Cm Jagan: ತೆರೆಗೆ ಬರಲಿದೆ ಆಂಧ್ರ ಸಿಎಂ ಲೈಫ್ ಸ್ಟೋರಿ….! ಜಗನ್ ಮೋಹನ್ ರೆಡ್ಡಿ ಪಾತ್ರದಲ್ಲಿ ನಟಿಸೋದ್ಯಾರು ಗೊತ್ತಾ?!

ರಾಜಕೀಯ ನಾಯಕರ ಜೀವನಕತೆ  ಸಿನಿಮಾ ರೂಪದಲ್ಲಿ ತೆರೆಗೆ ಬರ್ತಿರೋದು ಇದೇ ಮೊದಲಲ್ಲ. ಜಯಲಲಿತಾ ಸೇರಿದಂತೆ ಹಲವು ನಾಯಕರ ಕತೆಗಳು ತೆರೆ ಮೇಲೆ ಬಂದು ಸಂಚಲನ ಮೂಡಿಸಿದೆ. ಈಗ  ಆ ಸಾಲಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನಗಾಥೆಯೂ ಸೇರ್ಪಡೆಗೊಳ್ಳಲಿದೆ.

ಜಗನ್ ಮೋಹನ್ ರೆಡ್ಡಿ…ಯಾವ ಸಿನಿಮಾ ಕತೆಗೂ ಕಮ್ಮಿಯಿಲ್ಲದ ರೋಚಕ  ತಿರುವುಗಳಿಂದ ಕೂಡಿದ ರಾಜಕೀಯ ನಾಯಕ, ಚಿಕ್ಕವಯಸ್ಸಿನಲ್ಲೇ ಸಿಎಂ ಪಟ್ಟಕ್ಕೇರಿದ್ದ ಹೋರಾಟಗಾರ. ಜಗನ್ ಮೋಹನ್ ರೆಡ್ಡಿ ರಾಜಕೀಯ ಪ್ರವೇಶ, ಪಕ್ಷ ಸ್ಥಾಪನೆ, ಚುನಾವಣೆ,ಸಿಎಂ ಸ್ಥಾನ ಎಲ್ಲವೂ ಅಪ್ಪಟ ಹೋರಾಟದ ಫಲ.

ಸಿನಿಮಾಗಳಂತೆ ರೋಚಕತೆಯನ್ನು ಹೊಂದಿ ಜಗನ್ ಕತೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು ಸಿದ್ಧತೆ ನಡೆದಿದೆ. ಜಗನ್ ಲೈಫ್ ಸ್ಟೋರಿ ಪ್ಯಾನ್ ಇಂಡಿಯಾ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದ್ದು, ಇದಕ್ಕಾಗಿ ಬಾಲಿವುಡ್ ನ ಪ್ರತಿಭಾನ್ವಿತ ನಟ ಪ್ರತೀಕ್ ಗಾಂಧಿಯನ್ನು ಜಗನ್ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಜಗನ್ ಮೋಹನ್ ರೆಡ್ಡಿ ತಂದೆ ವೈಎಸ್ಆರ್ ರಾಜಶೇಖರ್ ರೆಡ್ಡಿ ಜೀವನಕತೆಯೂ ಯಾತ್ರಾ ಹೆಸರಿನಲ್ಲಿ ಸಿನಿಮಾವಾಗಿತ್ತು. ಈ ಸಿನಿಮಾ ನಿರ್ಮಿಸಿದ  ವಿ.ರಾಘವ್ ಜಗನ್ ಸಿನಿಮಾ ನಿರ್ಮಿಸಲು ಸಿದ್ಧವಾಗಿದ್ದಾರೆ.

ಸಿಎಂ ರಾಜಶೇಖರ್ ರೆಡ್ಡಿ ವಿಮಾನಅಪಘಾತದಲ್ಲಿ ಕಣ್ಮರೆಯಾಗಿದ್ದು, ಬಳಿಕ ಜಗನ್ ಮೋಹನ್ ರೆಡ್ಡಿಯನ್ನು ಪಕ್ಷ ನಡೆಸಿಕೊಂಡ ರೀತಿ. ಅದರಿಂದ ಹೊರಬಂದ ಜಗನ್ ಹಲವು ಪ್ರಕರಣಗಳಲ್ಲಿ ಆರೋಪಿ ಸ್ಥಾನಕ್ಕೆರಿ ಜೈಲುವಾಸಕ್ಕೆ ತುತ್ತಾದರು.

ಜೈಲಿನಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸಿ ಭಾರಿ ಬಹುಮತದಿಂದ ಚುನಾವಣೆ ಗೆದ್ದು ಚಿಕ್ಕ ವಯಸ್ಸಿನಲ್ಲೇ ಸಿಎಂ ಸ್ಥಾನಕ್ಕೆ ಏರಿದ್ದು ಎಲ್ಲವೂ ತೆರೆಗೆ ಬರಲಿದೆ. ಪ್ರಸ್ತುತ ರಾವಣ್ ಲೀಲಾದಲ್ಲಿ ನಟಿಸುತ್ತಿರುವ ಪ್ರತೀಕ್ ಗಾಂಧಿ  ಶೂಟಿಂಗ್ ಮುಗಿಸುತ್ತಿದ್ದಂತೆ ಜಗನ್ ಮೋಹನ್ ರೆಡ್ಡಿ ಲೈಫ್ ಸ್ಟೋರಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಇನ್ನು ಸಿನಿಮಾ ಟೈಟಲ್ ಕೂಡ ಪೈನಲ್ ಆಗಬೇಕಿದೆ.

Comments are closed.