New rule to government workers: ಮೊಮ್ಮಕ್ಕಳಿಗೂ ಸಿಗುತ್ತೆ ಅನುಕಂಪದ ನೆಲೆಯಡಿಯಲ್ಲಿ ಸರಕಾರಿ ಕೆಲಸ: ಹೊಸ ನಿಯಮ ಜಾರಿ

ನವದೆಹಲಿ: (New rule to government workers) ರಾಜ್ಯ ಸರ್ಕಾರವು ಪ್ರೌಢ ಶಿಕ್ಷಣ ಕಾಯಿದೆ, 1921 ಅನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರಿ ಉದ್ಯೋಗಿಗಳಿಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಹೊಸ ವ್ಯವಸ್ಥೆಯ ಪ್ರಕಾರ, ರಾಜ್ಯದ ಸರಕಾರಿ ಶಾಲೆಗಳ ಸಿಕ್ಷಕರು ಮತ್ತು ಭೋದಕೇತರ ಸಿಬ್ಬಂದಿಯ ಮರಣದ ನಂತರ ಅವರ ಅವಲಂಬಿತ ಮೊಮ್ಮಕ್ಕಳಿಗೆ ಅನುಕಂಪದ ನೆಲೆ ಆಧಾರದ ಮೇಲೆ ಕೆಲಸ ಸಿಗಲಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವು ‘ಅನುಕಂಪದ ನೆಲೆಯಲ್ಲಿ’ ಉದ್ಯೋಗಗಳಿಗೆ ಹೊಸ ನಿಯಮ (New rule to government workers)ವನ್ನು ಪ್ರಕಟಿಸಿದ್ದು ಅನುಕಂಪದ ನೆಲೆ ಆಧಾರದ ಮೇಲೆ ಮರಣ ಹೊಂದಿದ ಉದ್ಯೋಗಿಗಳ ಅವಲಂಬಿತ ಮೊಮ್ಮಕ್ಕಳಿಗೆ ಕೆಲಸ ಸಿಗಲಿದೆ. ಇದರರ್ಥ ಉತ್ತರ ಪ್ರದೇಶದ 4,512 ಸರ್ಕಾರಿ ಅನುದಾನಿತ ಶಾಲೆಗಳ ಯಾವುದೇ ಉದ್ಯೋಗಿ ಸಾವನ್ನಪ್ಪಿದರೆ ಮೊಮ್ಮಕ್ಕಳು ಆ ಶಾಲೆಯಲ್ಲಿ ಕೆಲಸ ಪಡೆಯುತ್ತಾರೆ ಎಂದು.

ಇಲ್ಲಿಯವರೆಗೆ ಮರಣ ಹೊಂದಿದ ಉದ್ಯೋಗಿಗಳ ಮಗ, ಅವಿವಾಹಿತ ಮಗಳು ಅಥವಾ ವಿಧವೆ ಮಗಳನ್ನು ಮಾತ್ರ ಸರಕಾರಿ ಉದ್ಯೋಗಗಳಿಗೆ ಅವಲಂಬಿತರು ಎಂದು ಪರಿಗಣಿಸಲಾಗುತ್ತಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವು ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಅನುಕಂಪದ ನೆಲೆ ಆಧಾರದ ಮೇಲೆ ಮರಣ ಹೊಂದಿದ ಸಿಬ್ಬಂದಿಯ ಅವಲಂಬಿತ ಮೊಮ್ಮಕ್ಕಳಿಗೂ ಕೆಲಸ ಸಿಗಲಿದೆ.

ತಿದ್ದುಪಡಿ ಮಾಡಲಾದ ಮಾರ್ಗಸೂಚಿಗಳ ಪ್ರಕಾರ, “ಹೆಂಡತಿ ಅಥವಾ ಪತಿ, ಮಗ ಅಥವಾ ದತ್ತುಪುತ್ರ, ಹೆಣ್ಣುಮಕ್ಕಳು, ವಿಧವೆ ಸೊಸೆ, ಅವಲಂಬಿತ ಅವಿವಾಹಿತ ಸಹೋದರ, ಅವಿವಾಹಿತ ಸಹೋದರಿ ಅಥವಾ ವಿಧವೆ ತಾಯಿ, ಇವುಗಳಲ್ಲಿ ಯಾರಾದರೂ ಸತ್ತವರ ಅಸ್ತಿತ್ವದಲ್ಲಿಲ್ಲದ ಸಂದರ್ಭದಲ್ಲಿ, ಅವಲಂಬಿತ ಮೊಮ್ಮಗ ಅಥವಾ ಅವಿವಾಹಿತ ಮೊಮ್ಮಗಳಿಗೆ ಈ ಕೆಲಸದ ಅಪಾಯಿಂಟ್‌ಮೆಂಟ್‌ ದೊರೆಯುತ್ತದೆ”.

ಇದನ್ನೂ ಓದಿ : ISRO Recruitment 2022:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗಾವಕಾಶ : 56,100ರೂ. ವೇತನ

ಇದನ್ನೂ ಓದಿ : IISc Recruitment 2022:ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗಾವಕಾಶ: 25,000 ವೇತನ, ಕೂಡಲೇ ಅರ್ಜಿ ಸಲ್ಲಿಸಿ

(New rule to government workers) The state government has implemented a new system for government employees by amending the Secondary Education Act, 1921. According to the new system, after the death of the teachers and non-government staff of the state government schools, their dependent grandchildren will get employment on compassionate grounds.

Comments are closed.