Uttarakhand Heavy Rain:ಉತ್ತರಾಖಂಡದಲ್ಲಿ ಭಾರೀ ಮಳೆ; ಹೈ ಅಲರ್ಟ್ ಘೋಷಣೆ

ಭಾರತೀಯ ಹವಾಮಾನ ಇಲಾಖೆ (ಐ.ಎಂ.ಡಿ) ಉತ್ತರಾಖಂಡದ ಹಲವು ಜಿಲ್ಲೆಗಳಿಗೆ ‘ಆರೆಂಜ್’ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಡೆಹ್ರಾಡೂನ್, ನೈನಿತಾಲ್, ತೆಹ್ರಿ, ಪೌರಿ, ಚಂಪಾವತ್, ಚಮೋಲಿ, ಪಿಥೋರಗಢ್ ಮತ್ತು ಬಾಗೇಶ್ವರ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.ಹವಾಮಾನ ಇಲಾಖೆಯು ಉತ್ತರಾಖಂಡದಲ್ಲಿ ಪ್ರತ್ಯೇಕ ಭಾರೀ ಮಳೆ ಮತ್ತು ಗುಡುಗು ಮಿಂಚುಗಳೊಂದಿಗೆ ವ್ಯಾಪಕ ಮಳೆಯ ಮುನ್ಸೂಚನೆ ನೀಡಿದೆ. ಭಾರೀ ಮಳೆಯ ನಡುವೆ, ಲಂಬಗಡದಲ್ಲಿರುವ ಖಚ್ಡಾ ಡ್ರೈನ್‌ನಲ್ಲಿ ನೀರಿನ ಏರಿಕೆಯಿಂದಾಗಿ ಬದರಿನಾಥ್ NH-7 ನ ಒಂದು ಭಾಗ ಕೊಚ್ಚಿಹೋಗಿದೆ. ಶುಕ್ರವಾರ ಹೆದ್ದಾರಿಯ ಎರಡೂ ಬದಿಗಳಲ್ಲಿ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು ಎಂದು ಚಮೋಲಿ ಜಿಲ್ಲಾಡಳಿತವನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ(Uttarakhand Heavy Rain).

ಭಾರೀ ಮಳೆಯು ಶುಕ್ರವಾರ ನೈನಿತಾಲ್ ಜಿಲ್ಲೆಯಲ್ಲಿ ಸರಣಿ ಭೂಕುಸಿತಗಳನ್ನು ಉಂಟುಮಾಡಿತು. ಪ್ರಮುಖ ನೈನಿತಾಲ್-ಭೋವಾಲಿ ರಸ್ತೆಯ ಪ್ರಮುಖ ಭಾಗವನ್ನು ನಾಶಪಡಿಸಿತು. ನೈನಿತಾಲ್-ಭೋವಲಿ ರಸ್ತೆಯು ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಕಳೆದ ಎರಡು ವಾರಗಳಲ್ಲಿ ಭಾರೀ ಮಳೆಯಾಗುತ್ತಿದ್ದು
ಹಲವಾರು ಇತರ ರಸ್ತೆಗಳನ್ನು ಗುಡ್ಡಗಳಿಂದ ಜರಿದುಬಿದ್ದ ಕಲ್ಲು-ಮಣ್ಣು ಆವರಿಸಿವೆ.

ಏತನ್ಮಧ್ಯೆ, ಶ್ರೀನಗರ ಗರ್ವಾಲ್ ಫರಾಸು-ಹನುಮಾನ್ ದೇವಸ್ಥಾನದ ಬಳಿ ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 58 ಅನ್ನು ಮುಚ್ಚಲಾಗಿದೆ. ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆ ಕಡೆಗೆ ಹೋಗುವ ವಾಹನಗಳನ್ನು ಪೌರಿ ಚುಂಗಿಯಿಂದ ಖಿರ್ಸು ಕಡೆಗೆ ತಿರುಗಿಸಲಾಗಿದೆ ಎಂದು ಪೌರಿ ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.

ಶುಕ್ರವಾರ, ರಾಜ್ಯ ರಾಜಧಾನಿ ಡೆಹ್ರಾಡೂನ್‌ನ ಕೆಲವು ಭಾಗಗಳು ಭಾರೀ ಜಲಾವೃತವನ್ನು ಕಂಡವು. ವಾಹನಗಳು ಟ್ರಾಫಿಯಲ್ಲಿ ಸಿಲುಕಿಕೊಂಡಿವೆ.

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಗುರುವಾರ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭೂಕುಸಿತಗಳು ಉಂಟಾಗಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಜೊತೆಗೆ 14 ಗ್ರಾಮೀಣ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.ಬೆಟ್ಟಗಳಿಂದ ಬಂಡೆಗಳು ಅಡ್ಡಾದಿಡ್ಡಿಯಾಗಿ ಉರುಳುತ್ತಿರುವುದರಿಂದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದರ್‌ಕೋಟ್ ಬಳಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ವರದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ 4-5 ದಿನಗಳಲ್ಲಿ ಮಧ್ಯ, ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಗುಡುಗು ಮತ್ತು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ Monkey Pox In Himachal: ಹಿಮಾಚಲ ಪ್ರದೇಶದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿ; ರೋಗಿಗೆ ಪ್ರತ್ಯೇಕ ಚಿಕಿತ್ಸೆ

(Uttarakhand Heavy Rain high alert declared )

Comments are closed.