School Open : ಕರ್ನಾಟಕದಲ್ಲಿ ಅಗಸ್ಟ್‌ 23ರಿಂದ ಶಾಲಾರಂಭ : ಮಾರ್ಗಸೂಚಿಯಲ್ಲಿ ಏನಿದೆ ?

ಬೆಂಗಳೂರು : ರಾಜ್ಯದಲ್ಲಿ ಅಗಸ್ಟ್‌ 23ರಿಂದ ಶಾಲೆಗಳನ್ನು ಆರಂಭಿಸುವ ಕುರಿತು ಅಧಿಕೃತ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ. ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೊನಾ ವೈರಸ್‌ ಸೋಂಕು ಹೆಚ್ಚಿರುವ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಶಾಲೆಗಳು ಆರಂಭವಾಗುವುದಿಲ್ಲ. ಆದರೆ ಶೇ.2ಕ್ಕಿಂತಲೂ ಕಡಿಮೆ ಕೊರೊನಾ ಸೋಂಕು ಇರುವ ಜಿಲ್ಲೆಗಳಲ್ಲಿ ಶಾಲೆಗಳು ಆರಂಭವಾಗಲಿದೆ. ಒಂದೊಮ್ಮೆ ಶಾಲೆಯಲ್ಲಿ ಕೊರೊನಾ ಸೋಂಕು ಕಂಡು ಬಂದರೆ ಅಂತಹ ಶಾಲೆಗಳನ್ನು ಒಂದು ವಾರದ ಮಟ್ಟಿಗೆ ಮುಚ್ಚಲಾಗುತ್ತದೆ. ಒಂದೊಮ್ಮೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇಕಡಾ ಎರಡಕ್ಕಿಂತ ಹೆಚ್ಚಳವಾದ್ರೆ ಅಂತಹ ಸಂದರ್ಭದಲ್ಲಿ ಶಾಲೆಗಳನ್ನು ಬಂದ್‌ ಮಾಡುವುದಾಗಿ ಘೋಷಣೆಯನ್ನ ಮಾಡಿದೆ.

ಶಾಲೆಗಳು ಆರಂಭವಾದರೂ ಕೂಡ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಲು ಸೂಚನೆಯನ್ನು ನೀಡಲಾಗಿದೆ. ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಗೆ ಕೊರೊನಾ ಸೋಂಕು ಇಲ್ಲ ಎನ್ನುವ ದೃಢೀಕರಣ ಪತ್ರವನ್ನು ತರಬೇಕು. ಇನ್ನು ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯ ಗೊಳಿಸಿಲ್ಲ. ಇನ್ನು 9 ರಿಂದ 10ನೇ ತರಗತಿಗಳು ಪ್ರತಿ ದಿನ ಬೆಳಗಿನ ಅವಧಿಯಲ್ಲಿ ಮಾತ್ರವೇ ನಡೆಯಲಿದೆ. ವಿದ್ಯಾರ್ಥಿಗಳು ತಮಗೆ ಅಗತ್ಯವಾಗಿರುವ ಕುಡಿಯುವ ನೀರು, ಉಪಹಾರಗಳನ್ನು ಮನೆಯಿಂದಲೇ ತರಬೇಕು. ಇನ್ನು ಶಾಲೆಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಬಿಸಿನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ1.30ರ ವರೆಗೆ ನಡೆಯಲಿದ್ರೆ ಶನಿವಾರ ಬೆಳಗ್ಗೆ 10 ರಿಂದ 12.50ರ ವರೆಗೆ ತರಗತಿಗಳು ನಡೆಯಲಿದೆ. ಪ್ರತೀ ತರಗತಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳು ಇರುವಂತೆ ನೋಡುಕೊಳ್ಳಬೇಕು. ಹೀಗಾಗಿ ವಿದ್ಯಾರ್ಥಿಗಳ ತಂಡವನ್ನು ರಚಿಸಲು ಸೂಚಿನೆ ನೀಡಲಾಗಿದೆ. ಊಟದ ವಿರಾಮದ ನಂತರ ಶಿಕ್ಷಕರು ೮ನೇ ತರಗತಿ ವಿದ್ಯಾರ್ಥಿಗಳಿಗೆ ಪರ್ಯಾಯ ಬೋಧನಾ ವಿಧಾನದ ಮೂಲಕ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.

Comments are closed.