NEET UG 2022 : ನೀಟ್ ಯುಜಿ ಕೌನ್ಸಿಲಿಂಗ್ ವೇಳಾಪಟ್ಟಿ ಪ್ರಕಟ

NEET UG 2022 Counseling : ಮೆಡಿಕಲ್‌ ಕೌನ್ಸಿಲಿಂಗ್‌ ಸಂಸ್ಥೆ(MCC) ನ್ಯಾಷನಲ್‌ ಎಲಿಜಿಬಿಲಿಟಿ ಕಮ್‌ ಎಂಟ್ರೆನ್ಸ್‌ ಟೆಸ್ಟ್‌(NEET-UG) 2022ರ ಕೌನ್ಸಿಲಿಂಗ್ (councelling) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೊದಲ ಸುತ್ತಿನ ನೀಟ್ ಯುಜಿ 2022 ಕೌನ್ಸಿಲಿಂಗ್ ಅಖಿಲ ಭಾರತ ಕೋಟಾ ಗೆ ಅಕ್ಟೋಬರ್‌ 11, 2022 ರಿಂದ ಪ್ರಾರಂಭವಾಗಲಿದೆ ಕೇಂದ್ರೀಯ ಸಂಸ್ಥೆಗಳಿಗೆ ಅಕ್ಟೋಬರ್‌ 10 2022 ರಂದು NEET UG 2022 ಸಮಾಲೋಚನೆ ಪ್ರಾರಂಭವಾಗಲಿದೆ. ನ್ಯಾಷನಲ್‌ ಟೆಸ್ಟಿಂಗ್‌ ಎಜೆನ್ಸಿಯು ಸೆಪ್ಟೆಂಬರ್‌ 7 ರಂದು NEET-UG 2022 ರ ಪರೀಕ್ಷೆಯ ಪಲಿತಾಂಶವನ್ನು ಪ್ರಕಟಿಸಿದ್ದು, NEET UG ಪರೀಕ್ಷೆಗೆ ಅರ್ಹತೆ ಪಡೆದಿರುವ ಪ್ರತಿಯೊಬ್ಬ ಅಭ್ಯರ್ಥಿಯು ಆನ್ ಲೈನ್‌ ಮೂಲಕ NEET 2022ರ ಸಮಾಲೋಚನೆಗೆ ನೊಂದಣಿ ಮಾಡಿಕೊಳ್ಳಬಹುದು.

ನೀಟ್ ಕೌನ್ಸಿಲಿಂಗ್ ಪರಿಕ್ಷೆಗೆ ಅರ್ಹತೆ ಪಡೆಯದೆ ಇರುವ ವಿದ್ಯಾರ್ಥಿಗಳು ಮೆಡಿಕಲ್‌ ಅಭ್ಯಾಸವನ್ನು ಮುಂದುವರಿಸಲು ಏಕೈಕ ಮಾರ್ಗವೆಂದರೆ ಅದು ಅಬ್ರೋಡ್‌ ನಲ್ಲಿ ಮೆಡಿಕಲ್‌ ವಿದ್ಯಾಭ್ಯಾಸವನ್ನು ಮುಂದುವರಿಸುವುದು. ಕಡಿಮೆ ಶುಲ್ಕದಲ್ಲಿ ಮೆಡಿಕಲ್‌ ವಿದ್ಯಾಭ್ಯಾಸವನ್ನು ಪಡೆಯಲು ಅನೇಕ ದೇಶಗಳಲ್ಲಿ ಮೆಡಿಕಲ್‌ ಕಾಲೇಜುಗಳು ಲಭ್ಯವಿದೆ. ಬಾಂಗ್ಲಾದೇಶ, ಫಿಲಿಫೈನ್ಸ್‌, ಕಾಝಾಕ್ ಸ್ತಾನ್‌ ದೇಶಗಳಲ್ಲಿ ಮೆಡಿಕಲ್‌ ಕಾಲೇಜುಗಳ ವಿದ್ಯಾಭ್ಯಾಸ ( NEET UG 2022 ) ವನ್ನು ಅತೀ ಕಡಿಮೆ ಶುಲ್ಕಗಳಲ್ಲಿ ಮುಂದುವರಿಸ ಬಹುದಾಗಿದೆ. ಬೇರೆ ವಿದೇಶದಲ್ಲಿ ಮೆಡಿಕಲ್‌ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ಭಾರತದಲ್ಲಿ ಅಭ್ಯಾಸವನ್ನು ಮಾಡಬೇಕಾದಲ್ಲಿ, ಫಾರೀನ್‌ ಮೆಡಿಕಲ್‌ ಪದವಿ ಪರೀಕ್ಷೆ(FMGE)ಯನ್ನು ಕಡ್ಡಾಯವಾಗಿ ಬರೆದು ಉತ್ತೀರ್ಣರಾಗಬೇಕಾಗುತ್ತದೆ.

