NEET CET Exams:ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನೀಟ್, ಸಿಇಟಿ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ

ಬೆಂಗಳೂರು :(NEET, CET Exams) ಡಾಕ್ಟರ್, ಇಂಜಿನಿಯರ್ ಆಗಬೇಕು ಅನ್ನೋದು ಹಲವು ವಿದ್ಯಾರ್ಥಿಗಳ ಬಯಕೆ. ಇದಕ್ಕಾಗಿ ದುಬಾರಿ ಹಣ ನೀಡಿ ಟ್ಯೂಷನ್ ಸೆಂಟರ್ ಮೊರೆ ಹೋಗುತ್ತಿದ್ದಾರೆ. ಆದ್ರೆ ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ನೀಟ್ ಹಾಗೂ ಸಿಇಟಿ ಪರೀಕ್ಷೆಗಳಿಗೆ ಸರಕಾರದ ವತಿಯಿಂದಲೇ ತರಬೇತಿ ನೀಡಲು ಸಜ್ಜಾಗಿದೆ.

ಕರ್ನಾಟಕ ಸರ್ಕಾರ ದ್ವಿತಿಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ (NEET, CET Exams)ನೀಟ್‌ ಮತ್ತು ಸಿಇಟಿ ಪರೀಕ್ಷೆಗಳಿಗೆ ಉಚಿತ ಆನ್ಲೈನ್‌ ಕೋಚಿಂಗ್‌ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಮತ್ತು ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ತರಬೇತಿಯನ್ನು ನೀಡಿದೆ. ಇದರ ಬೆನ್ನಲ್ಲೆ ಸಿಬಿಎಸ್‌ಇ 10 ನೇ ತರಗತಿ ಮತ್ತು ದ್ವಿತಿಯ ಪಿಯುಸಿಯ ಪ್ರಾಯೋಗಿಕ ಪರೀಕ್ಷೆಯ ದಿನಾಂಕವನ್ನು ಪ್ರಕಟಣೆ ಮಾಡಲಾಗಿದೆ.ಜನವರಿ 1, 2023 ರಿಂದ ಪ್ರಾಯೋಗಿಕ ಪರೀಕ್ಷೆಗಳು,ಆಂತರಿಕ ಮೌಲ್ಯಮಾಪನ ಎಲ್ಲವನ್ನು ನಡೆಸಲು ನಿರ್ಧರಿಸಲಾಗಿದೆ.

ಇದನ್ನು ಓದಿ:Google fined 1,337 crores : ಗೂಗಲ್‌ ಗೆ 1,337 ಕೋ.ರೂ. ದಂಡ ವಿಧಿಸಿದ ವಾಚ್‌ಡಾಗ್ ; ಗೂಗಲ್ ವಕ್ತಾರರು ಹೇಳಿದ್ದೇನು ?

ಇದನ್ನೂ ಓದಿ:Amulya Deepavali : ದೀಪಾವಳಿಗಾಗಿ ವಿಶಿಷ್ಟ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಅಮೂಲ್ಯ

ಇದನ್ನೂ ಓದಿ:Congress President Mallikarjuna Kharge : ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

ಈ ನಡುವಲ್ಲೇ ಸಿಬಿಎಸ್ಇ ಚಳಿಯಿಂದ ತತ್ತರಿಸುವ ಶಾಲೆಗಳಿಗೆ ನವೆಂಬರ್‌ 15 ರಿಂದ ಡಿಸೆಂಬರ್ 14 ರವರೆಗೆ ಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ ಚಳಿಗಾಲದ ಪ್ರದೇಶಗಳ ಶಾಲೆಗಳು ಚಳಿಗಾಲದ ಕಾರಣದಿಂದಾಗಿ ಜನವರಿಯಲ್ಲಿ ಮುಚ್ಚುವ ನಿರೀಕ್ಷೆಯಿದೆ. ಚಳಿ ಪ್ರದೇಶದಲ್ಲಿನ ಶಾಲೆಗಳು ಜನವರಿ ತಿಂಗಳಲ್ಲಿ ಮುಚ್ಚುವ ಸಾಧ್ಯತೆಯಿದೆ. ಹೀಗಾಗಿ 10 ಮತ್ತು ದ್ವಿತಿಯ ಪಿಯುಸಿ ಪರೀಕ್ಷೆಗಳನ್ನು ನವೆಂಬರ್ 15, 2022 ರಿಂದ ಡಿಸೆಂಬರ್ 14, 2022 ರವರೆಗೆ ನಡೆಸಲಾಗುವುದು ಎಂದು CBSE ಅಧಿಕೃತ ಹೇಳಿಕೆ ತಿಳಿಸಿದೆ.

karnataka govt gives good news to 2nd puc students

Comments are closed.