BIG BREAKING: UGC NET ಪರೀಕ್ಷೆ ಮತ್ತೆ ಮುಂದೂಡಿಕೆ !

0

ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದೆ. ಈ ಹಿಂದೆ ನಿಗದಿಯಾಗಿ ದಂತೆ ಸೆಪ್ಟೆಂಬರ್ 16 ಮತ್ತು 23ರ ನಡುವೆ ನಡೆಯಬೇಕಿದ್ದ ಯುಜಿಸಿ ನೆಟ್ ಪರೀಕ್ಷೆಯನ್ನು ಇದೀಗ ಸಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನಂತರ ಜೂನ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಆದ್ರೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಇಂದು ಯುಜಿಸಿ –ನೆಟ್ ಪರೀಕ್ಷೆಯ ಮುಂದೂಡಿಕೆಯ ಕುರಿತು ಸುತ್ತೋಲೆ ಹೊರಡಿಸಿದೆ. ರೋಲ್ ನಂಬರ್‌, ಪರೀಕ್ಷಾ ಕೇಂದ್ರ, ದಿನಾಂಕ, ಶಿಫ್ಟ್ ಮತ್ತು ಪರೀಕ್ಷೆಯ ಸಮಯವನ್ನು ಸೂಚಿಸುವ ಅಡ್ಮಿಟ್ ಕಾರ್ಡ್‌ಗಳನ್ನ ಡೌನ್‌ಲೋಡ್ ಮಾಡುವುದನ್ನ ಯುಜಿಸಿ-ನೆಟ್ ಪರೀಕ್ಷೆ 2020 ರ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷೆಯ ದಿನಾಂಕದ ಮೊದಲು ಪ್ರಕಟಿಸಲಾಗುತ್ತದೆ.

ಯುಜಿಸಿ ಮಾನ್ಯತೆ ಪಡೆದ ವಿವಿಧ ಭಾರತೀಯ ವಿಶ್ವವಿದ್ಯಾಲಯಗಳು / ಕಾಲೇಜುಗಳು / ಸಂಸ್ಥೆಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕ ಮತ್ತು ಕಿರಿಯ ಸಂಶೋಧನಾ ಫೆಲೋಶಿಪ್ (ಜೆಆರ್ಎಫ್) ಅಥವಾ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆಯನ್ನು ನಿರ್ಧರಿಸಲು ಯುಜಿಸಿ ನೆಟ್ 2020 ಪರೀಕ್ಷೆಗಳನ್ನು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 81 ವಿಷಯಗಳಲ್ಲಿ ಎನ್‌ಟಿಎ ನಡೆಸಲಿದೆ.

Leave A Reply

Your email address will not be published.