PU College Start : ಜುಲೈ 15ರಿಂದ ಪಿಯು ಕಾಲೇಜುಗಳು ಆರಂಭ : ಪಿಯು ಬೋರ್ಡ್‌ನಿಂದ ಆದೇಶ

ಬೆಂಗಳೂರು : ಕೊರೊನಾ ವೈರಸ್‌ ಸೋಂಕಿನ ನಡುವಲ್ಲೇ 2021-22ನೇ ಸಾಲಿನ ಪಿಯುಸಿ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಪಿಯುಸಿ ಬೋರ್ಡ್ ಆದೇಶ ಹೊರಡಿಸಿದೆ. ಜುಲೈ 15 ರಿಂದಲೇ ಪಿಯುಸಿ ವಿದ್ಯಾರ್ಥಿ ಗಳಿಗೆ ಆನ್‌ಲೈನ್‌ ಮೂಲಕ ಪಠ್ಯ ಬೋಧನೆ ಆರಂಭವಾಗಲಿದೆ.

ಪಿಯು ಕಾಲೇಜಗಳ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗೂಗಲ್‌ ಮೀಟ್‌, ಝೂಮ್‌, ಎಂಎಸ್‌ ಟೀಮ್‌ ಸೇರಿದಂತೆ ಹಲವು ಆಪ್‌ ಗಳ ಮೂಲಕ ಪಠ್ಯಬೋಧನೆಯನ್ನು ಮಾಡುವಂತೆ ಸೂಚಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳ ಹಾಜರಾತಿಯ ಮಾಹಿತಿಯನ್ನು ಕಡ್ಡಾಯವಾಗಿ ಪ್ರಾಂಶುಪಾಲರಿಗೆ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ.

ಉಪನ್ಯಾಸಕರು ತಲಾ 20 ಮಕ್ಕಳ ತಂಡವನ್ನು ರಚಿಸಿಕೊಂಡು ಪಠ್ಯಬೋಧನೆಯನ್ನು ಮಾಡಬೇಕು. ಒಂದೊಮ್ಮೆ ಉಪನ್ಯಾಸಕರ ಕೊರತೆ ಇದ್ರೆ ಸಮೀಪದ ಕಾಲೇಜುಗಳ ಸಹಕಾರವನ್ನು ಪಡೆಯಬೇಕು. ಈ ಕುರಿತು ಜಿಲ್ಲಾ ಉಪನಿರ್ದೇಶಕರು ಅಗತ್ಯಕ್ರಮವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಪಿಯು ಮಂಡಳಿ ಸದ್ಯಕ್ಕೆ ಆನ್‌ಲೈನ್‌ ಮೂಲಕವೇ ಕಾಲೇಜುಗಳನ್ನು ಆರಂಭಿಸಿದ್ದು, ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರವೇ ಆಪ್‌ಲೈನ್‌ ತರಗತಿ ನಡೆಸುವ ಸಾಧ್ಯತೆಯಿದೆ.

ಇನ್ನು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಾಠಬೋಧನೆಯ ಕುರಿತು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೊದಲ ನೇ ಅವಧಿ ಬೆಳಗ್ಗೆ10 ಗಂಟೆಯಿಂದ 11ರ ವರೆಗೆ, ಎರಡನೇ ಅವಧಿ 11ರಿಂದ 12, ಮಧ್ಯಾಹ್ನ 12 ರಿಂದ 12.30ರ ವರೆಗೆ ವಿರಾಮವನ್ನು ನೀಡಲಾಗುತ್ತಿದ್ದು, 12.30 ರಿಂದ 1.30ರ ವರೆಗೆ ಮೂರನೇ ಅವಧಿ ಹಾಗೂ ನಾಲ್ಕನೇ ಅವಧಿ ಮಧ್ಯಾಹ್ನ1.30 ರಿಂದ 2.30ರ ವರೆಗೆ ನಡೆಯಲಿದೆ.

Comments are closed.