KCET results 2022 Declared : ಸಿಇಟಿ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರು : 2021-22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶ (KCET results 2022 Declared) ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ ಅಶ್ವತ್ಥ್​ ನಾರಾಯಣ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಯುವಕರೇ ಮೇಲುಗೈ ಸಾಧಿಸಿದ್ದಾರೆ. ಪಶುವೈದ್ಯಕೀಯ ಶಾಸ್ತ್ರದಲ್ಲಿ ಹೃಷಿಕೇಶ್‌ ಪ್ರಥಮ ರಾಂಕ್‌ ಪಡೆದುಕೊಂಡಿದ್ದರೆ, ಮನೀಶ್‌ ದ್ವಿತೀಯ ರಾಂಕ್‌ ಗಳಿಸಿದ್ದಾರೆ.

ಈ ಬಾರಿ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ನಲ್ಲಿ 1,71,656 ರಾಂಕ್‌, ಕೃಷಿ 1,39,968 ರಾಂಕ್‌, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರಾಂಕ್‌, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರಾಂಕ್‌ ಬಂದಿದೆ. ಸಿಇಟಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ Kea.kar.nic.in ಮತ್ತು karesults.nic.in ಮೂಲಕ ಪಡೆಯಬಹುದಾಗಿದೆ.

ಇಂಜಿನಿಯರಿಂಗ್‌ ವಿಭಾಗ
ಯಲಹಂಕದ ನ್ಯಾಷನಲ್‌ ಪಬ್ಲಿಕ್‌ ಸ್ಕೂಲಿನ ಅಪೂರ್ವ ತಂದನ್‌ ಪ್ರಥಮ ರಾಂಕ್‌ ಪಡೆದಿದ್ರೆ, ಮಾರತಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಸ್ಕೂಲಿನ ಸಿದ್ದಾರ್ಥ್‌ ಸಿಂಗ್‌ ದ್ವಿತೀಯ ರಾಂಕ್‌ ಹಾಗೂ ಚೈತನ್ಯ ಟೆಕ್ನೋ ಸ್ಕೂಲಿನ ವೆಂಕಟ ಮಧು ತೃತೀಯ ರಾಂಕ್‌ ಪಡೆದುಕೊಂಡಿದ್ದಾರೆ.

ಪಶು ವೈದ್ಯಕೀಯ
ಬೆಂಗಳೂರಿನ ನ್ಯಾಷನಲ್‌ ಸೆಂಟರ್‌ ಫಾರ್‌ ಎಕ್ಸಲೆನ್ಸಿಯ ಹೃಷಿಕೇಶ ನಾಗಭೂಷಣ ಪ್ರಥಮ ರಾಂಕ್‌, ಕೆ.ಆರ್.ಪುರಂ ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಸ್ಕೂಲಿನ ಮನೀಶ್‌ ಎಸ್.‌ ಎ ದ್ವಿತೀಯ ರಾಂಕ್‌ ಹಾಗೂ ಬೆಂಗಳೂರಿನ ಚೈತನ್ಯ ಟೆಕ್ನೋ ಸ್ಕೂಲಿನ ಶುಭಾ ಕೌಶಿಕ್‌ ತೃತೀಯ ರಾಂಕ್‌ ಪಡೆದುಕೊಂಡಿದ್ದಾರೆ.

ಯೋಗ ಮತ್ತು ನ್ಯಾಚುರೋಪತಿ
ಬೆಂಗಳೂರಿನ ನ್ಯಾಷನಲ್‌ ಸೆಂಟರ್‌ ಫಾರ್‌ ಎಕ್ಸಲೆನ್ಸಿಯ ಹೃಷಿಕೇಶ ನಾಗಭೂಷಣ ಪ್ರಥಮ ರಾಂಕ್‌, ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ವೃಜೇಶ್‌ ವೀರೇಂದ್ರ ಶೆಟ್ಟಿ ದ್ವಿತೀಯ ಹಾಗೂ ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಕೃಷ್ಣ ಎಸ್.ಆರ್.‌ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಿಫಾರ್ಮ್‌
ಬೆಂಗಳೂರಿನ ವಿದ್ಯಾರಣ್ಯಪುರದ ನಾರಾಯಣ ಇ ಟೆಕ್ನೋ ಸ್ಕೂಲ್‌ನ ಶಿಶಿರ್‌ ಕೆ.ಆರ್‌ ಪ್ರಥಮ, ನ್ಯಾಷನಲ್‌ ಸೆಂಟರ್‌ ಫಾಕ್‌ ಎಕ್ಸಲೆನ್ಸಿ ಯ ಹೃಷಿಕೇಶ ನಾಗಭೂಷಣ, ಬೆಂಗಳೂರಿನ ಯಲಹಂಕದ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಅಪೂರ್ವ ತಂದನ್‌ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಿಎಸ್ಸಿ ( ಕೃಷಿ )
ಬೆಂಗಳೂರಿನ ಎಚ್‌ಎಎಲ್‌ ಪಬ್ಲಿಕ್‌ ಸ್ಕೂಲ್‌ ನ ಅರ್ಜುನ್‌ ರವಿಶಂಕರ್‌ ಪ್ರಥಮ, ಬೆಂಗಳೂರು ಉಳ್ಳಾಲ ಮುಖ್ಯರಸ್ತೆಯಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌ನ ಸುಮೀತ್‌ ಎಸ್.‌ ಪಾಟೀಲ್‌ ದ್ವಿತೀಯ, ತುಮಕೂರಿನ ವಿದ್ಯಾನಿಕೇತನ ಪಿಯು ಕಾಲೇಜಿನ ಸುದೀಪ್‌ ವೈ.ಎಂ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸಿಇಟಿ ಫಲಿತಾಂಶಗಳನ್ನು ಪರಿಶೀಲಿಸಲು ಹಂತ 2022

  • KEA KCET ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – kea.kar.nic.in 2022
  • ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನೋಂದಣಿ ಸಂಖ್ಯೆಯನ್ನು ನಮೂದಿಸಿ.
  • “ಸಲ್ಲಿಸು” ಕ್ಲಿಕ್ ಮಾಡಿ.
  • ಕರ್ನಾಟಕ ಫಲಿತಾಂಶ KCET ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  • KCET ಪರೀಕ್ಷೆಯ ಫಲಿತಾಂಶ 2022 ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ : NEET Answer Key: ನೀಟ್ ಉತ್ತರದ ಕೀಲಿ ಬಿಡುಗಡೆ ಸಾಧ್ಯತೆ; ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ

ಇದನ್ನೂ ಓದಿ : Heavy Rain School Holiday : ಭಾರೀ ಮಳೆ ಮಂಗಳೂರು, ಮೂಡಬಿದಿರೆ, ಬಂಟ್ವಾಳ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ

KCET results 2022 Declared, Click here to view result

Comments are closed.