Karnataka PUC exams updates : ಕೊರೋನಾ ಭಯದ ನಡುವೆಯೂ ಪಿಯುಸಿ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿಯೇ ಅಂತಿಮ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದರೊಂದಿಗೆ ಜನವರಿ ತಿಂಗಳು ಕಾಲಿಡುತ್ತಿದ್ದಂತೆ ನಿಧಾನಕ್ಕೆ ಪರೀಕ್ಷಾ ಜ್ವರವೂ ಕಾವೇರತೊಡಗಿದೆ. ಹೀಗಾಗಿ ಕೊರೋನಾ ನಡುವೆಯೂ ನಡೆದ ಅಲ್ಪ ಸ್ವಲ್ಪ‌ಭೌತಿಕ ತರಗತಿಗಳ ಸಹಾಯದಿಂದಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಈ‌ ಮಧ್ಯೆ ಪಿಯು ಬೋರ್ಡ್ ಗಂಭೀರವಾಗಿ ಪರೀಕ್ಷಾ ತಯಾರಿ ನಡೆಸಿದ್ದು, ( Karnataka PUC exams updates ) ಈಗಾಗಲೇ ಪ್ರಕಟಿಸಿರುವ ತಾತ್ಕಾಲಿಕ ವೇಳಾಪಟ್ಟಿಯೇ ಅಂತಿಮ ಗೊಳ್ಳೋದು ಬಹುತೇಕ ಖಚಿತವಾಗಿದೆ.

ಕೊರೊನಾ ಕೇಸ್ ಹೆಚ್ಚಿದ್ರೂ ಈ ಬಾರಿ ಪಿಯು ಪರೀಕ್ಷೆ ಮೇಲೆ ಪ್ರಭಾವ ಬೀರುವ ಲಕ್ಷಣಗಳಿಲ್ಲ. ತಾತ್ಕಾಲಿಕ ಪರೀಕ್ಷೆ ಪಟ್ಟಿಯೇ ಅಂತಿಮಗೊಳ್ಳಲಿದ್ದು ಪರೀಕ್ಷೆಯ ಅಂತಿಮ ಘೋಷಣೆ ಯೊಂದೇ ಬಾಕಿ ಇದೆ. ಹೀಗಾಗಿ ಏ.16ರಿಂದ ಮೇ. 4ರವರೆಗೆ ದ್ವಿತೀಯ ಪಿಯು ಪರೀಕ್ಷೆ ಫಿಕ್ಸ್ ಎನ್ನಲಾಗಿದೆ. ಕೊರೋನಾ ಹಾಗೂ ಓಮೈಕ್ರಾನ್ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ 30% ಪಠ್ಯ ಕಡಿತ ಇರಲಿದೆ. ಆದರೆ ಕೋರ್, ಐಚ್ಚಿಕ ವಿಷಯಗಳಲ್ಲಿ ಯಾವುದೇ ಪಠ್ಯ ಕಡಿತವಿಲ್ಲ ಐಚ್ಛಿಕ, ಭಾಷಾ, ಕೋರ್ ವಿಷಯಗಳಲ್ಲಿ ಬಹು ಆಯ್ಕೆ ಪ್ರಶ್ನೆ ಈ ವರ್ಷ ಭಾಷಾ ವಿಷಯದಲ್ಲಿ ಶೇ.30ರಷ್ಟು ಪಠ್ಯ ಕಡಿತ ಮಾಡಲಾಗಿದೆ ಎಂದುಪಿಯು ಬೋರ್ಡ್ ನಿರ್ದೇಶಕಿ ಆರ್ ಸ್ನೇಹಲ್ ಪ್ರತಿಕ್ರಿಯೆ ನೀಡಿದ್ದಾರೆ.

ಈಗಾಗಲೇ ಪಿಯು ಬೋರ್ಡ್ ಪ್ರಕಟಿಸಿರುವ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಇಂತಿದೆ.

ಏ.16 ಗಣಿತ, ಶಿಕ್ಷಣ, ಮೂಲ ಗಣಿತ
ಏ.18 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಏ.19 ಮಾಹಿತಿ ತಂತ್ರಜ್ಞಾನ
ಏ.20 ಇತಿಹಾಸ, ಭೌತಶಾಸ್ತ್ರ
ಏ.21 ದ್ವಿತೀಯ ಭಾಷೆ
ಏ.22 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ.23 ರಾಸಾಯನಶಾಸ್ತ್ರ, ಮನಃಶಾಸ್ತ್ರ, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ
ಏ.25 ಅರ್ಥಶಾಸ್ತ್ರ
ಏ.26 ಹಿಂದಿ
ಏ.28 ಐಚ್ಛಿಕ ಕನ್ನಡ, ಅಕೌಂಟ್ಸ್, ಭೂವಿಜ್ಞಾನ
ಏ.29 ಕನ್ನಡ
ಏ.30 ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್
ಮೇ.02 ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ.04 ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.

ಈಗಾಗಲೇ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು 50 ಸಾವಿರದ ಗಡಿದಾಟಿದೆ. ಇನ್ನೆರಡು ವಾರಗಳಲ್ಲಿ ಪ್ರಕರಣಗಳಲ್ಲಿ ಇಳಿಕೆಯಾಗಲಿದೆ ಎಂಬ ನೀರಿಕ್ಷೆ ಇದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಲೆಕ್ಕಾಚಾರ ಆಧರಿಸಿ ಪಿಯು ಬೋರ್ಡ್ ಪರೀಕ್ಷೆ‌ದಿನಾಂಕವನ್ನು ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳು ಈ ತಾತ್ಕಾಲಿಕ ವೇಳಾಪಟ್ಟಿಯನ್ನೇ ಅಂತಿಮ ಎಂದುಕೊಂಡು ಅಭ್ಯಾಸ ಆರಂಭಿಸುವುದು ಸೂಕ್ತ ಎಂಬುದು ಪಿಯು ಬೋರ್ಡ್ ನ ಪರೋಕ್ಷ ಸಲಹೆ.

ಇದನ್ನೂ ಓದಿ : PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : ಸಚಿವರಿಗೆ ಶಾಲೆ ನಡೆಸೋ ಚಿಂತೆ, ಆದರೆ ಶಾಲೆಯಲ್ಲಿ ಹೆಚ್ಚುತ್ತಿದೆ ವಿದ್ಯಾರ್ಥಿಗಳು ಗೈರು : ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯ

( Karnataka PUC exams updates, The tentative schedule is almost final)

Comments are closed.