PUC practical exam 2022 : ನಾಳೆಯಿಂದ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ: ಕುತೂಹಲ‌ ಮೂಡಿಸಿದೆ ಹಿಜಾಬ್ ಮಕ್ಕಳ ನಡೆ

ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಹೈಕೋರ್ಟ್ ಸೂಚನೆಯ ಬೆನ್ನಲ್ಲೂ ರಾಜ್ಯದ ಹಲವು ಕಾಲೇಜಿನ ಮಕ್ಕಳು ಹಿಜಾಬ್ ಗಾಗಿ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ನಾಳೆಯಿಂದ ಹಿಜಾಬ್ ಗಾಗಿ ಪಟ್ಟು ಹಿಡಿದಿರುವ ಮಕ್ಕಳಿಗೆ ಆತಂಕ ಎದುರಾಗಿದ್ದು ನಾಳೆಯಿಂದ ರಾಜ್ಯದಾದ್ಯಂತ ಪದವಿಪೂರ್ವ ಕಾಲೇಜು ಗಳಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ( PUC practical exam 2022) ಆರಂಭವಾಗಲಿದ್ದು ಹಿಜಾಬ್ ಸಂಘರ್ಷದ ನಡುವೆ ಬಂದಿರೋ ಪರೀಕ್ಷೆ ಮಕ್ಕಳಿಗೆ ಸವಾಲಾಗಿದೆ.

ನಾಳೆಯಿಂದ ರಾಜ್ಯದಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಆರಂಭಗೊಳ್ಳಲಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿ ನೀಡಿದೆ. ಹೀಗಾಗಿ ನಾಳೆಯಿಂದ ಮಾರ್ಚ್ 24 ರವರೆಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪ್ರ್ಯಾಕ್ಟಿಕಲ್ ಎಕ್ಸಾಂ ನಡೆಯಲಿದೆ. ಆದರೆ ವಿದ್ಯಾರ್ಥಿ ಗಳಿಗೆ ಹೈಕೋರ್ಟ್ ಸೂಚನೆಯಂತೆ ಶಾಲಾ ಕಾಲೇಜುಗಳ ಒಳಭಾಗದಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ ಹಿಜಾಬ್ ಗಾಗಿ ಪಟ್ಟು ಹಿಡಿದ ಮಕ್ಕಳಿಗೆ ಪರೀಕ್ಷೆ ಬರೆಯೋದು ಸವಾಲಾಗಿದೆ.

ಹಿಜಾಬ್ ಸಂಘರ್ಷದಿಂದ ಎಕ್ಸಾಂ ಬರೆಯೋದೇ ಹೋದ್ರೆ ಮತ್ತೆ ಪ್ರಾಕ್ಟಿಕಲ್ ಪರೀಕ್ಷೆ ಬರೆಯೋದಕ್ಕೆ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯಮದಂತೆ ಪ್ರಯೋಗಿಕ ಎಕ್ಸಾಂಗೆ ಹಾಜರಾತಿ ಪಡೆಯದವರಿಗೆ ಅಂತಿಮ ಪರೀಕ್ಷೆಗೆ ಅವಕಾಶ ನೀಡಲಾಗೋದಿಲ್ಲ. ಇದು ಇಲಾಖೆಯ ಹಳೆಯ ನಿಯಮ ವಾಗಿದ್ದು ಈಗಲೂ ಇದನ್ನೇ ಪಾಲಿಸಲಾಗುತ್ತಿದೆ. ಹೀಗಾಗಿ ಹಿಜಾಬ್ ಗಾಗಿ ಪಟ್ಟು ಹಿಡಿದು ತರಗತಿಗಳಿಗೂ ಹಾಜರಾಗದೇ ಕುಳಿತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಸಂಕಷ್ಟ ಎದುರಾಗಲಿದೆ. ವಿದ್ಯಾರ್ಥಿಗಳು ಹಿಜಾಬ್ ಸಂಘರ್ಷವನ್ನು ಪರೀಕ್ಷೆಗೆ ಹಾಜರಾಗುತ್ತಾರಾ ಅಥವಾ ಪ್ರಾಯೋಗಿಕ ಪರೀಕ್ಷೆಯನ್ನೇ ಕೈಬಿಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಈ ಮಧ್ಯೆ ಹಿಜಾಬ್ ವಿವಾದದ ನಡುವೆಯೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಇಲಾಖೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದೆ. ಹಿಜಾಬ್ ಸಂಘರ್ಷದಿಂದ ಪದವಿ ಕಾಲೇಜು ರಜೆ ಹಿನ್ನಲೆ ಮೂರು ದಿನ ತಡವಾಗಿ ಪರೀಕ್ಷೆ ಆರಂಭಿಸಲು ಸೂಚನೆ ನೀಡಿದ್ದು ಅಂತೆಯೇ ಫೆ‌‌.21 ರಿಂದ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ. ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶವಿಲ್ಲ. ಪರೀಕ್ಷೆ ತಪ್ಪಿಸಿದರೇ ಮುಂದಿನ ಪರೀಕ್ಷೆಗೆ ಅವಕಾಶವಿಲ್ಲ. ಹೀಗಾಗಿ ನಾಳೆ ಮತ್ತೆ ರಾಜ್ಯದಲ್ಲಿ ಹಿಜಾಬ್ ಸಂಘರ್ಷ ತಾರಕಕ್ಕೇರುವ ಸಾಧ್ಯತೆ ಇದೆ.

ಇದನ್ನೂ ಓದಿ : Lassa Fever: ಯುಕೆ ಜನರಲ್ಲಿ ಆತಂಕ ಮೂಡಿಸಿದ ಲಸ್ಸಾ ಜ್ವರ

ಇದನ್ನೂ ಒದಿ : ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ; ಎಜಿ ನಾವದಗಿ ವಾದ, ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

(PUC practical exam 2022 start tomorrow in between hijab controversy in Karnataka)

Comments are closed.