NEET UG 2021: ಇಂದಿನಿಂದ ನೀಟ್‌ ನೋಂದಣಿ ಆರಂಭ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನವದೆಹಲಿ : ನೀಟ್‌ 2021 ಪರೀಕ್ಷೆಯ ನೋಂದಣಿ ಪ್ರಕ್ರಿಯೆಯನ್ನು ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಜುಲೈ 13ರಿಂದಲೇ ಆರಂಭಿಸುತ್ತಿದೆ. ಅಭ್ಯರ್ಥಿಗಳು ಎನ್‌ಟಿಎ ನೀಟ್‌ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಜೆ 5 ಗಂಟೆಯಿಂದಲೇ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ನೀಟ್‌ ಪರೀಕ್ಷೆಗಳು ಸೆಪ್ಟೆಂಬರ್ 12ರಂದು ನಡೆಯಲಿದ್ದು, ಈಗಾಗಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಈ ಬಾರಿ 198 ನಗರಗಳಲ್ಲಿ ಪರೀಕ್ಷೆ ಯನ್ನುನಡೆಸಲಾಗುತ್ತಿದೆ. ಕಳೆದ ಬಾರಿ 3862 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಆದ್ರೆ ಈ ಬಾರಿ ಕೊರೊನಾ ವೈರಸ್‌ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನೀಟ್‌ 2021 ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಅಗತ್ಯ ದಾಖಲೆಗಳನ್ನು ಹೊಂದಿರ ಬೇಕು. ಎನ್ ಟಿಎ ನೀಟ್ ನ ಅಧಿಕೃತ ವೆಬ್‌ ಸೈಟ್ ntaneet.nic.in ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. ವೆಬ್‌ಸೈಟ್‌ ಓಪನ್‌ ಆಗುತ್ತಲೇ ಮುಖಪುಟದಲ್ಲಿ ಲಭ್ಯವಿರುವ ನೀಟ್ 2021 ಲಿಂಕ್ ಮೇಲೆ ಕ್ಲಿಕ್ ಮಾಡಿ. ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸು ಮೇಲೆ ಕ್ಲಿಕ್ ಮಾಡಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡಿ. ತಪ್ಪದೇ ದೃಢೀಕರಣ ಪುಟ ವನ್ನು ಡೌನ್ ಲೋಡ್ ಮಾಡಿ. ಅಲ್ಲದೇ ಹಾರ್ಡ್ ಕಾಪಿಯನ್ನು ಕೂಡ ನಿಮ್ಮ ಜೊತೆಗೆ ಇರಿಸಿಕೊಳ್ಳಿ.

Comments are closed.