Raghavendra Rajkumar Birthday : ರಾಘವೇಂದ್ರ ರಾಜ್‌ಕುಮಾರ್‌ ಹುಟ್ಟುಹಬ್ಬ : ತಮ್ಮ ರಾಘುಗೆ ಭಾವನ್ಮಾಕವಾಗಿ ಶುಭಾಶಯ ಕೋರಿದ ಶಿವಣ್ಣ

ಸ್ಯಾಂಡಲ್‌ವುಡ್‌ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ೫೮ನೇ ವರ್ಷದ ಹುಟ್ಟುಹಬ್ಬ (Raghavendra Rajkumar Birthday) ಸಂಭ್ರಮ. ನಟ ರಾಘವೇಂದ್ರ ಅವರಿಗೆ ಕುಟುಂಬಸ್ಥರು, ಸ್ನೇಹಿತರು, ಸಿನಿಗಣ್ಯರು ಸೇರಿದಂತೆ ಅನೇಕರು ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ. ನಟ ಶಿವರಾಜ್‌ಕುಮಾರ್‌ ಅವರು ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಬಹಳ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

ನಟ ಶಿವ ರಾಜ್‌ಕುಮಾರ್‌ ಸೋಶಿಯಲ್‌ ಮೀಡಿಯಾದಲ್ಲಿ, “ತಮ್ಮನಾಗಿ ನನಗೆ ಎಷ್ಟೋ ಬಾರಿ ಶಕ್ತಿ ತುಂಬಿದ್ದೀಯ. ಕುಟುಂಬದ ಪ್ರತಿಯೋಬ್ಬರ ಜೊತೆಗೂ ಸ್ಫೂರ್ತಿಯಾಗಿ ನಿಂತಿದ್ದೀಯ. ಯಶಸ್ಸು, ಆಯಸ್ಸು, ಸುಖ, ಸಂತೋಷ, ಎಲ್ಲವೂ ನಿನ್ನ ಪಾಲಿಗಿರಲಿ. ಹುಟ್ಟುಹಬ್ಬದ ಶುಭಾಶಯಗಳು ರಾಘು” ಎಂದು ಬಹಳ ಭಾವನ್ಮಾಕವಾಗಿ ಬರೆದು ಫೋಸ್ಟ್‌ ಮಾಡಿದ್ದಾರೆ.

ಮೊದಲಿನಿಂದಲೂ ಕರುನಾಡ ಜನತೆ ಡಾ. ರಾಜ್‌ಕುಮಾರ್‌ ಅವರ ಮನೆಯವರು ಅನ್ಯೋನ್ಯತೆಯನ್ನು ಕಂಡು ಖುಷಿಪಟ್ಟಿದ್ದಾರೆ. ಎಲ್ಲೆ ಹೋದರೂ ಜೊತೆಯಾಗಿ ಅಣ್ಣ ತಮ್ಮಂದಿರು ಸದಾ ಖುಷಿ ಖುಷಿಯಾಗಿ ಇರುತ್ತಿದ್ದರು. ಆದರೆ ತಮ್ಮ ಪುನೀತ್‌ ರಾಜ್‌ಕುಮಾರ್‌ ಅವರ ಅಗಲಿಕೆಯಿಂದ ಕಣ್ಣೀರಿನಲ್ಲಿ ಮುಳುಗಿದ್ದರು. ಸದ್ಯ ಅಪ್ಪು ನೆನಪಿನೊಂದಿಗೆ ತಮ್ಮ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ನಟ ರಾಘವೇಂದ್ರ ರಾಜ್‌ಕುಮಾರ್ ಆಗಸ್ಟ್ 15,1965ರಂದು ಡಾ.ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ಮಗನಾಗಿ ಜನಿಸಿದ್ದರು. ಕನ್ನಡ ಸಿನಿರಂಗದಲ್ಲಿ ಉತ್ತಮ ನಟ, ಗಾಯಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ನಟ ರಾಘವೇಂದ್ರ ರಾಜ್‌ಕುಮಾರ್ ಚಿರಂಜೀವಿ ಸುಧಾಕರ್ (1988) ಸಿನಿಮಾದಲ್ಲಿ ನಾಯಕರಾಗಿ ಪಾದಾರ್ಪಣೆ ಮಾಡಿದರು. ಆದರೆ 1989 ರಲ್ಲಿ ತೆರೆಕಂಡ ನಂಜುಂಡಿ ಕಲ್ಯಾಣದಲ್ಲಿ ಕಾಣಿಸಿಕೊಳ್ಳುವ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ. ಇದನ್ನೂ ಓದಿ : Yajamana Premier League Season-2 : YPL ಗೆದ್ದ ಕೋಟಿಗೊಬ್ಬ ಕಿಂಗ್ಸ್… ಸೂರ್ಯವಂಶ ಸ್ಟ್ರೈಕರ್ಸ್ ರನ್ನರ್ ಅಪ್

ನಂತರ ಅವರು ಗಜಪತಿ ಗರ್ವಭಂಗ (1989), ಅನುಕೂಲಕ್ಕೊಬ್ಬ ಗಂಡ (1990), ಮತ್ತು ಗೆಲುವಿನ ಸರದಾರ (1996) ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಅವರ ಕೊನೆಯ ಪ್ರಮುಖ ಸಿನಿಮಾ ಉಪೇಂದ್ರ ಅವರ ಸ್ವಸ್ತಿಕ್ (1998), ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಪಕ್ಕದ್ಮನೆ ಹುಡುಗಿ (2004) ನಟನೆಯಿಂದ ಹದಿನೈದು ವರ್ಷಗಳ ವಿಶ್ರಾಂತಿ ತೆಗೆದುಕೊಳ್ಳುವ ಮೊದಲು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಿನಿಂದ ಅವರು ಪೂರ್ಣಿಮಾ ಪ್ರೊಡಕ್ಷನ್ಸ್ ಅಡಿಯಲ್ಲಿ ದೂರದರ್ಶನ ಧಾರಾವಾಹಿಗಳನ್ನು ಮತ್ತು ಶ್ರೀ ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

Raghavendra Rajkumar Birthday : Shivanna wished his Raghu emotionally

Comments are closed.