NEP Cancelled in Karnataka : ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದ (NEP Cancelled in Karnataka) ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಆರ್‌ಎಸ್‌ಎಸ್ ಅಜೆಂಡಾದ ಭಾಗವಾಗಿರುವ ಎನ್‌ಇಪಿಯನ್ನು ಕೈಬಿಡಬೇಕು ಎಂದು ಸೋಮವಾರ ನಡೆದ ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಈ ವಿಷಯ ಪ್ರಸ್ತಾಪಿಸಿದರು.

ಅದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಎನ್ ಇಪಿ ಕೈಬಿಡಲು ಒಂದಿಷ್ಟು ಸಿದ್ಧತೆ ಅಗತ್ಯ. ಚುನಾವಣಾ ವರ್ಷವಾದ್ದರಿಂದ ಈ ಬಾರಿ ಸಮಯ ಸಿಕ್ಕಿರಲಿಲ್ಲ. ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ತಡವಾಯಿತು. ಮುಂದಿನ ವರ್ಷದಿಂದ ಕರ್ನಾಟಕದಲ್ಲಿ ಎನ್‌ಇಪಿ ರದ್ದು. ಸಂವಿಧಾನಕ್ಕೆ ಪೂರಕವಾದ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ : CM Siddaramaiah : ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಶಿಕ್ಷಣ ನೀತಿ ರದ್ದು: ಸಿಎಂ ಸಿದ್ದರಾಮಯ್ಯ

“ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಎಲ್ಲರೂ ಎನ್‌ಇಪಿಯನ್ನು ವಿರೋಧಿಸುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಬೇರೆ ರಾಜ್ಯಗಳಲ್ಲಿ ಇದು ಜಾರಿಯಾಗಿಲ್ಲ. ಕರ್ನಾಟಕದಲ್ಲಿ ತರಾತುರಿಯಲ್ಲಿ ಜಾರಿ ಮಾಡಿ, ಆ ಮೂಲಕ ದೇಶದ ವಿದ್ಯಾರ್ಥಿಗಳ ಹಿತವನ್ನು ಬಿಜೆಪಿ ಬಲಿಕೊಟ್ಟಿದೆ. ಇದನ್ನೂ ಓದಿ : Sudha Murty : NCERT ಪಠ್ಯಪುಸ್ತಕ ಅಭಿವೃದ್ದಿ ಸಮಿತಿಗೆ ಸುಧಾಮೂರ್ತಿ, ಶಂಕರ್ ಮಹಾದೇವನ್ ಸೇರ್ಪಡೆ

ಎನ್‌ಇಪಿ ಕರಡನ್ನು ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ. ಇದು ಬಹಳ ಹಿಂದೆಯೇ ಸೋರಿಕೆಯಾಗಿತ್ತು. ಈ ಬಗ್ಗೆ ರಾಜ್ಯಸಭೆಯಲ್ಲಿಯೇ ಪ್ರಶ್ನೆ ಎತ್ತಿದ್ದೆ. ಆರ್‌ಎಸ್‌ಎಸ್‌ ತನ್ನ ಗುಪ್ತ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಎನ್‌ಇಪಿ ಅನ್ನು ಬಳಸುತ್ತಿದೆ. ಇದನ್ನು ಕೂಡಲೇ ರದ್ದುಗೊಳಿಸಬೇಕು ಎಂದು ರೆಹಮಾನ್ ಖಾನ್ ಆಗ್ರಹಿಸಿದ್ದಾರೆ.

NEP Cancelled in Karnataka from next academic year: CM Siddaramaiah

Comments are closed.