Suryakumar Yadav : ಸೂರ್ಯಕುಮಾರ್ ಯಾದವ್ “ತುಳುನಾಡಿನ ಅಳಿಯ”, ತುಂಬಾ ಮಂದಿಗೆ ಗೊತ್ತೇ ಇಲ್ಲದ ಗುಟ್ಟು ಬಿಚ್ಚಿಟ್ಟ ಕೆ.ಎಲ್ ರಾಹುಲ್

ಮುಂಬೈ: ಟೀಮ್ ಇಂಡಿಯಾದ ಸ್ಫೋಟಕ ದಾಂಡಿಗ ಸೂರ್ಯಕುಮಾರ್ ಯಾದವ್ (Suryakumar Yadav ) ಮೂಲತಃ ಉತ್ತರ ಪ್ರದೇಶದವರು. ಕ್ರಿಕೆಟ್ ಬದುಕು ಕಟ್ಟಿಕೊಂಡದ್ದು ಮುಂಬೈನಲ್ಲಿ. ಉತ್ತರ ಪ್ರದೇಶದಲ್ಲಿ ಹುಟ್ಟಿ ಮುಂಬೈನಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಂಡಿರುವ ಸೂರ್ಯಕುಮಾರ್ ಯಾದವ್’ಗೆ ಕರಾವಳಿ ನಂಟು ಕೂಡ ಇದೆ. ಸೂರ್ಯಕುಮಾರ್ ಯಾದವ್ “ತುಳುನಾಡಿನ ಅಳಿಯ”.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ ನಡೆದ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟಿದ್ದರು. ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಕನ್ನಡಿಗ ಕೆ.ಎಲ್ ರಾಹುಲ್ (KL Rahul), ಸೂರ್ಯನ ಶತಕಕ್ಕೆ ತುಳುವಿನಲ್ಲಿ ಶಹಬ್ಬಾಸ್ ಹೇಳಿದ್ದಾರೆ.

‘’ಬಾರಿ ಎಡ್ಡೆ ಗೊಬ್ಬಿಯ’’ ಎಂದು ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ರಾಹುಲ್ ಪೋಸ್ಟ್ ಮಾಡಿದ್ದರು. ‘’ಬಾರಿ ಎಡ್ಡೆ ಗೊಬ್ಬಿಯ’’ ಎಂದರೆ ‘’ತುಂಬಾ ಚೆನ್ನಾಗಿ ಆಡಿದೆ’’ ಎಂದರ್ಥ. ಇದಕ್ಕೆ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ (Devisha Shetty) ತುಳುವಿನಲ್ಲೇ ಪ್ರತಿಕ್ರಿಯಿಸಿದ್ದರು. “ಚೂರ್ ತುಳು ಕಲ್ಪಾವೊಡು ಆರೆಗ್ ನನ” (ಇನ್ನು ಸ್ವಲ್ಪ ತುಳು ಕಲಿಸಬೇಕು ಅವರಿಗೆ) ಎಂದು ದೇವಿಶಾ ಶೆಟ್ಟಿ ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಬರೆದುಕೊಂಡಿದ್ದರು.

ದೇವಿಶಾ ಶೆಟ್ಟಿ ಕರಾವಳಿ ಮೂಲದವರು. ದೇವಿಶಾ ಶೆಟ್ಟಿ ಅವರ ತಂದೆ ತಾಯಿ ತುಳುನಾಡಿನವರು. ಹೀಗಾಗಿ ದೇವಿಶಾ ಮುಂಬೈನಲ್ಲಿ ನೆಲೆ ನಿಂತರು ತುಳು ಭಾಷೆ ಮಾತನಾಡುತ್ತಾರೆ. 2016ರಲ್ಲಿ ತುಳುನಾಡಿನ ಮೂಲದವರಾದ ದೇವಿಶಾ ಶೆಟ್ಟಿ ಅವರನ್ನು ಸೂರ್ಯಕುಮಾರ್ ಯಾದವ್ ಮದುವೆಯಾಗಿದ್ದರು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾಗ ಒಬ್ಬರಿಗೊಬ್ಬರು ಪರಿಚಯವಾಗಿತ್ತು. ನಂತರ ಇಬ್ಬರೂ ಪ್ರೀತಿಸಿ 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ದೇವಿಶಾ ಶೆಟ್ಟಿ ತುಳುನಾಡಿನ ಮೂಲದವರು, ಸೂರ್ಯಕುಮಾರ್ ಯಾದವ್ ತುಳುನಾಡಿನ ಅಳಿಯ ಎಂಬ ವಿಚಾರ ತುಂಬಾ ಮಂದಿಗೆ ಗೊತ್ತಿರಲಿಲ್ಲ. ಇದೀಗ ಕೆ.ಎಲ್ ರಾಹುಲ್ ತುಳುವಿನಲ್ಲಿ ಮಾಡಿದ ಒಂದೇ ಒಂದು ಇನ್’ಸ್ಟಾಗ್ರಾಂ ಪೋಸ್ಟ್’ನಿಂದ ಸೂರ್ಯಕುಮಾರ್ ಯಾದವ್ ಅವರ ತುಳುನಾಡಿನ ನಂಟು ಜಗಜ್ಜಾಹೀರಾಗಿದೆ.

ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್’ಗಳ ನೆರವಿನಿಂದ ಅಜೇಯ 112 ರನ್ ಸಿಡಿಸಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟಿದ್ದರು. ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ 16.4 ಓವರ್’ಗಳಲ್ಲಿ 137 ರನ್ನಿಗೆ ಆಲೌಟಾಗಿ 91 ರನ್’ಗಳಿಂದ ಭಾರತಕ್ಕೆ ಶರಣಾಗಿ ಸರಣಿಯನ್ನು 2-1ರ ಅಂತರದಲ್ಲಿ ಆತಿಥೇಯರಿಗೆ ಒಪ್ಪಿಸಿತು.

ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿರುವ ಭಾರತ ಜನವರಿ 10ರಂದು ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಸರಣಿಯ ಮೊದಲ ಪಂದ್ಯ ಮಂಗಳವಾರ ಅಸ್ಸಾಂನ ಗುವಾಹಟಿಯ ಬರ್ಸಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : Rishabh Pant to get 21 CR salary : ಐಪಿಎಲ್ ಆಡದಿದ್ದರೂ ರಿಷಭ್ ಪಂತ್‌ಗೆ ಸಿಗಲಿದೆ 16 ಕೋಟಿ, ಬಿಸಿಸಿಐನಿಂದ + 5 ಕೋಟಿ

ಇದನ್ನೂ ಓದಿ : Racer Kumar dies : ಕಾರ್ ರೇಸ್ ವೇಳೆ ದುರಂತ, ಖ್ಯಾತ ರೇಸರ್ ಕೆ.ಇ.ಕುಮಾರ್ ವಿಧಿವಶ

Suryakumar Yadav Son in law of Tulunadu KL Rahul revealed a secret

Comments are closed.