School Close : ನಾಳೆಯಿಂದ ಪ್ರಾಥಮಿಕ ಶಾಲೆಗಳು ಬಂದ್‌

ದೆಹಲಿ : (School Close ) ಮಾಲಿನ್ಯ ಮತ್ತು ಗಾಳಿಯ ಗುಣಮಟ್ಟ ಕೆಟ್ಟಿದ್ದು ,  ಅದು ಸುಧಾರಿಸುವವರೆಗೂ  ಮಕ್ಕಳ ಆರೋಗ್ಯದ ಕಾಳಜಿಯ ಹಿನ್ನೆಲೆಯಲ್ಲಿ ದೆಹಲಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದಾಗಿ(School Close) ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಿಸಿದ್ದಾರೆ . ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಕ್ರಮವನ್ನು ಕೈಗೊಂಡಿದ್ದು ರಾಜ್ಯದಲ್ಲಿ ನಾಳೆಯಿಂದ ಪ್ರಾಥಮಿಕ ಶಾಲೆಗಳು ಮುಚ್ಚುತ್ತವೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಭರವಸೆಯನ್ನು ನೀಡಿದ್ದಾರೆ .

ಮಾಲಿನ್ಯ ಮತ್ತು ಗಾಳಿಯ ಗುಣಮಟ್ಟ ಕೆಟ್ಟಿದ್ದು ,  ಅದು ಸುಧಾರಿಸುವವರೆಗೂ  ಮಕ್ಕಳ ಆರೋಗ್ಯದ ಕಾಳಜಿಯ ಹಿನ್ನೆಲೆಯಲ್ಲಿ ದೆಹಲಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದಾಗಿ(School Close) ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಿಸಿದ್ದಾರೆ . ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಕ್ರಮವನ್ನು ಕೈಗೊಂಡಿದ್ದು ರಾಜ್ಯದಲ್ಲಿ ನಾಳೆಯಿಂದ ಪ್ರಾಥಮಿಕ ಶಾಲೆಗಳು ಮುಚ್ಚುತ್ತವೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಭರವಸೆಯನ್ನು ನೀಡಿದ್ದಾರೆ .

ಇಡೀ ಉತ್ತರ ಭಾರತ ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ‌ಹೀಗಾಗಿ  ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು ಎಂದು ದೆಹಲಿ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದು ಕೇವಲ ರಾಷ್ಟ್ರ ರಾಜಧಾನಿ ಮಾತ್ರವಲ್ಲ, ಇಡೀ ಉತ್ತರ ಭಾರತದ ಸಮಸ್ಯೆ ಆಗಿದೆ” ಎಂದು ಕೇಜ್ರಿವಾಲ್ ಹೇಳಿದರು.

ಮಾಲಿನ್ಯ ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅದಕ್ಕೆ ಬದಲಾಗಿ ನಾಳೆಯಿಂದ ದೆಹಲಿಯಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮುಚ್ಚುತ್ತಿದ್ದೇವೆ. 5 ನೇ ತರಗತಿಗಿಂತ ಹೆಚ್ಚಿನ ಎಲ್ಲಾ ತರಗತಿಗಳಿಗೆ ಹೊರಾಂಗಣ ಚಟುವಟಿಕೆಗಳನ್ನು ಸಹ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕೇಜ್ರಿವಾಲ್‌ ಅವರು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡಿದ್ದಾರೆ .

ಇದನ್ನೂ ಓದಿ : Lionel Messi:ಬೈಜುಸ್‌ ನ ಬ್ರಾಂಡ್‌ ಅಂಬಾಸಿಟರ್‌ ಪಟ್ಟವೇರಿದ ಲಿಯೋನಲ್‌ ಮೆಸ್ಸಿ

ವಾಹನಗಳಿಗೆ ಬೆಸ-ಸಮ ಯೋಜನೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಜಾರಿಗೆ ತರಬೇಕೆ ಎಂದು ದೆಹಲಿ ಸರಕಾರವೂ ಚಿಂತಿಸುತ್ತಿದೆ. ಈ ಕ್ರಮಗಳ ಜೊತೆಗೆ, “ನಾವು ಬೆಳೆ ವೈವಿಧ್ಯೀಕರಣಕ್ಕೆ ಪ್ರಯತ್ನಿಸುತ್ತೇವೆ . ಪಂಜಾಬ್‌ನಲ್ಲಿ ರೈತರು ಅಕ್ಕಿ ಬೆಳೆಯುವುದರ ಬದಲು ಇತರ ಬೆಳೆಗಳನ್ನು ಬೆಳೆಸುವುದಕ್ಕೆ ನಾವು ಪ್ರಯತ್ನಿಸುತ್ತೇವೆ” ಎಂದು ಮುಖ್ಯಮಂತ್ರಿ ಹೇಳಿದರು.

ಇದನ್ನೂ ಓದಿ : UGC NET 2022 Result : ಯುಜಿಸಿ ನೀಟ್ ಪರೀಕ್ಷೆ ನವೆಂಬರ್ 5ಕ್ಕೆ ಫಲಿತಾಂಶ ಘೋಷಣೆ

“ನಮ್ಮ ಸರ್ಕಾರ ಪಂಜಾಬ್‌ನಲ್ಲಿ ಇರುವುದರಿಂದ, ಬರುತ್ತಿರುವ ಹೊಲಸು ಟೀಕೆಗಳಿಗೆ ನಾವೇ ಹೊಣೆ. ನಾವು ಅಲ್ಲಿ ಸರಕಾರರ ರಚಿಸಿ ಕೇವಲ ಆರು ತಿಂಗಳಾಗಿದೆ ಮತ್ತು ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗಿದೆ. ಇದಕ್ಕೆ ತಕ್ಕ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ಸಮಸ್ಯೆಯನ್ನು ಪರಿಹರಿಸಲು ನಮಗೆ ಒಂದು ವರ್ಷದ ಸಮಯ ನೀಡಿ ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು.

ಇದನ್ನೂ ಓದಿ : SSLC Exam Revised Demand: ಎಸ್ಎಸ್ಎಲ್‌ ಸಿ ಪರೀಕ್ಷೆ ವೇಳಾಪಟ್ಟಿ ಮರು ಪರಿಷ್ಕರಿಸಿ : ಪ್ರೌಢಶಾಲಾ ಶಿಕ್ಷಕರ ಬೇಡಿಕೆ

ದೆಹಲಿಯಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕ ದೊಂದಿಗೆ ಜನರು ಹೋರಾಡುತ್ತಿದ್ದಾರೆ. “ಕೇಂದ್ರ ಸರ್ಕಾರ ಮುಂದೆ ಹೆಜ್ಜೆ ಇಡಬೇಕು ಮತ್ತು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಹಲವಾರು ಬಾರಿ ಹೇಳಿದ್ದೇವೆ” ಎಂದು ಕೇಜ್ರಿವಾಲ್ ಅವರು ಹೇಳಿದರು. ಮುಂದಿನ ವರ್ಷದ ವೇಳೆಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದು ಕೇಜ್ರಿವಾಲ್ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಒತ್ತಿ ಹೇಳಿದರು.

(School Close) Delhi Chief Minister Arvind Kejriwal has announced that the primary schools of Delhi will be closed (School Close) in the wake of concerns about the health of children until the pollution and air quality improve. Chief Minister Arvind Kejriwal has assured that the government has taken all measures to control pollution and primary schools will be closed from tomorrow in the state.

Comments are closed.