Pro Kabaddi League 2022 : ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ಗೆ ತವರು ನೆಲದಲ್ಲಿ ಎಷ್ಟು ಪಂದ್ಯಗಳು?.. ಇಲ್ಲಿದೆ “ಕೆಂಪು ಗೂಳಿ”ಗಳ ಕಂಪ್ಲೀಟ್ ಮ್ಯಾಚ್ ಶೆಡ್ಯೂಲ್

ಬೆಂಗಳೂರು : (Pro Kabaddi League 2022 ) ಪ್ರೊ ಕಬಡ್ಡಿ ಲೀಗ್’ನ 6ನೇ ಆವೃತ್ತಿಯ ಚಾಂಪಿಯನ್, “ಕೆಂಪುಗೂಳಿ” ಖ್ಯಾತಿಯ ಬೆಂಗಳೂರು ಬುಲ್ಸ್ ( Bengaluru Bulls) ತಂಡ ಈ ಬಾರಿ ಸ್ಟಾರ್ ರೇಡರ್ ಪವನ್ ಸೆಹ್ರಾವತ್ ಅವರ ಅನುಪಸ್ಥಿತಿಯೊಂದಿಗೆ ಕಣಕ್ಕಿಳಿದಿದೆ.

(Pro Kabaddi League 2022 ) 9ನೇ ಆವೃತ್ತಿಯ ಟೂರ್ನಿಯಲ್ಲಿ (Pro Kabaddi League – 9) ಪವನ್ ಸೆಹ್ರಾವತ್ ತಮಿಳು ತಲೈವಾಸ್ ತಂಡ ಸೇರಿಕೊಂಡಿದ್ದು, ಬುಲ್ಸ್ ತಂಡ ಮತ್ತೆ ಯುವ ಆಟಗಾರರ ಪಡೆಯೊಂದಿಗೆ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಈಗಾಗಲೇ ತೆಲುಗು ಟೈಟನ್ಸ್ ವಿರುದ್ಧ 34-29ರ ಅಂತರದಲ್ಲಿ ಗೆದ್ದು ಶುಭಾರಂಭ ಮಾಡಿರುವ ಬೆಂಗಳೂರು ಬುಲ್ಸ್, ಭಾನುವಾರ ನಡೆಯುವ ತನ್ನ 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್’ನ ಯುವ ಪಡೆಯನ್ನು ಎದುರಿಸಲಿದೆ. ಆತಿಥೇಯ ಬುಲ್ಸ್ ತಂಡ ತನ್ನ ಮುಂದಿನ ಆರು ಲೀಗ್ ಪಂದ್ಯಗಳನ್ನು ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲೇ ಆಡಲಿದ್ದು, ನಂತರದ ನಾಲ್ಕು ಪಂದ್ಯಗಳನ್ನು ಪುಣೆಯ ಬಾಳೇವಾಡಿಯಲ್ಲಿರುವ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಆಡಲಿದೆ.

ಇದನ್ನೂ ಓದಿ : Pro Kabaddi League : ಪ್ರೊ ಕಬಡ್ಡಿ ಲೀಗ್‌ನ ಮೊದಲ ದಿನ ಇರಾನ್ ಆಟಗಾರರು ಕಾಣಲಿಲ್ಲವೇಕೆ..? ಇಲ್ಲಿದೆ ಅಸಲಿ ಗುಟ್ಟು

ಇದನ್ನೂ ಓದಿ : PLK 2022 Bengaluru Bulls : “ಗೂಳಿ” ಇಲ್ಲದೆ ಮೊದಲ ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್

ಇದನ್ನೂ ಓದಿ : Pro Kabaddi 2022 : ಇಂದಿನಿಂದ ಪ್ರೊ ಕಬಡ್ಡಿಆರಂಭ : ಯಾವ ಆಟಗಾರರು ಯಾವ ತಂಡದಲ್ಲಿದ್ದಾರೆ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಪ್ರೊ ಕಬಡ್ಡಿ ಲೀಗ್-9: ಬೆಂಗಳೂರು ಬುಲ್ಸ್ ತಂಡದ ವೇಳಾಪಟ್ಟಿ:

  • Vs ಪುಣೇರಿ ಪಲ್ಟನ್: ಅಕ್ಟೋಬರ್ 09, ರಾತ್ರಿ 9.30ಕ್ಕೆ (ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು)
  • Vs ಬೆಂಗಾಲ್ ವಾರಿಯರ್ಸ್: ಅಕ್ಟೋಬರ್ 12, ರಾತ್ರಿ 7.30ಕ್ಕೆ (ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು)
  • Vs ಯುಪಿ ಯೋಧಾ: ಅಕ್ಟೋಬರ್ 16, ರಾತ್ರಿ 8.30ಕ್ಕೆ (ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು)
  • Vs ತಮಿಳು ತಲೈವಾಸ್: ಅಕ್ಟೋಬರ್ 19, ರಾತ್ರಿ 8.30ಕ್ಕೆ (ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು)
  • Vs ಯು ಮುಂಬಾ: ಅಕ್ಟೋಬರ್ 22, ರಾತ್ರಿ 7.30ಕ್ಕೆ (ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು)
  • Vs ಪಾಟ್ನಾ ಪೈರೇಟ್ಸ್: ಅಕ್ಟೋಬರ್ 23, ರಾತ್ರಿ 7.30ಕ್ಕೆ (ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು)
  • Vs ದಬಾಂಗ್ ಡೆಲ್ಲಿ: ಅಕ್ಟೋಬರ್ 29, ರಾತ್ರಿ 7.30ಕ್ಕೆ (ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)
  • Vs ಜೈಪುರ್ ಪಿಂಕ್ ಪ್ಯಾಂಥರ್ಸ್: ಅಕ್ಟೋಬರ್ 30, ರಾತ್ರಿ 7.30ಕ್ಕೆ (ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)
  • Vs ಹರ್ಯಾಣ ಸ್ಟೀಲರ್ಸ್: ನವೆಂಬರ್ 01, ರಾತ್ರಿ 8.30ಕ್ಕೆ (ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)
  • Vs ಗುಜರಾತ್ ಜೈಂಟ್ಸ್: ನವೆಂಬರ್ 06 (ರಾತ್ರಿ 8.30ಕ್ಕೆ; ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪುಣೆ)

Pro Kabaddi League 2022 Bengaluru Bulls “Red Bull” Complete Match Schedule

Comments are closed.