Robot Teacher : ಶಿಕ್ಷಕರ ಬದಲು ತರಗತಿಗೆ ಬಂತು ರೋಬೋ : ಮೊದಲ‌ ಪ್ರಯೋಗ ಯಶಸ್ವಿ

ಬೆಂಗಳೂರು : ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು, ಪ್ರಾಂಶುಪಾಲರು ಕ್ಲಾಸ್ ತೆಗೆದುಕೊಳ್ಳೋದು ಕಾಮನ್.ಆದರೆ ನಿನ್ನೆ ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ವಿಶೇಷವಾದವರೊಬ್ಬರು ಪಾಠ ಮಾಡಿದ್ರು. ಅಷ್ಟೇ ಅಲ್ಲ‌ ಮಕ್ಕಳು ಕೇಳಿದ ಪ್ರಶ್ನೆಗಳಿಗೂ ಉತ್ತರ ನೀಡಿದ್ರು. ಅದ್ಯಾರು ಅಂದ್ರಾ ಮತ್ಯಾರೂ ಅಲ್ಲ ಮಾನವ ನಿರ್ಮಿತ ರೋಬೋಟ್ (Robot Teacher ).

ಹೌದು ಪ್ರಯೋಗಾರ್ಥವಾಗಿ ಬೆಂಗಳೂರಿನಲ್ಲಿ ಮಾನವ ನಿರ್ಮಿತ ರೋಬೋಟ್ (Robot Teacher) ನಿಂದ ಬೋದನೆ ನಡೆಯಿತು. ಬೆಂಗಳೂರಿನ ಮಲ್ಲೇಶ್ವರಂ‌ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಈ ಬೋಧನಾ ಪ್ರಯೋಗಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಕೂಡ ಸಾಕ್ಷಿಯಾದರು. ಸಚಿವರು ಹಾಗೂ ಶಿಕ್ಷಕರ ಮುಂದೆಯೇ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪಾಠ ಮಾಡಿತು. ಮಾತ್ರವಲ್ಲ ವಿದ್ಯಾರ್ಥಿಗಳ ಪ್ರಶ್ನೆಗೆ ಸಮಂಜಸವಾದ ಉತ್ತರವನ್ನು ನೀಡಿತು. ವಿದ್ಯಾರ್ಥಿಗಳಿಗೆ ಪಾಠ ಮಾಡಿದ ರೋಬೋ ಬೋಧನೆಯಲ್ಲಿ ಚಾಕಚಕ್ಯತೆಯಿಂದ ತೋರಿದ್ದಲ್ಲದೇ ತರಗತಿ ತೆಗೆದುಕೊಂಡು ವಿದ್ಯಾರ್ಥಿಗಳ ಅನುಮಾನಕ್ಕೂ ಉತ್ತರ ನೀಡಿ ಮೆಚ್ಚುಗೆ ಗಳಿಸಿದೆ‌

ಪಾಠ- ಪ್ರವಚನಗಳಲ್ಲಿ ಬೋಧಕರಿಗೂ ವಿದ್ಯಾರ್ಥಿಗಳಿಗೂ ಸಹಕಾರಿಯಾಗಲು ಹಾಗೂ ಮಕ್ಕಳ ಕಲಿಕೆ ಸುಲಭವಾಗಿಸಲು `ಈಗಲ್’ ರೋಬೋ ಸಿದ್ಧ ಪಡಿಸಲಾಗಿದೆ. ಈಗಲ್ ರೋಬೋ ಪರೀಕ್ಷಾರ್ಥ ಮೊದಲ ಪ್ರಾತ್ಯಕ್ಷಿಕೆ ಯಶಸ್ವಿಯಾದಂತಾಗಿದ್ದು, ಈ ಮೊದಲ ಪ್ರಯತ್ನಕ್ಕೆ ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರಕಾರಿ ಪ್ರೌಢಶಾಲೆ ಯಲ್ಲಿ ಸಾಕ್ಷಿಯಾಗಿದೆ. ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ ನಡೆದಿದ್ದರಿಂದ ಸ್ವತಃ ಸಚಿವರೇ ರೋಬೋ ಪಾಠದ ಗುಣಮಟ್ಟ ಅರಿಯಲು ನೆರವಾಗಿದೆ.

ರೋಬೊ‌ ಶಿಕ್ಷಕರಿಗೆ (Robot Teacher)ಪರ್ಯಾಯ ಅಲ್ಲ ಆದರೆ ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ರೋಬೋದಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ರೋಬೋ ಬಳಕೆಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ವಿವರಣೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್, ಕೆಲ‌ವೇ ದಿನಗಳಲ್ಲಿ ಈಗಲ್’ ರೋಬೋ (Robot Teacher) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುತ್ತದೆ. ಅವರಿಂದಲೇ ಈ ಯೋಜನೆಗೆ ಚಾಲನೆ‌ ಕೊಡಿಸುವ ಉದ್ದೇಶ ಇದೆ.

ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿ ಮಾಡುವ ಉದ್ದೇಶ ಇದೆ ಎಂದಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರ ಜೊತೆ ರೋಬೋ (Robot Teacher) ಪಾಠದ ಗಮ್ಮತ್ತು ಸಿಗಲಿದ್ದು, ಇದರಿಂದ ನಿಧಾನಕ್ಕೆ ಶಾಲೆಗಳಲ್ಲಿ ಶಿಕ್ಷಕರ ನೇಮಕವೇ ಮರೆಯಾದರೂ ಅಚ್ಚರಿಯಿಲ್ಲ ಎಂಬ ಆತಂಕ ಶಿಕ್ಷಕ ವಲಯದಲ್ಲಿ ಕೇಳಿ ಬರಲಾರಂಭಿಸಿದೆ.

ಇದನ್ನೂ ಓದಿ : ಪಠ್ಯಕ್ರಮದಲ್ಲಿ ಭಗವದ್ಗೀತೆ : ಹೊಸ ವಿವಾದಕ್ಕೆ ನಾಂದಿ ಹಾಡ್ತಿದೆ ರಾಜ್ಯ ಬಿಜೆಪಿ

ಇದನ್ನೂ ಓದಿ :  ಸಿಬಿಎಸ್‌ಇ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಕ್ಲಿಕ್ ಮಾಡಿ

School Use Robot Teacher for Quality Education in Malleswaram Government School Bangalore

Comments are closed.