KL Rahul : ಸರಣಿ ಸೋಲಿನ ಬೆನ್ನಲ್ಲೇ ಸೋಲಿಗೆ ಕಾರಣ ಹೇಳಿದ ನಾಯಕ ಕೆಎಲ್‌ ರಾಹುಲ್‌

ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಏಕದಿನ ಸರಣಿಯನ್ನೂ ಕೈ ಚೆಲ್ಲಿದೆ. ತನ್ನ ನಾಯಕತ್ವದ ಮೊದಲ ಸರಣಿಯಲ್ಲೇ ವೈಟ್‌ವಾಶ್‌ ಮುಖಭಂಗ ಅನುಭವಿಸಿರುವ ರಾಹುಲ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಅತ್ಯಂತ ಕೆಟ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಇದರ ನಡುವಲ್ಲೇ ರಾಹುಲ್‌ ( KL Rahul ) ಸರಣಿ ಸೋಲಿಗೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ವಿರಾಟ್‌ ಕೊಹ್ಲಿ ಅವರನ್ನು ನಾಯಕತ್ವದ ಕೆಳಗಿಳಿಸುತ್ತಲೇ ರೋಹಿತ್‌ ಶರ್ಮಾ ಅವರಿಗೆ ಟೀಂ ಇಂಡಿಯಾದ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಲಾಗಿತ್ತು. ಆದರೆ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವವಹಿಸಿಕೊಂಡಿದ್ದ ಕೆ.ಎಲ್.ರಾಹುಲ್‌ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಲ್ಲಿ ನಿರೀಕ್ಷಿತ ಆಟವನ್ನು ಆಡಿಲ್ಲ. ಜೊತೆಗೆ ಮೂರು ಪಂದ್ಯಗಳನ್ನೂ ರಾಹುಲ್‌ ಕೈಚೆಲ್ಲಿದ್ದಾರೆ. ಮೂರನೇ ಪಂದ್ಯದಲ್ಲಿ ಭಾರತ ಹಲವು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿತ್ತು. ಅಂತಿಮ ಹಂತದಲ್ಲಿ ದೀಪಕ್‌ ಚಹರ್‌ ಗೆಲುವಿನ ನಿರೀಕ್ಷೆ ಮೂಡಿಸಿದ್ದರೂ ಕೂಡ ಗೆಲುವಿನ ದಡ ತಲುಪಿಸುವಲ್ಲಿ ಸಫಲವಾಗಿಲ್ಲ.

ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದರು. ಆದರೆ ಕ್ವಿಂಟನ್ ಡಿ ಕಾಕ್ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಸವಾಲಿನ ಮೊತ್ತವನ್ನು ಕಲೆ ಹಾಕಿತ್ತು. ಕನ್ನಡಿಗ ಪ್ರಸಿದ್ದ ಕೃಷ್ಣ ಅವರ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ 49.5 ಓವರ್‌ಗಳಲ್ಲಿ 287ರನ್‌ ಗಳಿಸಿ ತನ್ನಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಭಾರತ ಮೂರನೇ ಪಂದ್ಯದಲ್ಲಾದ್ರೂ ಗೆಲ್ಲುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಕೋಟ್ಯಾಂತರ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಭಾರತ ಉತ್ತಮ ಹೋರಾಟದ ನಡುವೆಯೂ 49.2 ಓವರ್‌ಗಳಲ್ಲಿ 283 ರನ್‌ಗಳಿಗೆ ಆಲೌಟ್ ಆಗಿದೆ.

ಸರಣಿ ವೈಟ್‌ವಾಷ್‌ ಬೆನ್ನಲ್ಲೇ ಮಾತನಾಡಿರುವ ನಾಯಕ ಕೆ.ಎಲ್.ರಾಹುಲ್‌ ( KL Rahul ), ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಆದರೆ ಅಂತಿಮವಾಗಿ ಸೋಲಿಗೆ ಶರಣಾಗಿದ್ದೇವೆ. ನಮ್ಮ ಪ್ರಯತ್ನ ಫಲಕೊಡಲಿಲ್ಲ. ಉತ್ತ ಶಾಟ್‌ ಸೆಲೆಕ್ಷನ್‌ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ. ತಂಡದ ಬೌಲಿಂಗ್‌ ಕೂಡ ಫಲಕೊಡಲಿಲ್ಲ, ದೀಪಕ್‌ ಚಹರ್‌ ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರೂ ಕೂಡ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ವಿಶ್ವಕಪ್‌ಗೆ ತಂಡವನ್ನು ಕಟ್ಟುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ ಎಂದಿದ್ದಾರೆ.

ಭಾರತ ತಂಡದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಂಡ ಭಾರತದ ಮೊದಲ ನಾಯಕ ಅನ್ನೋ ಹಣೆಪಟ್ಟಿಯನ್ನು ರಾಹುಲ್‌ ಅಂಟಿಸಿಕೊಂಡಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕೆಳಗೆ ಇಳಿಯುತ್ತಲೇ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅಂತಾ ಹಲವು ಆಟಗಾರರು ಆರೋಪಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಯುವ ಆಟಗಾರರು ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇದನ್ನೂ ಓದಿ : ಕೆಎಲ್ ರಾಹುಲ್ ಐಪಿಎಲ್ 2022 ರ ದುಬಾರಿ ಆಟಗಾರ

ಇದನ್ನೂ ಓದಿ : ಅಂಡರ್ 19 ವಿಶ್ವಕಪ್‌ನಲ್ಲಿ ಉಗಾಂಡಕ್ಕೆ ಸೋಲುಣಿಸಿದ ಭಾರತ; ಶಿಖರ್ ಧವನ್ ದಾಖಲೆ ಪುಡಿಪುಡಿ ಮಾಡಿದ ರಾಜ್ ಬಾವಾ

( KL Rahul Talking In the Post Match Presentation after south Africa vs India 3rd ODI)

Comments are closed.