PUB G ಆಟದ ವಿಚಾರಕ್ಕೆ ಮಂಗಳೂರಲ್ಲಿ ಬಾಲಕನ ಕೊಲೆ : ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಹುಷಾರ್..!!

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪಬ್ ಜಿ ಆಟದ ಗೀಳು ಹೆಚ್ಚುತ್ತಿದೆ. ಅಂತಯೇ ಪಬ್ ಆಟದಲ್ಲಿ ಸೋಲು ಗೆಲುವಿನ ವಿಚಾರಕ್ಕೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಬಾಲಕನೋರ್ವನ ಕೊಲೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ‌ ಮಂಗಳೂರು ಹೊರವಲಯದ ಉಳ್ಳಾಲದಲ್ಲಿನ ಕೆ.ಸಿ.ರೋಡ್ ನಿವಾಸಿ ಹನೀಫ್ ಎಂಬವರ ಪುತ್ರ ಆಕೀಫ್ (12 ವರ್ಷ ) ಎಂಬವನೇ ಕೊಲೆಯಾದ ಬಾಲಕ. ಆಕೀರ್ ಉಳ್ಳಾಲದ ಫನಾಹ್ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ. ಇನ್ನು ಉಳ್ಳಾಲದ ನಿವಾಸಿ ದೀಪಕ್ ಎಂಬಾತನೇ ಬಾಲಕನನ್ನು ಕೊಲೆಗೈದ ಯುವಕ.

ಅಷ್ಟಕ್ಕೂ ಆಗಿದ್ದೇನು ?
ಆಕೀರ್ ಗೆ ಪಬ್ ಜಿ‌ ಆಡುವ ಗೀಳು ಹೊಂದಿದ್ದ. ತನಗೆ ಬಿಡುವು ಸಿಕ್ಕಾಗಲೆಲ್ಲಾ, ಮೊಬೈಲ್ ತೆಗೆದುಕೊಂಡು ಪಬ್ ಜೀ ಆಡಿತ್ತಿದ್ದ. ನಿನ್ನೆ ರಾತ್ರಿ 9 ಗಂಟೆಯ ‌ಸುಮಾರಿಗೆ ಬಾಲಕ ಮನೆಯಿಂದ ಹೊರ‌ಗೆ ಹೋಗಿದ್ದಾನೆ. ಆದರೆ ಎಷ್ಡು ಹೊತ್ತು ಕಳೆದರೂ ಬಾಲಕ‌ ಮನೆಗೆ ಮರಳಿಲ್ಲ. ಇದರಿಂದಾಗಿ ಆತಂಕಗೊಂಡವರು ಉಳ್ಳಾಲ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ನಂತರದಲ್ಲಿ ಮನೆಯವರು‌ ಹಾಗೂ ಪೋಷಕರು ಸೇರಿಕೊಂಡು ಬಾಲಕನಿಗಾಗಿ‌ ಹುಡುಕಾಟ ನಡೆಸಿದ್ದಾರೆ. ನಂತರದಲ್ಲಿ ಮನೆಯಿಂದ ಸಮೀಪದಲ್ಲಿರುವ ಕಾಂಪೌಂಡ್ ಪಕ್ಕದಲ್ಲಿನ ಜಾಗದಲ್ಲಿ ಮಲಗಿರುವ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಪೋಷಕರನ್ನು ಸ್ಥಳಕ್ಕೆ ಕರೆಯಿಸಿದಾಗ ಆಕೀರ್ ನದ್ದೇ ಶವ ಅನ್ನೊದು ಬೆಳಕಿಗೆ ಬಂದಿದೆ.

