ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿಕೆ, ಮಹಾವೀರ ಜಯಂತಿ ರಜೆ ಯಾವಾಗ
ಮಾರ್ಚ್ 30ರಂದು ಸರ್ಕಾರಿ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ, ಅಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಯ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದ ಕಾರಣ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ.

karnataka sslc exam postponed : ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮಾರ್ಚ್ 30ರಂದು ನಡೆಯಬೇಕಿದ್ದ ತೃತೀಯ ಭಾಷೆಯ ಪರೀಕ್ಷೆಯನ್ನು ಮುಂದೂಡಲಾಗಿದ್ದು, ರಾಜ್ಯ ಸರ್ಕಾರವು ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯ ದಿನಾಂಕದಲ್ಲಿಯೂ ಬದಲಾವಣೆ ಮಾಡಿದೆ.
ಪರೀಕ್ಷೆ ಮುಂದೂಡಿಕೆಗೆ ಕಾರಣವೇನು ?
ಪೂರ್ವ ನಿಗದಿತ ವೇಳಾಪಟ್ಟಿಯಂತೆ ಮಾರ್ಚ್ 31ರಂದು ಮಹಾವೀರ ಜಯಂತಿ ಸರ್ಕಾರಿ ರಜೆ ಘೋಷಿಸಲಾಗಿತ್ತು. ಆದರೆ, ಜೈನ ಧರ್ಮೀಯರ ಮನವಿಯ ಮೇರೆಗೆ ಹಾಗೂ ಧಾರ್ಮಿಕ ಪಂಚಾಂಗಗಳ ಅನ್ವಯ, ರಾಜ್ಯ ಸರ್ಕಾರವು ಮಹಾವೀರ ಜಯಂತಿ ರಜೆಯನ್ನು ಮಾರ್ಚ್ 31ರ ಬದಲಾಗಿ ಮಾರ್ಚ್ 30ಕ್ಕೆ (ಸೋಮವಾರ) ಮಾರ್ಪಡಿಸಿ ಆದೇಶ ಹೊರಡಿಸಿದೆ.
ಮಾರ್ಚ್ 30ರಂದು ಸರ್ಕಾರಿ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ, ಅಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಯ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದ ಕಾರಣ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ:
ಪರೀಕ್ಷಾ ಮಂಡಳಿಯ ಪ್ರಕಟಣೆಯಂತೆ ವಿದ್ಯಾರ್ಥಿಗಳು ಈ ಕೆಳಗಿನ ಬದಲಾವಣೆಗಳನ್ನು ಗಮನಿಸಬೇಕು:
- ಹಳೆಯ ದಿನಾಂಕ: ಮಾರ್ಚ್ 30, 2026 (ತೃತೀಯ ಭಾಷೆ – ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು ಇತ್ಯಾದಿ)
- ಹೊಸ ದಿನಾಂಕ: ಮಾರ್ಚ್ 31, 2026 (ಮಂಗಳವಾರ)
- ಸಮಯ: ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ (ಯಾವುದೇ ಬದಲಾವಣೆ ಇಲ್ಲ).
Also Read : ಸರ್ಕಾರಿ ಶಾಲೆಗಳ ರಕ್ಷಣೆಗೆ ಹೊಸ ಬಿಲ್ : 12 ವರ್ಷ ಶಾಲೆ, ಕಾಲೇಜು ಇದ್ದ ಭೂಮಿ ಸರ್ಕಾರಕ್ಕೆ
ಎಸ್‌ಎಸ್‌ಎಲ್‌ಸಿ ಉಳಿದ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ
ಮಾರ್ಚ್ 30ರ ಪರೀಕ್ಷೆಯನ್ನು ಮಾತ್ರ ಒಂದು ದಿನ ಮುಂದೂಡಲಾಗಿದ್ದು, ಉಳಿದ ವಿಷಯಗಳ ಪರೀಕ್ಷೆಗಳು ಅಂದರೆ ಏಪ್ರಿಲ್ 2ರಂದು ನಡೆಯಲಿರುವ ಸಮಾಜ ವಿಜ್ಞಾನ ಪರೀಕ್ಷೆಯು ಮೊದಲಿನ ವೇಳಾಪಟ್ಟಿಯಂತೆಯೇ ನಡೆಯಲಿದೆ. ರಾಜ್ಯಾದ್ಯಂತ ಸುಮಾರು 8.65 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದು, ಗೊಂದಲಕ್ಕೊಳಗಾಗದಂತೆ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಮಾಹಿತಿಗಾಗಿ ಶಾಲಾ ಮುಖ್ಯೋಪಾಧ್ಯಾಯರನ್ನು ಅಥವಾ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ಸಂಪರ್ಕಿಸಲು ಕೋರಲಾಗಿದೆ. ರಜೆ ಬದಲಾವಣೆಯಿಂದಾಗಿ ಸಾರ್ವಜನಿಕ ರಜೆ ಈಗ ಮಾರ್ಚ್ 30ರಂದು ಇರಲಿದ್ದು, ಮಾರ್ಚ್ 31ರಂದು ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
Also Read : ಶಾಲಾ ಶಿಕ್ಷಕರಿಗೆ ಹೊಸದೊಂದು ಹೊಣೆ : ಮೊಟ್ಟೆ ಬೇಯಿಸುವುದು ಇನ್ನು ಗುರುಗಳ ಜವಾಬ್ದಾರಿ
ಮಾರ್ಚ್ 18ರಂದು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಪ್ರಥಮ ಭಾಷೆ, ವಿಜ್ಞಾನ/ ರಾಜ್ಯಶಾಸ್ತ್ರ/ ಸಂಗೀತ ಪರೀಕ್ಷೆ ಹಾಗೂ ದ್ವಿತೀಯ ಭಾಷೆಯ ಪರೀಕ್ಷೆಗಳು ಮುಕ್ತಾಯಗೊಂಡಿದೆ. ಉಳಿದಂತೆ ಮಾರ್ಚ್ 31ರಂದು ತೃತೀಯ ಭಾಷೆ, ಎಪ್ರಿಲ್ 1ರಂದು ಜೆಟಿಎಸ್ , ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಅರ್ಥಶಾಸ್ತ್ರ ಹಾಗೂ ಎಪ್ರಿಲ್ 2 ರಂಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಬೇಕಾಗಿದೆ.
karnataka sslc exam postponed march 30 mahaveer jayanthi holiday change Kannada News



