲ್ಲ ಸರ್ವೋತ್ತಮ.

Yuvraj Singh 2.0 coaching Abhishek Sharma Shain in IPL 2024
Image Credit to Original Source

ವೈಟ್’ಬಾಲ್ ಕ್ರಿಕೆಟ್’ನಲ್ಲಿ ಯುವರಾಜ್ ಸಿಂಗ್ (Yuvraj Singh) ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್’ಗಳಲ್ಲಿ ಒಬ್ಬ. ಆತ ಬಾರಿಸುತ್ತಿದ್ದ ಸಿಡಿಲ ಸಿಕ್ಸರ್”ಗಳು, ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದ ಆ ಸಾಟಿಯಿಲ್ಲದ ಆಟ.. ಕ್ರಿಕೆಟ್ ಮೈದಾನದಲ್ಲಿ ಚಿರತೆಯಂಥಾ ವೇಗ.. ಯುವರಾಜನಿಗೆ ಯುವರಾಜನೇ ಸಾಟಿ.

ಇಂಥಾ ಯುವರಾಜ ಸದ್ದಿಲ್ಲದೆ ತನ್ನ ಪಡಿಯಚ್ಚಿನಂಥಾ ಕ್ರಿಕೆಟಿಗನನ್ನು ತಯಾರು ಮಾಡಿದ್ದಾನೆ. ಆತನೇ ಪಂಜಾಬ್’ನ ಪ್ರತಿಭಾವಂತ ಅಭಿಷೇಕ್ ಶರ್ಮಾ (Abhishek Sharma). ವಯಸ್ಸು 23.. ಯುವರಾಜನಂತೆ ಎಡಗೈ ಬ್ಯಾಟರ್, ಎಡಗೈ ಸ್ಪಿನ್ನರ್. ಭಯವಿಲ್ಲದೆ ಬೀಡು ಬೀಸಾಗಿ ಬ್ಯಾಟ್ ಬೀಸುವ ಹೊಡಿಬಡಿಯ ದಾಂಡಿಗ.

ಇದನ್ನೂ ಓದಿ : IPL 2024 Final KKR Champion: ಕೆಕೆಆರ್ ಗೆಲುವಿನ ಹಿಂದೆ ಗಂಭೀರ್ ಮತ್ತು ಅವರಿಬ್ಬರು..!

ಐಪಿಎಲ್ ಟೂರ್ನಿಯಲ್ಲಿ (IPL 2024) ಅಭಿಷೇಕ್ ಶರ್ಮಾ ಆಟವನ್ನು ನೋಡಿದವರು ಈತ ಭಾರತದ ಭವಿಷ್ಯದ ತಾರೆ ಎನ್ನುತ್ತಿದ್ದಾರೆ. ಅನುಮಾನವೇ ಬೇಡ, he is the future star. 237 ಎಸೆತಗಳಲ್ಲಿ 484 ರನ್.. ಸರಿಸುಮಾರು 204 ಬ್ಯಾಟಿಂಗ್ ಸ್ಟ್ರೈಕ್’ರೇಟ್.. ಆಡಿರುವ 15 ಇನ್ನಿಂಗ್ಸ್’ಗಳಲ್ಲಿ ಒಮ್ಮೆಯೂ 30ಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದ್ದೇ ಇಲ್ಲ. ಅಷ್ಟರಲ್ಲೇ ದೊಡ್ಡ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿದ ಆಟಗಾರ ಅಭಿಷೇಕ್ ಶರ್ಮಾ. ಪ್ಲೇ ಆಫ್ ಹಂತದಲ್ಲಿ ಎಡವಿದರೂ ಲೀಗ್ ಹಂತದಲ್ಲಿ ಅಭಿಷೇಕ್ ಶರ್ಮಾ ಆಟ ಅದ್ಭುತ. ಈ ಐಪಿಎಲ್’ನಲ್ಲಿ ಅತೀ ಹೆಚ್ಚು 42 ಸಿಕ್ಸರ್’ಗಳನ್ನು ಬಾರಿಸಿದ್ದಾನೆ ಅಭಿಷೇಕ್ ಶರ್ಮಾ.

Yuvraj Singh 2.0 coaching Abhishek Sharma Shain in IPL 2024
Image Credit to Original Source

ಐಪಿಎಲ್-2024 ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ:
ಪಂದ್ಯ: 16
ಎಸೆತ : 237
ರನ್ : 484
ಸ್ಟ್ರೈಕ್’ರೇಟ್ : 204.21
ಸರಾಸರಿ : 32.26
ಗರಿಷ್ಠ : 75*
ಬೌಂಡರಿ : 36
ಸಿಕ್ಸರ್ : 42

ಇದನ್ನೂ ಓದಿ : Shikhar Dhawan To Marry Mithali Raj? ಮಿಥಾಲಿ ರಾಜ್ ಜೊತೆ ಶಿಖರ್ ಧವನ್ ಮದುವೆ..? ವಿವಾಹದ ಬಗ್ಗೆ ಗಬ್ಬರ್ ಹೇಳಿದ್ದೇನು..?

2021ರಲ್ಲಿ ಮಧ್ಯಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಬಾರಿಸಿದ್ದ.

Yuvraj Singh 2.0 coaching Abhishek Sharma Shain in IPL 2024

Comments are closed.