Lionel Messi:ಬೈಜುಸ್‌ ನ ಬ್ರಾಂಡ್‌ ಅಂಬಾಸಿಟರ್‌ ಪಟ್ಟವೇರಿದ ಲಿಯೋನಲ್‌ ಮೆಸ್ಸಿ

ನವದೆಹಲಿ: (Lionel Messi)ಪ್ರಸಿದ್ಧ ಶಿಕ್ಷಣ ಕಂಪನಿ ಬೈಜುಸ್‌ ಗೆ ಹಲವಾರು ಗಣ್ಯ ವ್ಯಕ್ತಿಗಳನ್ನು ಬ್ರಾಂಡ್‌ ಅಂಬಾಸಿಟರ್‌ ಆಗಿ ನೇಮಕ ಮಾಡಿಕೊಳ್ಳುವ ಮೂಲಕ ವಿಭಿನ್ನವಾಗಿ ತನ್ನತ್ತ ಗಮನ ಸೆಳೆಯುತ್ತಲೆ ಬಂದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪಾಲೊವರ್ಸ್‌ ಹೊಂದಿರುವ ಲಿಯೋನಲ್‌ ಮೆಸ್ಸಿ ಅವರನ್ನು ಬೈಜುಸ್‌ ನ ಬ್ರಾಂಡ್‌ ಅಂಬಾಸಿಟರ್‌ ಆಗಿ ನೇಮಿಸಿಕೊಂಡಿರುವುದರ ಬಗ್ಗೆ ಕಂಪನಿ ಮಾಹಿತಿಯನ್ನು ತಿಳಿಸಿದೆ.

(Lionel Messi)ಪ್ರಪಂಚದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರಾದ ಲಿಯೋನಲ್‌ ಮೆಸ್ಸಿ ಅವರನ್ನು ಬೈಜುಸ್‌ ಕಂಪನಿ ಬ್ರಾಂಡ್‌ ಅಂಬಾಸಿಟರ್‌ ಆಗಿ ನೆಮಿಸಿಕೊಂಡು ತನ್ನ ಸಂಸ್ಥೆಯನ್ನು ವಿಸ್ತರಿಸಿ ಎಲ್ಲರಿಗೂ ಸಮಾನ ಶಿಕ್ಷಣ ಕೈಗೆಟುಕುವಂತೆ ಮಾಡುವುದು ಈ ಕಂಪನಿಯ ಉದ್ದೇಶವಾಗಿದೆ. ಪ್ಯಾರಿಸ್ ಸೇಂಟ್-ಜರ್ಮೈನ್‌ಗಾಗಿ ಆಡುತ್ತಿರುವ ಮತ್ತು ಅರ್ಜೆಂಟೀನಾದ ಫುಟ್‌ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ ಸಮಾನ ಶಿಕ್ಷಣವನ್ನು ಉತ್ತೇಜಿಸುವ ಕಾರಣದಿಂದ ಬೈಜುಸ್‌ (BYJU’S) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಬೈಜುಸ್‌ ಕಂಪನಿ ತಿಳಿಸಿದೆ.

ನಮ್ಮ ಜಾಗತಿಕದ ರಾಯಭಾರಿಯಾಗಿ ಲಿಯೋನೆಲ್ ಮೆಸ್ಸಿ ಅವರನ್ನು ನೇಮಕ ಮಾಡಿರುವುದು ಗೌರವ ಮತ್ತು ಉತ್ಸುಕವನ್ನು ಹೆಚ್ಚಿಸಿದೆ. ಅವರು ಅತ್ಯಂತ ಕಷ್ಟದಿಂದ ಬೆಳೆದು ಇಂದು ಅತ್ಯಂತ ಯಶಸ್ವಿ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. BYJU’s Education For All (EFA) ಪ್ರಸ್ತುತ 5.5 ಮಿಲಿಯನ್ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ಬಯಸುತ್ತಿರುವ ಕಂಪನಿಗೆ ಲಿಯೋನೆಲ್ ಮೆಸ್ಸಿಗಿಂತ ಹೆಚ್ಚು ಮಾನವ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯನ್ನು ಯಾರೂ ಪ್ರತಿನಿಧಿಸುವುದಿಲ್ಲ ಎಂದು ಬೈಜುಸ್‌ ನ ಸಹ ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.

ಇದನ್ನೂ ಓದಿ:Digital Voter ID Card : ಮೊಬೈಲ್‌ ನಲ್ಲೇ ಸಿಗುತ್ತೆ ಡಿಜಿಟಲ್‌ ವೋಟರ್‌ ಐಡಿ : ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ:High Cholesterol : ಈ 5 ಹಣ್ಣುಗಳನ್ನು ತಿನ್ನಿ; ಅಧಿಕ ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಿ…

ಲಿಯೋನಲ್‌ ಮೆಸ್ಸಿ 3.5 ಶತಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು 450 ಮಿಲಿಯನ್ ನಷ್ಟು ಸಾಮಾಜಿಕ ಜಾಲತಾಣದಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ. ಹಾಗಾಗಿ ಮೆಸ್ಸಿಯೊಂದಿಗಿನ ಈ ಒಪ್ಪಂದವು ಬೈಜುಸ್‌ ಕಂಪನಿಯನ್ನು ಪ್ರಪಂಚದಾಂದ್ಯಂತ ಗುರುತಿಸಿಕೊಳ್ಳುತ್ತದೆ. ಕಂಪನಿಯನ್ನು ವಿಸ್ತರಿಸುವುದಕ್ಕೂ ಕೂಡ ಸಹಾಯವಾಗುತ್ತದೆ ಎನ್ನುವುದು ಕಂಪನಿಯ ಆಶಯವಾಗಿದೆ.

lionel messi top footballer byju global ambassador

Comments are closed.