ಆದರೆ ಮೃತದೇಹ ಪತ್ತೆಯಾದ ಸ್ವಲ್ಪ ದೂರದಲ್ಲಿ ರಕ್ತದ‌ ಕಲೆಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮನೆಯವರನ್ನು ವಿಚಾರಣೆಗೆ ಒಳಪಡಿಸಿದಾಗ ಪಬ್ ಜೀ ಆಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಬಾಲಕ ಹಲವು‌ ಸಮಯಗಳಿಂದಲೂ ದೀಪಕ್ ಎಂಬ ಯುವಕನ ಜೊತೆಯಲ್ಲಿ ಆನ್ ಲೈನ್ ನಲ್ಲಿ ಪಬ್ ಜೀ ಆಡುತ್ತಿದ್ದ. ಒಂದು ದಿನ ಮೊಬೈಲ್ ‌ಅಂಗಡಿಯಲ್ಲಿ ಬಾಲಕನಿಗೆ ದೀಪಕ್ ಪರಿಚಯವಾಗಿದೆ. ಪಬ್ ಜೀ ಆಡುವಾಗ ಬಾಲಕನೇ ಗೆಲ್ಲುತ್ತಿದ್ದ. ನೀನು ಬೇರೆಯವರ ಸಹಾಯದಿಂದ ಪಬ್ ಜೀ ಅಡಿತ್ತೀಯಾ. ಹೀಗಾಗಿ ಒಂದು ದಿನ ಇಬ್ಬರೂ ಒಟ್ಟಿಗೆ ಕುಳಿತು ಪಬ್ ಜೀ ಆಡೋಣಾ ಎಂದು ಹೇಳಿದ್ದಾನೆ‌.

ಅದರಂತೆಯೇ ದೀಪಕ್ ಜೊತೆ ರಾತ್ರಿ ಪಬ್ ಜೀ ಅಡೋದಕ್ಕೆ ತೆರಳಿದ್ದಾನೆ. ಆದರೆ ಆಟದಲ್ಲಿ ಬಾಲಕ ಸೋಲನ್ನು ಕಂಡಿದ್ದಾನೆ. ಹೀಗಾಗಿ ನೀನು ಇಷ್ಟು ದಿನ ಮೋಸ‌ ಮಾಡಿ ಗೆಲುವನ್ನು ಕಂಡಿದ್ದೀಯಾ ಎಂದು ದೀಪಕ್ ಕಿರಿಕ್ ತೆಗೆದಿದ್ದಾನೆ. ಈ ವೇಳೆಯಲ್ಲಿ ಬಾಲಕ ಸಣ್ಣ ಕಲ್ಲಿನಿಂದ ತನಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡು ದೊಡ್ಡ ಕಲ್ಲಿನಿಂದ ಬಾಲಕನ ಮೇಲೆ ಹಲ್ಲೆ ಮಾಡಿದ್ದೇನೆ. ಬಾಲಕ ಕುಸಿದು ಬಿದ್ದಿದ್ದಾನೆ. ನಂತರ ಬಾಲಕನನ್ನು ಅಲ್ಲಿಯೇ ಮಲಗಿಸಿ‌ ಮನೆಗೆ ಬಂದಿದ್ದೇನೆ ಎಂದು ದೀಪಕ್ ವಿಚಾರಣೆಯ ವೇಳೆಯಲ್ಲಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಪೋಷಕರು‌ ಮಕ್ಕಳ ಕೈಗೆ ಮೊಬೈಲ್‌ ನೀಡುವ ಮುನ್ನ ಎಚ್ಚರ ವಹಿಸಿ. ಆನ್‌ಲೈನ್ ಗೇಮ್ ಇಂದು ಮಕ್ಕಳ ಜೀವಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಎಚ್ಚರದಿಂದ ಇರಿ ಎಂದು ಆಯುಕ್ತರು‌ ಮನವಿ ಮಾಡಿದ್ದಾರೆ. ಇದೀಗ ಬಾಲಕ ಕೊಲೆಯಾಗುತ್ತಿದ್ದಂತೆಯೇ ಕರಾವಳಿಗರು ಬೆಚ್ಚಿಬಿದ್ದಿದ್ದಾರೆ. ಬಾಲಕ‌ನ ಕೊಲೆಯ ಹಿಂದೆ ಕೇವಲ ದೀಪಕ್‌ ಮಾತ್ರವೇ ಇರೋದಾ, ಬೇರೆಯವರ ಕೈವಾಡವಿದೆಯೇ ಅನ್ನೋ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.