ಎಸ್‌ಎಸ್‌ಎಲ್‌ಸಿ ಫಲಿತಾಂಶ 2023 : ವಿದ್ಯಾರ್ಥಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : Karnataka SSLC Result 2023 : ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಆದ್ರೆ ಇದೀಗ ಚುನಾವಣೆಯ ಬಳಿಕವೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಈ ಕುರಿತು ಶೀಘ್ರದಲ್ಲಿಯೇ ಫಲಿತಾಂಶದ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.

ಮೇ 10 ರಂದು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 11 ಅಥವಾ 12 ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಬಾರಿ ಮಾರ್ಚ್ 31 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿದ್ದು, ಏಪ್ರಿಲ್ 15ಕ್ಕೆ ಪರೀಕ್ಷೆಗಳು ಮುಕ್ತಾಯಗೊಂಡಿದ್ದವು. ಈ ಭಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸುಮಾರು 8.6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. 62 ಸಾವಿರ ಶಿಕ್ಷಕರು ಮೌಲ್ಯ ಮಾಪನ ಕಾರ್ಯವನ್ನು ಕೈಗೊಂಡಿದ್ದರು.

ಕರ್ನಾಟಕ SSLC ಫಲಿತಾಂಶ (Karnataka SSLC Result 2023) ವೀಕ್ಷಿಸುವುದು ಹೇಗೆ ?

  • ಹಂತ 1: ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ karresults.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ಹಂತ 2: ಮುಖಪುಟದಲ್ಲಿ ಲಭ್ಯವಿರುವ ‘ಕರ್ನಾಟಕ SSLC ಫಲಿತಾಂಶ 2023’ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
  • ಹಂತ 3: ಇದು ನಿಮ್ಮನ್ನು KSEAB SSLC ಫಲಿತಾಂಶ 2023 ಲಾಗಿನ್ ವಿಂಡೋಗೆ ಮರುನಿರ್ದೇಶಿಸುತ್ತದೆ.
  • ಹಂತ 4: ಮುಂದಿನ ಪುಟದಲ್ಲಿ, ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು.
  • ಹಂತ 5: ವಿವರಗಳನ್ನು ಸಲ್ಲಿಸಿ ಮತ್ತು SSLC ಫಲಿತಾಂಶ 2023 ಕರ್ನಾಟಕವು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
  • ಹಂತ 6: ಫಲಿತಾಂಶದ PDF ಅನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಕರ್ನಾಟಕ SSLC ಫಲಿತಾಂಶ 2023 ರ ಮುದ್ರಣವನ್ನು ತೆಗೆದುಕೊಳ್ಳಬಹುದು..
  • ಕರ್ನಾಟಕದ 10 ನೇ ತರಗತಿ ವಿದ್ಯಾರ್ಥಿಗಳು ಫಲಿತಾಂಶಗಳ ಆಧಾರದ ಮೇಲೆ 11 ನೇ ತರಗತಿಗೆ ತಮ್ಮ ಆದ್ಯತೆಯ ಕೋರ್ಸ್ ಗಳಿಗೆ ಸೇರ್ಪಡೆಯಾಗಲು ಸಹಕಾರಿಯಾಗುತ್ತದೆ. 2022ರಲ್ಲಿ ಒಟ್ಟು 8.73 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಶೇಕಡಾ 85.63 ರಷ್ಟು ಫಲಿತಾಂಶ ಬಂದಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು SMS ಮೂಲಕ ಪರಿಶೀಲಿಸಿ

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ವೆಬ್‌ಸೈಟ್‌ ಮೂಲಕ ಮಾತ್ರವಲ್ಲ, ತಮ್ಮ ಮೊಬೈಲ್‌ ಪೋನ್‌ ಮೂಲಕವೂ ವೀಕ್ಷಿಸಬಹುದಾಗಿದೆ. ಏಕಕಾಲದಲ್ಲಿ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಪರೀಕ್ಷೆಯ ಫಲಿತಾಂಶ ವೀಕ್ಷಿಸಲು ಪ್ರವೇಶಿಸುವುದರಿಂದ ವೆಬ್‌ಸೈಟ್‌ ಕ್ರ್ಯಾಶ್‌ ಆಗುವ ಸಾಧ್ಯತೆಯಿದೆ. ಈ ವೇಳೆಯಲ್ಲಿ ವಿದ್ಯಾರ್ಥಿಗಳು ಎಸ್‌ಎಂಎಸ್‌ ಮೂಲಕ ಫಲಿತಾಂಶವನ್ನು ಪಡೆದುಕೊಳ್ಳಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. ಈ ಕೆಳಗಿನ ಮಾರ್ಗವನ್ನು ಅನುಸರಿಸುವ ಮೂಲಕ ಎಸ್‌ಎಂಎಸ್‌ ಮೂಲಕ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಮೊಬೈಲ್‌ನಲ್ಲಿ SMS ಆಯ್ಕೆಯನ್ನು ತೆರೆಯಿರಿ ಮತ್ತು ಈ ಸ್ವರೂಪದಲ್ಲಿ ಪಠ್ಯ ಸಂದೇಶವನ್ನು ಟೈಪ್ ಮಾಡಿ: KAR10<ಸ್ಪೇಸ್>ರೋಲ್ ಸಂಖ್ಯೆ.
ನಂತರ, ಅದನ್ನು 56263
ಗೆ ಕಳುಹಿಸಿ, ಈಗ ನೀವು ಕರ್ನಾಟಕ SSLC ಫಲಿತಾಂಶ 2023 ರ ಪಠ್ಯ ಸಂದೇಶವನ್ನು ಪಡೆಯುತ್ತೀರಿ, ಅದನ್ನು SMS ನಂತೆ ಅದೇ ಸಂಖ್ಯೆಗೆ ಕಳುಹಿಸಲಾಗುತ್ತದೆ. ಇದನ್ನೂ ಓದಿ : LKG Age Limit : ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯೋಮಿತಿ ಕಡ್ಡಾಯ

Karnataka SSLC Result 2023 : ಶೇಕಡಾವಾರು ಶ್ರೇಣಿ

90 – 100 A+
80 – 89 A
70 – 79 B+
60 – 69 B
50 – 59 C+
40 – 49 C 4
30 – 39 D+ 3
0 – 29 D 2

ಹಿಂದಿನ ವರ್ಷದ ಫಲಿತಾಂಶದ ಅಂಕಿಅಂಶ :

ಒಟ್ಟು ವಿದ್ಯಾರ್ಥಿಗಳು 8,73,859
ಹೊಸ ನೋಂದಣಿಗಳು 8,07,206
ಒಟ್ಟು 8,53,436 ವಿದ್ಯಾರ್ಥಿಗಳು ಹಾಜರು
ಒಟ್ಟು 7,30,881 ವಿದ್ಯಾರ್ಥಿಗಳು ಉತ್ತೀರ್ಣ
ಬಾಲಕರ ಉತ್ತೀರ್ಣ ಶೇಕಡಾ 81.3%
ಬಾಲಕಿಯರ ಉತ್ತೀರ್ಣ ಶೇಕಡಾ 90.29%
ಒಟ್ಟಾರೆ ಉತ್ತೀರ್ಣ ಶೇಕಡಾ 85.63%
625 ಅಂಕ ಗಳಿಸಿದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 145
624 ಅಂಕ ಗಳಿಸಿದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 309
623 ಅಂಕ ಗಳಿಸಿದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 472

ಇದನ್ನೂ ಓದಿ : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ

Comments are closed.