ಹಡಿಲು ಭೂಮಿಯಲ್ಲಿ ಕೃಷಿ, ಅನಾಥಾಶ್ರಮಕ್ಕೆ ಅಕ್ಕಿ ವಿತರಣೆ : ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

ಕೋಟ : ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ಮಾಡೋದು ಮಾಮೂಲು ಆದರೆ. ಉಡುಪಿ ಜಿಲ್ಲೆಯ ಕೋಟದಲ್ಲಿರುವ ಅಘೋರೇಶ್ವರ ಕಲಾರಂಗದ ಸದಸ್ಯರು ಮಾತ್ರ ವಿಭಿನ್ನ. ಹಡಿಲು ಭೂಮಿಯಲ್ಲಿ ಕೃಷಿ ಮಾಡಿ ಅದರಿಂದ ಬಂದ ಸುಮಾರು ನಾಲ್ಕು ಕ್ವಿಂಟಾಲ್‌ ಅಕ್ಕಿಯನ್ನು ಅನಾಥಾಶ್ರಮಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಅಘೋರೇಶ್ವರ ಕಲಾರಂಗ ಕಳೆದ ಹಲವು ವರ್ಷಗಳಿಂದಲೂ ಹಡಿಲು ಭೂಮಿಯಲ್ಲಿ ಕೃಷಿ ಕಾಯಕವನ್ನು ಮಾಡುವ ಮೂಲಕ ಕೃಷಿಕರಿಗೆ ಉತ್ತೇಜನವನ್ನು ನೀಡುತ್ತಿದೆ. ಇನ್ನೊಂದೆಡೆಯಲ್ಲಿ ಬಡವರಿಗೆ, ಅನಾಥರಿಗೆ ನೆರವಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾರ್ತಟ್ಟು ಚಿತ್ರಪಾಡಿಯಲ್ಲಿ ಅಘೋರೇಶ್ವರ ಕಲಾರಂಗದ ವಠಾರದಲ್ಲಿ ವಿಭಿನ್ನವಾಗಿ ಸ್ವಾಂತ್ರ್ಯೋತ್ಸವ ಆಚರಿಸಲಾಯಿತು.

ನಿವೃತ್ತ ಸೈನಿಕರಾದ ಶರತ್ ಕುಮಾರ್ ಕೆ. ಅವರು ಧ್ವಜಾರೋಹಣವನ್ನು ನೆರವೇರಿಸಿದರು. ವರ್ಷಂಪ್ರತಿಯಿಂದ ಈ ಬಾರಿಯೂ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾರಂಗದ ಸದಸ್ಯರೆ ಹಡಿಲು ಬಿದ್ದ ಭೂಮಿಯನ್ನು ಕೃಷಿ ಮಾಡಿ ಅದರಿಂದ ಬಂದ ಸುಮಾರು 4 ಕ್ವಿಂಟಾಲ್ ಅಕ್ಕಿಯನ್ನು ಕೊಳಲಗಿರಿ ತೆಂಕಬೆಟ್ಟಿನಲ್ಲಿರುವ ಸ್ಪಂದನ ಬೌದ್ಧಿಕ ದಿವ್ಯಾಂಗರ ಪುನರ್ವಸತಿ ಕೇಂದ್ರಕ್ಕೆ ನೀಡಲಾಯಿತು. ಅಕ್ಕಿಯನ್ನು ಪುನರ್ವಸತಿ ಕೇಂದ್ರ ದ ಶಿಕ್ಷಕರಿಗೆ ಹಸ್ತಾಂತರಿಸಿದರು. ಶ್ರೀಮತಿ ಮಾಲತಿ ಮತ್ತು ನಾರಾಯಣ ನಾಯರಿ ಯವರು ಕೊಡಮಾಡಿದ ಮಿಕ್ಸರ್ ಗ್ರೈಂಡರ್ ನ್ನು ಕಲಾರಂಗದ ಸದಸ್ಯರಾದ ನಿತ್ಯಾನಂದ ನಾಯರಿ ಯವರು ಹಸ್ತಾಂತರಿಸಿದರು.

ಅಘೋರೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಚಂದ್ರ ಶೇಖರ ಕಾರಂತರು ಶುಭ ಹಾರೈಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯಾತ್ ನ ಸದಸ್ಯರಾದ ಶ್ಯಾಮ ಸುಂದರ್ ನಾಯರಿ ಹಾಗೂ ಸುಕನ್ಯ ಜಗದೀಶ್ ಶೆಟ್ಟಿ, ಪಾಂಚಜನ್ಯ ಯುವಕ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಉಪಸ್ಠಿತರಿದ್ದರು. ಅಘೋರೇಶ್ವರ ಕಲಾರಂಗದ ಅಧ್ಯಕ್ಷ ಲಕ್ಷ್ಮಣ ನಾಯರಿ ಸ್ವಾಗತಿಸಿ, ರಾಧಾಕೃಷ್ಣ ಬ್ರಹ್ಮಾವರ ರವರು ವಂದಿಸಿದರು. ಕಲಾಕಲಾರಂಗದ ಸದಸ್ಯರಾದ ಪ್ರಭಾಕರ್ ನಾಯರಿ, ಕಾರ್ಯದರ್ಶಿ ನಾಗರಾಜ್ ಐತಾಳ್ ಹಾಗೂ ಕಲಾರಂಗದ ಸದಸ್ಯರು ಉಪಸ್ಥಿತರಿದ್ದರು.

Comments are closed.