ಅಗಸ್ಟ್ 5ರಂದು ಶಾಲೆಗಳಿಗೆ ರಜೆ..! ಕರ್ನಾಟಕಕ್ಕೆ ತಟ್ಟುತ್ತಾ ಸಾರಿಗೆ ಮುಷ್ಕರದ ಬಿಸಿ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಗಳ ನೌಕರರು ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC ಮತ್ತು KKRTC ಬಸ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ನಗರ ಬಸ್ಸುಗಳು, ಅಂತರ್-ಜಿಲ್ಲಾ ಬಸ್ಸುಗಳು ಮತ್ತು ದೂರ ಪ್ರಯಾಣದ ಬಸ್ಸುಗಳು ಸೇರಿವೆ.
ಪ್ರತಿದಿನ ಬಸ್ಸುಗಳನ್ನು ಅವಲಂಬಿಸಿರುವ ಪ್ರಯಾಣಿಕರು ಮತ್ತು ಜನರು ತೀವ್ರ ತೊಂದರೆ ಎದುರಿಸುವ ಸಾಧ್ಯತೆಯಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ, ಖಾಸಗಿ ಬಸ್ಸುಗಳು ಸಂಚರಿಸಲು ಅನುಮತಿ ನೀಡುವ ಸಾಧ್ಯತೆಯಿದೆ.
ಮ್ಯಾಕ್ಸಿ ಕ್ಯಾಬ್ ಮತ್ತು ಇತರ ಖಾಸಗಿ ವಾಹನಗಳು ಪ್ರಯಾಣಿಕರಿಗೆ ಸಹಾಯ ಮಾಡಲು ನಿಗದಿತ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
Also Read : SSLC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ : ಜಸ್ಟ್ 33 ಅಂಕ ಬಂದ್ರೂ ಪಾಸ್
ಓಲಾ (Ola) ಮತ್ತು ಊಬರ್ (Uber) ನಂತಹ ಸೇವೆಗಳು ಮತ್ತು ಆಟೋರಿಕ್ಷಾಗಳು ಲಭ್ಯವಿರುವ ಸಾಧ್ಯತೆಯಿದೆ. ಆದರೆ, ಬೇಡಿಕೆ ಹೆಚ್ಚಾದ ಕಾರಣ ದರ ಹೆಚ್ಚಳವಾಗಬಹುದು.
ಬೆಂಗಳೂರಿನ ಮೆಟ್ರೋ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಇದು ಬೆಂಗಳೂರು ನಗರದಲ್ಲಿ ಪ್ರಯಾಣಿಸುವವರಿಗೆ ಒಂದು ಪ್ರಮುಖ ಪರ್ಯಾಯ ಮಾರ್ಗವಾಗಲಿದೆ.
ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು ಕೆಲವು ಸ್ಥಳಗಳಿಗೆ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವ ಸಾಧ್ಯತೆಯಿದೆ, ಆದರೆ ಇದು ಖಚಿತವಾಗಿಲ್ಲ.
ಸರ್ಕಾರದ ಪ್ರತಿಕ್ರಿಯೆ ಮತ್ತು ಪ್ರಸ್ತುತ ಪರಿಸ್ಥಿತಿ:
ಎಸ್ಮಾ ಜಾರಿ: ರಾಜ್ಯ ಕಾರ್ಮಿಕ ಇಲಾಖೆಯು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA) ಯನ್ನು ಜಾರಿಗೊಳಿಸಿದೆ. ಇದು ಡಿಸೆಂಬರ್ 31, 2025 ರವರೆಗೆ ಮುಷ್ಕರ ನಡೆಸುವುದನ್ನು ನಿಷೇಧಿಸಿದೆ. ಆದರೆ, ಒಕ್ಕೂಟಗಳು ಈ ನಿರ್ಧಾರಕ್ಕೆ ಬಗ್ಗದಿರಲು ನಿರ್ಧರಿಸಿವೆ.
ಸರ್ಕಾರದ ನಿಲುವು: ಸಾರಿಗೆ ಇಲಾಖೆಯ ಅಧಿಕಾರಿಗಳ ಪ್ರಕಾರ, ವೇತನ ಪರಿಷ್ಕರಣೆಯನ್ನು ಈಗಾಗಲೇ 2023ರಲ್ಲಿ ಮಾಡಲಾಗಿದೆ ಮತ್ತು ಮುಂದಿನ ಪರಿಷ್ಕರಣೆ 2027ಕ್ಕೆ ಬರಲಿದೆ. 15% ನಷ್ಟು ಹೆಚ್ಚಳವನ್ನು ಈಗಾಗಲೇ ಮಾಸಿಕ ಇನ್ಕ್ರಿಮೆಂಟ್ ಮೂಲಕ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
Also Read : ಶಾಲಾ ಮಕ್ಕಳಿಗೆ ಇನ್ಮುಂದೆ ಉಚಿತ ಬಸ್
ಒಕ್ಕೂಟ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಇಲಾಖೆಯ ಪ್ರತಿನಿಧಿಗಳ ಜೊತೆಗೆ ಅಗಸ್ಟ್ 4 ರಂದು ಮುಷ್ಕರಕ್ಕೆ ಸಂಬಂಧಿಸಿದಂತೆ ಸಭೆ ನಡೆಯಲಿದೆ. ಪರ್ಯಾಯ ಯೋಜನೆಗಳು: ಸಾರಿಗೆ ಇಲಾಖೆಯು “ಪ್ಲಾನ್ ಬಿ” ಸಿದ್ಧಪಡಿಸುತ್ತಿದೆ. ಇದರಲ್ಲಿ ಖಾಸಗಿ ಬಸ್ಸುಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
ಶಾಲೆಗಳಿಗೆ ಸಿಗುತ್ತಾ ರಜೆ …!
ಆಗಸ್ಟ್ 4 ರಂದು ನಡೆಯಲಿರುವ ಸಭೆಯ ಫಲಿತಾಂಶವು ಮುಷ್ಕರ ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.
ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರ ಸಾರ್ವಜನಿಕರ ಮೇಲೆ ಬಿಸಿ ತಟ್ಟಲಿದೆ. ಹೀಗಾಗಿ ಅಗಸ್ಟ್ 5 ರಂದು ಶಾಲೆಗಳಿಗೆ ರಜೆ ಘೋಷಣೆ ಆಗುತ್ತಾ ಅನ್ನುವ ಕುರಿತು ತೀರ್ಮಾನ ಆಗಿಲ್ಲ.
KSRTC Strike School Holiday August 5th