ಇದನ್ನೂ ಓದಿ : CBSE Class 12 Board Exams 2023 :ಸಿಬಿಎಸ್ಇ 10, 12ನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

ಎಮ್‌ ಬಿ ಬಿ ಎಸ್(MBBS) ಅಥವಾ ಇತರ ಕೋರ್ಸ್‌ ಗಳನ್ನು ಮುಂದುವರಿಸಲು ಇರುವ ಹೆಸರಾಂತ ದೇಶಗಳ ಪಟ್ಟಿ;

ರಷ್ಯಾ : ರಷ್ಯಾದಲ್ಲಿ ದೇಶ ಮತ್ತು ವಿದೇಶಿ ವಿದ್ಯಾರ್ಥಿಗಳು ಮೆಡಿಕಲ್‌ ವಿದ್ಯಾಭ್ಯಾಸವನ್ನು ಮುಂದುವರಿಸಲು ಜನಪ್ರಿಯ ಆಯ್ಕೆಯಾಗಿದೆ. ಕಝಾನ್‌ ಫೆಡೆರಲ್‌ ಯುನಿವರ್ಸಿಟಿ, ಬಾಶ್ಕಿರ್‌ ಸ್ಟೇಟ್‌ ಮೆಡಿಕಲ್‌ ಯುನಿವರ್ಸಿಟಿ, ಅಲ್ತಾಯಿ ಸ್ಟೇಟ್‌ ಮೆಡಿಕಲ್‌ ಯುನಿವರ್ಸಿಟಿ ಮತ್ತು ಇತರೆ ಹೆಸರಾಂತ ಮೆಡಿಕಲ್‌ ಕಾಲೇಜುಗಳು ರಶ್ಯಾದಲ್ಲಿ ಇದ್ದು , ವಿದ್ಯಾರ್ಥಿಗಳು ತಮ್ಮ ಮೆಡಿಕಲ್‌ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು.

ಇದನ್ನೂ ಓದಿ : Educational Adoption Scheme: ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಶೈಕ್ಷಣಿಕ ದತ್ತು ಯೋಜನೆ

ಇದನ್ನೂ ಓದಿ : Medical College : ವೈದ್ಯಕೀಯ ಕಾಲೇಜುಗಳಿಂದ ಶುಲ್ಕ ಏರಿಕೆ ಪ್ರಸ್ತಾಪ: ವಿದ್ಯಾರ್ಥಿಗಳಿಗೆ ಕಾದಿದೆ ಶಾಕ್

ನೇಪಾಳ :
ಭಾರತದ ನೆರೆಯ ದೇಶ ನೇಪಾಳದಲ್ಲಿ ಅನೇಕ ಹೆಸರಾಂತ ಮೆಡಿಕಲ್‌ ಕಾಲೇಜುಗಳು ಇವೆ. ಅವುಗಳಲ್ಲಿ ನ್ಯಾಷನಲ್‌ ಮೆಡಿಕಲ್‌ ಕಾಲೇಜು , ನೋಬೆಲ್‌ ಮೆಡಿಕಲ್‌ ಕಾಲೇಜು, ಯುನಿವರ್ಸಲ್‌ ಮೆಡಿಕಲ್‌ ಸೈನ್ಸ್‌ ಕಾಲೇಜು ಮತ್ತು ಚಿತ್ವಾನ್‌ ಮೆಡಿಕಲ್‌ ಕಾಲೇಜು ಮತ್ತು ಇನ್ನೂ ಕೆಲವು ಕಾಲೆಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಬಹುದು.

