School Reopen : ಆ.23ರಿಂದ ಶಾಲಾರಂಭ : ನಾಳೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಕೊರೊನಾ ವೈರಸ್‌ ಸೋಂಕಿನ ನಡುವಲ್ಲೇ ಅಗಸ್ಟ್‌ 23ರಿಂದ ರಾಜ್ಯದಲ್ಲಿ ಶಾಲೆಗಳು ಪುನರಾರಂಭಗೊಳ್ಳುತ್ತಿದೆ. ರಾಜ್ಯ ಸರಕಾರ ಈಗಾಗಲೇ ಶಾಲಾರಂಭಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಈ ಕುರಿತು ನಾಳೆ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿದೆ.

ಕರ್ನಾಟಕದ ಗಡಿ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆಗಳು ಆರಂಭಗೊಳ್ಳಲಿವೆ. ಒಂದೊಮ್ಮೆ ಶಾಲಾರಂಭಗೊಂಡ ನಂತರದಲ್ಲಿ ಕೊರೊನಾ ಸೋಂಕು ಹೆಚ್ಚಳವಾದ್ರೆ ಶಾಲೆಗಳನ್ನು ಬಂದ್‌ ಮಾಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಕೊರೊನಾ ಸೋಂಕು ಹೆಚ್ಚಳವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ತೆರೆಯಲು ಈಗಾಗಲೇ ತಜ್ಞರ ಸಮಿತಿ ಸೂಚನೆಯನ್ನು ನೀಡಿದೆ.

ಕೋವಿಡ್‌ ಪಾಸಿಟಿವಿಟಿ ದರ ಶೇ.2 ಕ್ಕಿಂತಲೂ ಕಡಿಮೆ ಇರುವ ಜಿಲ್ಲೆಗಳಲ್ಲಿನ ಶಾಲೆಗಳ ಬಾಗಿಲು ತೆರೆಯಲಿದೆ. ಆರಂಭದಲ್ಲಿ 9-12ನೇ ತರಗತಿ ವರೆಗೆ ಭೌತಿಕ ತರಗತಿಗಳು ಆರಂಭ ಗೊಳ್ಳಲಿದೆ. ಕೊರೊನಾ ವೈರಸ್‌ ಸೋಂಕು ಇಳಿಮುಖವನ್ನು ಕಂಡ್ರೆ ಸಪ್ಟೆಂಬರ್‌ ಮೊದಲ ವಾರದಲ್ಲಿಯೇ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಕೂಡ ಸರಕಾರ ಚಿಂತನೆಯನ್ನು ನಡೆಸಿದೆ. ಅದ್ರಲ್ಲೂ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ತರಗತಿಗಳು ದಿನಬಿಟ್ಟು ದಿನ ನಡೆಯಲಿದ್ದು, ಶಾಲೆಯಲ್ಲಿನ ಮಕ್ಕಳನ್ನು ಬ್ಯಾಚ್‌ನಂತೆ ವಿಂಗಡಿಸಲು ಸರಕಾರ ಸೂಚಿಸಿದೆ.

ಇದನ್ನೂ ಓದಿ :School Reopen : ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲಾರಂಭ ಇಲ್ಲ : ಬಸವರಾಜ್‌ ಬೊಮ್ಮಾಯಿ

ಈಗಾಗಲೇ ಶಾಲೆಯಲ್ಲಿನ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆಯುವಂತೆ ಸೂಚನೆಯನ್ನು ನೀಡಲಾಗಿದೆ. ಅಲ್ಲದೇ ಮಕ್ಕಳ ಪೋಷಕರು ಕೂಡ ಲಸಿಕೆ ಪಡೆಯಬೇಕೆಂದು ಸರಕಾರ ಹೇಳಿದೆ. ಪ್ರಮುಖವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್‌, ಸಾಮಾಜಿಕ ಅಂತರ, ಸ್ಯಾನಿಟೈಸ್‌ ಬಳಕೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಂದ ಅನುಮತಿ ಪತ್ರವನ್ನು ತರಲು ಸೂಚನೆ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಕರಾವಳಿಯ ಶಿಕ್ಷಣ ಸಂಸ್ಥೆಗಳಿಗೆ ಹೊಡೆತ ಕೊಟ್ಟ ಕೊರೊನಾ : ಮಕ್ಕಳನ್ನು ಕಾಲೇಜಿಗೆ ದಾಖಲಿಸಲು ಪೋಷಕರ ಹಿಂದೇಟು

ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್‌ ರಿಪೋರ್ಟ್‌ ಕಡ್ಡಾಯ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ತರಗತಿಗೆ ಹಾಜರಾಗಲು ಅವಕಾಶ, ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಸೋಂಕು ಕಂಡು ಬಂದ್ರೆ ಒಂದು ವಾರ ಶಾಲೆ ಸೀಲ್‌ಡೌನ್‌, ಪಾಸಿಟಿವಿಟಿ ದರ 2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್‌ ಮಾಡಲು ಸೂಚಿಸುವ ಸಾಧ್ಯತೆಯಿದೆ.

ಇದನ್ನೂ ಓದಿ :  10 ದಿನಗಳಲ್ಲಿ 126 ಮಕ್ಕಳಿಗೆ ಒಕ್ಕರಿಸಿದ ಕೊರೊನಾ ಸೋಂಕು : ಶಾಲಾರಂಭದ ಹೊತ್ತಲೇ ಪೋಷಕರಲ್ಲಿ ಆತಂಕ

ಶಾಲೆಗಳಲ್ಲಿ ಮಕ್ಕಳಿಗೆ ನಿತ್ಯವೂ ಥರ್ಮಲ್‌ ಸ್ಕ್ಯಾನಿಂಗ್‌, ಕೊರೊನಾ ಸೋಂಕಿತ ಮಕ್ಕಳಿಗೆ ಶಾಲೆಗೆ ನಿರ್ಬಂಧ, ಶಾಲೆಯ ಒಳಗೆ ಜನರಿಗೆ ನಿರ್ಬಂಧ, ಶಾಲಾ ಸುತ್ತಮುತ್ತಲೂ ತಿಂಡಿ ಮಾರಾಟಕ್ಕೆ ನಿಷೇಧ, ಶಾಲೆಯಲ್ಲಿ ಮಕ್ಕಳಿಗೆ ಬಿಸಿನೀರಿನ ವ್ಯವಸ್ಥೆಯ ಜೊತೆಗೆ ವಾರಕ್ಕೊಂದು ಬಾರಿ ಮಕ್ಕಳು ಹಾಗೂ ಶಿಕ್ಷಕರ ಆರೋಗ್ಯ ತಪಾಸಣೆ ಮಾಡಿಸುವಂತೆ ಮಾರ್ಗಸೂಚಿ ಯಲ್ಲಿ ಸೂಚಿಸುವ ಸಾಧ್ಯತೆಯಿದೆ.

Comments are closed.