Morning breakfast in schools: ಇಂದಿನಿಂದ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮಕ್ಕಳಿಗೆ ಸಿಗಲಿದೆ ಬೆಳಗ್ಗಿನ ಉಪಹಾರ

ತಿರುವನಂತಪುರಂ: (Morning breakfast in schools) ಬಹುತೇಕ ರಾಜ್ಯಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ. ಇದೀಗ ಅದಕ್ಕೆ ಹೊಸ ಸೇರ್ಪಡೆಯಂತೆ ಬೆಳಗ್ಗಿನ ತಿಂಡಿ ಕೂಡ ಸೇರಿದೆ. ಕೇರಳದ ಕೊಚ್ಚಿಯಲ್ಲಿರುವ ಸರಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಬೆಳಗ್ಗಿನ ಉಪಹಾರದ ಯೋಜನೆಯನ್ನು ಜಾರಿಗೆ ತರಲಾಗಿದೆ.

ಹೆಚ್ಚಿನ ಮಕ್ಕಳು ಬೆಳಿಗ್ಗೆ ಮನೆಯಲ್ಲಿ ಉಪಹಾರ (Morning breakfast in schools) ಸೇವಿಸದೇ ಶಾಲೆಗೆ ಹಾಜರಾಗುತ್ತಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ಹಸಿವನ್ನು ತಡೆದು ಕೂರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ಜಾಸ್ತಿ. ಅಲ್ಲದೇ ಅದೆಷ್ಟೋ ಮಕ್ಕಳು ಪೌಷ್ಟಿಕ ಅಹಾರ ಸಿಗದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಹಿನ್ನಲೆಯಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಬೆಳಗ್ಗಿನ ಉಪಹಾರ ಪೂರೈಸುವ ಹೊಣೆಯನ್ನು ಕೊಚ್ಚಿ ಮಹಾನಗರ ಪಾಲಿಕೆ ಹೊತ್ತುಕೊಂಡಿದೆ.

ಕೊಚ್ಚಿಯಲ್ಲಿ ಅಪೌಷ್ಟಿಕತೆಯಿಂದ 150 ಮಕ್ಕಳು ಬಳಲುತ್ತಿದ್ದು, ಅವರಿಗೆ ಬೆಳಗ್ಗಿನ ತಿಂಡಿಯನ್ನು ಪೂರೈಸಲು ತೀರ್ಮಾನಿಸಲಾಗಿದೆ. ಅಲ್ಲದೇ ಪ್ರಾಥಮಿಕ ಮಕ್ಕಳ ಜೊತೆಗೆ 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಬೆಳಗ್ಗಿನ ಉಪಹಾರ ದೊರೆಯಲಿದೆ. ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಜಾರಿಗೆ ಬಂದಿವೆ. ಇದರ ಜೊತೆಗೆ ಇದೀಗ ಕೊಚ್ಚಿಯಲ್ಲಿ ಮಕ್ಕಳಿಗೆ ಬೆಳಗ್ಗಿನ ತಿಂಡಿ ಯೋಜನೆ ಕೂಡ ಜಾರಿಯಾಗಲಿದೆ. ಮಕ್ಕಳಿಗೆ ಅಪೌಷ್ಟಿಕತೆ ಕಾಡಬಾರದು ಎಂಬ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಕೊಚ್ಚಿಯ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರಾಯೋಗಿಕವಾಗಿ ಬೆಳಗ್ಗಿನ ತಿಂಡಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ : Bhagavad Gita teaching in school : ಶಾಲೆಯಲ್ಲಿ ಭಗವದ್ಘಿತೆ ಬೋಧನೆ: ಸಚಿವ ಬಿ.ಸಿ.ನಾಗೇಶ್ ಸಮ್ಮುಖದಲ್ಲಿ ಮಹತ್ವದ ಸಭೆ

ಇದನ್ನೂ ಓದಿ : Age limit for 1st class enrollment: ಶಿಕ್ಷಣ ಇಲಾಖೆಯಿಂದ ಹೊಸ ರೂಲ್ಸ್ : 1ನೇ ತರಗತಿ ದಾಖಲಾತಿಗೆ ವಯೋಮಿತಿ ನಿಗದಿ

ಇದನ್ನೂ ಓದಿ : Midday meals Chicken : ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಚಿಕನ್, ಮೊಟ್ಟೆ, ಹಣ್ಣು

Morning breakfast in schools: Children will get morning breakfast along with midday meal from today

Comments are closed.