Diwali Festival 2022 : ಮೋಜಿಗಾಗಿ ಅಪಾರ್ಟ್‌ ಮೆಂಟ್‌ ಗೆ ರಾಕೆಟ್‌ ಹಾರಿಸಿದ ದುಷ್ಕರ್ಮಿಗಳು : ವಿಡಿಯೋ ವೈರಲ್

ಮುಂಬೈ : ದೀಪಾವಳಿ ಆಚರಣೆಯ(Diwali Festival 2022) ಸಂದರ್ಭದಲ್ಲಿ ಪಟಾಕಿ ಸಿಡಿಸುವ ಭರದಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿನ ದುಷ್ಕರ್ಮಿಗಳು ವಸತಿ ಕಟ್ಟಡದ ಮೇಲೆ ರಾಕೆಟ್ ಹಾರಿಸಿದ್ದಾರೆ. ಇದೀಗ ದುಷ್ಕರ್ಮಿಗಳು ನಡೆಸಿದ ಕೃತ್ಯ ಇದೀಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ದೇಶದ ಜನರು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ ದೀಪಾವಳಿಯ ಹೊತ್ತಲ್ಲೇ ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ಸಂಭ್ರಮದಿಂದ ಆಚರಿಸುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದ ಥಾಣೆಯ ಉಲ್ಹಾಸ್‌ನಗರ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಘಟನೆ ಸಂಭವಿಸಿರುತ್ತದೆ. ಘಟನೆಯ ವಿಡಿಯೋದಲ್ಲಿ ದುಷ್ಕರ್ಮಿ ಯುವಕರು ವಸತಿ ಕಟ್ಟಡದ ಕಡೆಗೆ ಅನೇಕ ರಾಕೆಟ್‌ಗಳನ್ನು ಸಿಡಿಸಿದ್ದಾರೆ. ಅವರು ಸಿಡಿಸಿದ ರಾಕೆಟ್ ಪಟಾಕಿಗಳು ಜನರಿರುವ ಬಾಲ್ಕನಿಗಳಿಗೆ ನುಗ್ಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಥಾಣೆಯ ಉಲ್ಹಾಸ್‌ನಗರ ಪ್ರದೇಶದಲ್ಲಿ‌ ಇರುವ ವಸತಿ ಕಟ್ಟಡದಲ್ಲಿ ಮಕ್ಕಳು ಸೇರಿದಂತೆ ಅನೇಕ ಫ್ಯಾಮಿಲಿಗಳು ವಾಸಿಸುತ್ತಿದ್ದಾರೆ. ಈ ಘಟನೆಯಿಂದಾಗಿ ಥಾಣೆ ಜಿಲ್ಲೆಯ ಉಲ್ಲಾಸ್‌ನಗರದಲ್ಲಿ ವಾಸಿಸುವ ಜನರನ್ನು ಭಯಭೀತಗೊಂಡಿರುತ್ತಾರೆ.

ಇದನ್ನೂ ಓದಿ : Fake Blood Platelets : ರಕ್ತದ ಪ್ಲಾಸ್ಮಾ ಬದಲು ಮೂಸಂಬಿ ಜೂಸ್ ಪ್ರಕರಣ : ಆಸ್ಪತ್ರೆಗೆ ಶುರುವಾಯ್ತು ಬುಲ್ಡೋಜರ್ ಭಯ

ಇದನ್ನೂ ಓದಿ : Man Fires Multiple Rockets: ಜನರನ್ನು ಬೆದರಿಸಲೆಂದೇ ಪಟಾಕಿ ಸಿಡಿಸಿದ ಭೂಪ : ಪೊಲೀಸರಿಂದ ಕಿಡಿಗೇಡಿಗಾಗಿ ತಲಾಶ್

ಇದನ್ನೂ ಓದಿ : sextortion fraud :ಅಪರಿಚಿತ ನಂಬರ್​​ನಿಂದ ಬಂದ ವಿಡಿಯೋ ಕಾಲ್​ ರಿಸೀವ್​ ಮಾಡಿ ಲೈಂಗಿಕ ವಂಚನೆಗೊಳಗಾದ ಪ್ರತಿಷ್ಠಿತ ಕಂಪನಿ ಸಿಇಓ

ರಾಕೆಟ್ ಹಾರಿಸಿದ್ದರಿಂದಾಗಿ ಗಾಯಗೊಂಡ ವ್ಯಕ್ತಿಯೋರ್ವ ಅಪಾರ್ಟಮೆಂಟ್ ನ ಹೊರಗಡೆ ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಯುವಕರು ಇತರ ಪಟಾಕಿಗಳನ್ನು ಸಿಡಿಸಿದ ನಂತರದಲ್ಲಿ ರಾಕೆಟ್ ಹಾರಿಸಿದ್ದಾರೆ. ರಾಕೆಟ್ ಅಪಾರ್ಟ್ ಮೆಂಟ್ ನ ಕಿಟಕಿ ಹಾಗೂ ಬಾಲ್ಕನಿಯಿಂದ ಮನೆಗಳಿಗೆ ಪ್ರವೇಶಿಸಿತ್ತು. ಈ ಘಟನೆಯಲ್ಲಿ ಎಷ್ಟು ಮಂದಿ ನಿವಾಸಿಗಳಿಗೆ ಸಮಸ್ಯೆ ಆಗಿದೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದ್ದು, ಅಪರಿಚಿತ ಯುವಕರ ವಿರುದ್ದ ಇದೀಗ ಥಾಣೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.

Diwali Festival 2022 Miscreants fired a rocket at the apartment for fun: Video viral

Comments are closed.