NEET MDS 2022 : ವೈದ್ಯಕೀಯ ವಿಜ್ಞಾನದಲ್ಲಿ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನೀಟ್ ಎಂಡಿಎಸ್ ಪರೀಕ್ಷೆಗಾಗಿ ಎಡಿಟ್ ವಿಂಡೋ ಆಯ್ಕೆಗಳನ್ನು ತೆರೆದಿದೆ. ಅಧಿಕೃತ ಸೂಚನೆಯ ಪ್ರಕಾರ ಈ ಹಿಂದೆ ತಮ್ಮ ಅರ್ಜಿ ನಮೂನೆಯಲ್ಲಿ ಫೋಟೋ ಅಪ್ಲೋಡ್ ಮಾಡಲು ವಿಫಲರಾದ ಅಭ್ಯರ್ಥಿಗಳು nbe.edu.in ನಲ್ಲಿ ಭೇಟಿ ನೀಡಿ ಅದನ್ನು ಸರಿಪಡಿಸಬಹುದಾಗಿದೆ. ಅರ್ಜಿದಾರರು ಏಪ್ರಿಲ್ 22ರ ರಾತ್ರಿ 11:55ರ ಒಳಗೆ ತಮ್ಮ ಫೋಟೋಗಳನ್ನು ಅರ್ಜಿ ನಮೂನೆಯಲ್ಲಿ ಸರಿಪಡಿಸಲು ಅವಕಾಶವನ್ನು ಪಡೆದಿದ್ದಾರೆ.
ಎನ್ಬಿಇಎಂಎಸ್ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯಲ್ಲಿ ಅರ್ಜಿ ನಮೂನೆಯಲ್ಲಿ ತಪ್ಪಾಗಿ ನಮೂದು ಮಾಡಿದ ಚಿತ್ರಗಳನ್ನು ಸರಿಪಡಿಸಲು ಇಮೇಲ್ಗಳ ಮೂಲಕ ಮತ್ತೊಮ್ಮೆ ತಿಳಿಸಲಾಗುತ್ತದೆ.ಏಪ್ರಿಲ್ 20ರಿಂದ 22ರವರೆಗೆ ಆಯ್ದ ವಿಡಿಯೋದಲ್ಲಿ ತಮ್ಮ ಅರ್ಜಿ ನಮೂನೆಯಲ್ಲಿನ ತಪ್ಪಾದ ಚಿತ್ರಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ.
NEET MDS 2022: ಅರ್ಜಿ ನಮೂನೆಯಲ್ಲಿ ಬದಲಾವಣೆಗಳನ್ನು ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ
nbe.edu.in ನಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹೋಮ್ ಪೇಜ್ನಲ್ಲಿ NEET -MDS ವಿಭಾಗವನ್ನು ಕ್ಲಿಕ್ ಮಾಡಿ.
ಈಗ ಅಪ್ಲಿಕೇಶನ್ ಲಿಂಕ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಅದಕ್ಕೆ ಅನುಗುಣವಾಗಿ ಅರ್ಜಿ ನಮೂನೆಯಲ್ಲಿ ಬದಲಾವಣೆಗಳನ್ನು ಮಾಡಿ.
ಒಮ್ಮೆ ಮಾಡಿದ ನಂತರ, ಅರ್ಜಿ ನಮೂನೆಯನ್ನು ಸೇವ್ ಮಾಡಿ.
ಮುಂದಿನ ಬಳಕೆಗಾಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಹಾಗೂ ಪ್ರಿಂಟ್ ತೆಗೆದಿಟ್ಟುಕೊಳ್ಳಿ .
ಇದನ್ನು ಓದಿ : ಪೋಷಕರಿಗೆ ಕಾದಿದೆ RTE ಸಂಕಷ್ಟ: ಸರಕಾರ ಬಾಕಿ ಕೊಡದಿದ್ರೆ ನೋ ಅಡ್ಮಿಷನ್ ಎಂದ ಖಾಸಗಿ ಶಿಕ್ಷಣ ಸಂಸ್ಥೆಗಳು
ಇದನ್ನೂ ಓದಿ : APJEE 2022 : ಎಪಿಜೆಇಇ ಪರೀಕ್ಷೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ
NEET MDS 2022: Selective Edit Window For Application Correction Opens at nbe.edu.in| Check Details Here
Comments are closed.