ಚೀನಾ :
ಮೆಡಿಕಲ್‌ ಕೌನ್ಸಿಲ್‌ ಆಪ್‌ ಇಂಡಿಯಾ (MCI) ಚೀನಾದ ನಲವತ್ತೈದು ಸಂಸ್ಥೆಗಳಿಗೆ ಮಾನ್ಯತೆ ಕೊಟ್ಟಿದೆ. ಕುನ್ಮಿಂಗ್‌ ಮೆಡಿಕಲ್‌ ಯುನಿವರ್ಸಿಟಿ, ಚೀನಾ ಮೆಡಿಕಲ್‌ ಯುನಿವರ್ಸಿಟಿ, ನಾಂಝಿಂಗ್‌ ಮೆಡಿಕಲ್‌ ಯುನಿವರ್ಸಿಟಿ ಇವುಗಳು ಪ್ರತಿಷ್ಠಿತ ಕಲೇಜುಗಳಾಗಿದ್ದು , ಇಲ್ಲಿ ಮೆಡಿಕಲ್‌ ವಿದ್ಯಾಭ್ಯಾಸ ಮುಂದುವರಿಸಬಹುದು

ಬಾಂಗ್ಲಾದೇಶ:
ಸೌತ್‌ ಎಶಿಯನ್‌ ರಾಷ್ಟ್ರದ ಗಡಿ ಭಾಗಗಳು ಭಾರತದ ವಿದ್ಯಾರ್ಥಿಗಳಿಗೆ ಜನಪ್ರೀಯ ತಾಣವಾಗಿದ್ದು, ಬಾಂಗ್ಲಾದೇಶ ಮೆಡಿಕಲ್‌ ಕಾಲೇಜು , ಏಶಿಯನ್‌ ಮೆಡಿಕಲ್‌ ಕಾಲೇಜು, BGC ಟ್ರಸ್ಟ್‌ ಮೆಡಿಕಲ್‌ ಕಾಲೇಜು ಗಳು ಅತ್ಯಂತ ಪ್ರತಿಷ್ಠಿತ ಕಾಲೇಜುಗಳಾಗಿದ್ದು, ಇಲ್ಲಿ MBBS ವಿದ್ಯಾಭ್ಯಾಸ ಮುಂದುವರೆಸಬಹುದಾಗಿದೆ.

ಕಾಝಾಕ್ ಸ್ತಾನ್‌ :
ಸೌತ್‌ ಕಾಝಾಕ್ ಸ್ತಾನ್‌ ಮೆಡಿಕಲ್‌ ಅಕಾಡೆಮಿ, ಕಾಝಾಕ್ ನ್ಯಾಶನಲ್‌ ಮೆಡಿಕಲ್‌ ಯುನಿವರ್ಸಿಟಿ, ಅಸ್ತಾನ ಮೆಡಿಕಲ್‌ ಯುನಿವರ್ಸಿಟಿಗಳು ಕೆಲವು ಹೆಸರಾಂತ ಸಂಸ್ಥಗಳಾಗಿದ್ದು ಇಲ್ಲಿ MBBS ವಿದ್ಯಾಭ್ಯಾಸ ಮುಂದುವರೆಸಬಹುದಾಗಿದೆ.

:Medical Counseling Organization (MCC) has published the counseling schedule for National Eligibility cum Entrance Test (NEET-UG) 2022.

Comments are closed.